ಕರ್ನಾಟಕ

karnataka

ETV Bharat / business

ಖುಣಾತ್ಮಕ ಅಂಕಗಳೊಂದಿಗೆ ಇಂದಿನ ಷೇರು ಮಾರುಕಟ್ಟೆಯ ವಹಿವಾಟು ಅಂತ್ಯ.. - ಬಿಎಸ್‌ಇ ಸೆನ್ಸೆಕ್ಸ್

ಇಂದಿನ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ನ ಬಲದೊಂದಿಗೆ ವಹಿವಾಟು ಪ್ರಾರಂಭವಾಯಿತು. ಆದರೆ, ನಂತರ ಅದು 146.79 ಪಾಯಿಂಟ್‌ಗಳಷ್ಟು ಕುಸಿಯಿತು. ಅದೇ ರೀತಿ ಎನ್‌ಎಸ್‌ಇ ನಿಫ್ಟಿ 112.35 ಅಂಕಗಳು ಕುಸಿತದೊಂದಿಗೆ 18,366.70ರಲ್ಲಿ ವಹಿವಾಟು ನಡೆಸಿದೆ.

Stock Market
ಷೇರು ಮಾರುಕಟ್ಟೆ

By

Published : May 16, 2023, 7:39 PM IST

ಮುಂಬೈ (ಮಹಾರಾಷ್ಟ್ರ):ಎರಡೂ ಎಚ್‌ಡಿಎಫ್‌ಸಿ ಷೇರುಗಳ ಕುಸಿತದಿಂದಾಗಿ, ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಮಂಗಳವಾರ ತಮ್ಮ ಆರಂಭಿಕ ಲಾಭಗಳನ್ನು ಕಳೆದುಕೊಂಡು ರೆಡ್​ ಮಾರ್ಕ್‌ಗೆ ಬಂದು ತಲುಪಿದವು. ಇಂದಿನ ವಹಿವಾಟಿನಲ್ಲಿ, ಬಿಎಸ್‌ಇ ಸೆನ್ಸೆಕ್ಸ್ ಬಲವಾಗಿ ವಹಿವಾಟು ಆರಂಭಿಸಿತು. ಆದರೆ, ನಂತರ ಮಾರುಕಟ್ಟೆಯ ಅಂತಿಮ ಅವಧಿಯಲ್ಲಿ 146.79 ಅಂಕಗಳು ಕುಸಿದು 61932.47ಕ್ಕೆ ತಲುಪಿತು. ಅದೇ ರೀತಿ, ಎನ್‌ಎಸ್‌ಇ ನಿಫ್ಟಿ 112.35 ಅಂಕಗಳು ಕುಸಿತದೊಂದಿಗೆ 18,286.50ಕ್ಕೆ ತಲುಪಿದೆ.

ಹೇಗಿದೆ ಲಾಭ ಹಾಗೂ ನಷ್ಟ?:ಸೆನ್ಸೆಕ್ಸ್ ಕಂಪನಿಗಳ ಪೈಕಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ, ಇಂಡಸ್‌ಇಂಡ್ ಬ್ಯಾಂಕ್, ಲಾರ್ಸನ್ ಆಂಡ್ ಟೂಬ್ರೊ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಭಾರ್ತಿ ಏರ್‌ಟೆಲ್ ಮತ್ತು ಐಟಿಸಿ ಅತಿ ಹೆಚ್ಚು ನಷ್ಟ ಅನುಭವಿಸಿದವು. ಮತ್ತೊಂದೆಡೆ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಬಜಾಜ್ ಫಿನ್‌ಸರ್ವ್, ವಿಪ್ರೋ, ಏಷ್ಯನ್ ಪೇಂಟ್ಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಾಭ ಗಳಿಸಿದವು. ದಕ್ಷಿಣ ಕೊರಿಯಾದ ಕಾಸ್ಪಿ, ಜಪಾನ್‌ನ ನಿಕ್ಕಿ, ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಲಾಭದಾಯಕವಾಗಿವೆ. ಯುಎಸ್ ಮಾರುಕಟ್ಟೆಗಳು ಸೋಮವಾರ ಲಾಭದೊಂದಿಗೆ ಮುಕ್ತಾಯಗೊಂಡವು.

ಇದನ್ನೂ ಓದಿ:ಹೆರಿಗೆ ರಜೆಯನ್ನು ಆರು ತಿಂಗಳಿಂದ 9 ತಿಂಗಳಿಗೆ ಏರಿಸಿ: ನೀತಿ ಅಯೋಗ ಸಲಹೆ

ಡಾಲರ್ ಎದುರು ರೂಪಾಯಿ ಮೌಲ್ಯ:ವಿದೇಶಿ ನಿಧಿಯ ನಿರಂತರ ಒಳಹರಿವಿನಿಂದ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 11 ಪೈಸೆಗಳಷ್ಟು ಏರಿಕೆಯಾಗಿ 82.20ಕ್ಕೆ ತಲುಪಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿನ ದೌರ್ಬಲ್ಯವು, ರೂಪಾಯಿಯ ಲಾಭವನ್ನು ಸೀಮಿತಗೊಳಿಸಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು ಡಾಲರ್ ಎದುರು 82.22ನಲ್ಲಿ ಪ್ರಾರಂಭವಾಯಿತು ಮತ್ತು ನಂತರ 82.20ಕ್ಕೆ ಏರಿತು. ಅದರ ಹಿಂದಿನ ಮುಕ್ತಾಯದ ಬೆಲೆಗಿಂತ 11 ಪೈಸೆಯ ಲಾಭವನ್ನು ದಾಖಲಿಸಿತು.

ಇದನ್ನೂ ಓದಿ:ಭಾರತದಲ್ಲಿ ಸಗಟು ಹಣದುಬ್ಬರ ಮೈನಸ್​ 0.92ಕ್ಕೆ ಇಳಿಕೆ

ಬ್ಯಾರಲ್​ ಕಚ್ಚಾ ತೈಲ ಬೆಲೆ ಗಮನಿಸಿ​:ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 82.31ಕ್ಕೆ ತಲುಪಿತ್ತು. ಈ ನಡುವೆ ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಸ್ಥಾನವನ್ನು ಪ್ರತಿಬಿಂಬಿಸುವ ಡಾಲರ್ ಸೂಚ್ಯಂಕವು ಶೇಕಡಾ 0.06 ರಷ್ಟು ಕುಸಿದಿದ್ದು, 102.37ಕ್ಕೆ ತಲುಪಿದೆ. ಜೊತೆಗೆ ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 0.51 ರಷ್ಟು ಕುಸಿದಿದ್ದು, 75.61 ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ನಿವ್ವಳ 1,685.29 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರು ಮಾರುಕಟ್ಟೆ ಮಾಹಿತಿ ತಿಳಿಸಿದೆ.

ಇದನ್ನೂ ಓದಿ:ಅಸ್ಸೋಂ ಟೀ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​: 1 ವರ್ಷದಲ್ಲಿ 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ

ABOUT THE AUTHOR

...view details