ಮುಂಬೈ: ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಇಂದು ಮಿಶ್ರ ಪ್ರತಿಕ್ರಿಯೆಗಳು ಕಂಡು ಬಂದಿವೆ. ಈ ಪರಿಣಾಮ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಖರೀದಿ ಜೋರಾಗಿದ್ದು, ಈ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಲಾಭ ಗಳಿಸಿದವು. ಬಿಎಸ್‌ಇ 159.54 ಪಾಯಿಂಟ್‌ಗಳ ಏರಿಕೆಯೊಂದಿಗೆ 60851.08 ಪಾಯಿಂಟ್‌ಗಳಿಗೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 61.25 ಪಾಯಿಂಟ್‌ಗಳ ಏರಿಕೆಯೊಂದಿಗೆ 17,905.85 ಕ್ಕೆ ತಲುಪಿತು.
ಪ್ರಮುಖ ಷೇರುಗಳ ಬೆಲೆಯಲ್ಲಿ ಏರಿಕೆ:ಎನ್‌ಟಿಪಿಸಿ, ಹಿಂದೂಸ್ತಾನ್ ಯೂನಿಲಿವರ್, ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಪವರ್ ಗ್ರಿಡ್, ಲಾರ್ಸನ್ ಆ್ಯಂಡ್ ಟೂಬ್ರೊ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಡಿಎಫ್‌ಸಿ ಮತ್ತು ಸೆನ್ಸೆಕ್ಸ್ ಪವರ್ ಗ್ರಿಡ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸನ್ ಆಂಡ್ ಟೂಬ್ರೊ, ಟಿಸಿಎಸ್, ಎಚ್‌ಡಿಎಫ್‌ಸಿ ಸೇರಿದಂತೆ ಕೆಲವು ಷೇರುಗಳು ಆರಂಭಿಕ ಲಾಭ ದಾಖಲಿಸಿದವು.
ಇದನ್ನು ಓದಿ:ಮುಂಬೈ, ದೆಹಲಿಯ ಟ್ವಿಟರ್ ಕಚೇರಿ ಬಂದ್: ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ!
ಮತ್ತೊಂದೆಡೆ, ಆಕ್ಸಿಸ್ ಬ್ಯಾಂಕ್, ಟೈಟಾನ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಹಿನ್ನಡೆ ಕಂಡವು. ಇನ್ನು ಏಷ್ಯಾದ ಮಾರುಕಟ್ಟೆಗಳಲ್ಲಿ, ದಕ್ಷಿಣ ಕೊರಿಯಾ ಮತ್ತು ಚೀನಾ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಹಾಂಕಾಂಗ್ ಮತ್ತು ಜಪಾನ್ ಸಂವೇದಿ ಸೂಚ್ಯಂಕಗಳು ನಷ್ಟದಲ್ಲಿವೆ. ಅಮೆರಿಕದ ಮಾರುಕಟ್ಟೆಗಳು ಸೋಮವಾರ ವ್ಯವಹಾರ ನಿರತವಾಗಿರಲಿಲ್ಲ. ಸೋಮವಾರದ ಆರಂಭದಲ್ಲಿ, ಬಿಎಸ್‌ಇ ಸೆನ್ಸೆಕ್ಸ್ 311.03 ಪಾಯಿಂಟ್ಗಳಷ್ಟು ಇಳಿಕೆ ಕಂಡು 60,691.54 ಪಾಯಿಂಟ್‌ಗಳಲ್ಲಿ ದಿನದ ವ್ಯವಹಾರವನ್ನು ಮುಕ್ತಾಯ ಮಾಡಿತ್ತು.