ಮುಂಬೈ: ಮಿಶ್ರ ಪ್ರವೃತ್ತಿಯೊಂದಿಗೆ ಇಂದಿನ (ಮಂಗಳವಾರದ) ಆರಂಭಿಕ ಪ್ರಮುಖ ಷೇರು ವಹಿವಾಟಿನ ಸೂಚ್ಯಂಕಗಳು ಕಂಡು ಬಂದಿವೆ. ಪ್ರಮುಖವಾಗಿ ಈ ವಾರ ವ್ಯಾಪಾರಿಗಳು ಆರ್‌ಬಿಐನ ಹಣಕಾಸು ನೀತಿ ಮತ್ತು ಅಮೆರಿಕದ ಹಣದುಬ್ಬರದ ಮಾಹಿತಿಗೆ ಎದುರು ನೋಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಇದರ ಜೊತೆಗೆ ವಿದೇಶಿ ನಿಧಿಗಳ ಮಾರಾಟದ ಆಗುತ್ತಿರುವುದು ಸಹ ಮಾರುಕಟ್ಟೆಯ ಏರಿಳಿತಕ್ಕೆ ಕಾರಣವಾಗುತ್ತಿದೆ. ಈ ಅವಧಿಯಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 5.42 ಪಾಯಿಂಟ್‌ಗಳ ಕುಸಿತ ಕಂಡು 65,948.06ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 2.40 ಪಾಯಿಂಟ್ ಏರಿಕೆಯಾಗಿ 19,599.70ಕ್ಕೆ ತಲುಪಿದೆ. ಹಾಗೇ ಸೆನ್ಸೆಕ್ಸ್ 93.4 ಅಂಕ ಕುಸಿದು 65,860.08ಕ್ಕೆ ಮತ್ತು ನಿಫ್ಟಿ 21.05 ಅಂಕ ಕುಸಿದು 19,576.25ಕ್ಕೆ ತಲುಪಿದೆ.
ಪವರ್ ಗ್ರಿಡ್, ಮಹೀಂದ್ರಾ, ಭಾರ್ತಿ ಏರ್‌ಟೆಲ್, ನೆಸ್ಲೆ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಿಸಿಎಸ್, ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಕುಸಿತ ಕಂಡಿವೆ. ಮತ್ತೊಂದೆಡೆ, ಟೈಟಾನ್, ಎಸ್‌ಬಿಐ, ಟಾಟಾ ಸ್ಟೀಲ್, ಎನ್‌ಟಿಪಿಸಿ, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಮೋಟಾರ್ಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಾಭ ಗಳಿಸಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ USD 85.49 ಕ್ಕೆ ಅಂದರೆ 0.18 ಶೇಕಡಾ ಏರಿಕೆಯಾಗಿದೆ.
ಡಾಲರ್ ಎದುರು ರೂಪಾಯಿ ಕುಸಿತ: ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಆರು ಪೈಸೆಗಳಷ್ಟು ಕುಸಿದು 82.81 ಕ್ಕೆ ತಲುಪಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ ಋಣಾತ್ಮಕ ಪ್ರವೃತ್ತಿ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ದೃಢತೆಯಿಂದಾಗಿ ರೂಪಾಯಿ ದುರ್ಬಲಗೊಂಡಿದೆ. ಕಳೆದ ಕೆಲವು ದಿನಗಳಿಂದ ಡಾಲರ್ ಬಲವರ್ಧನೆ ಮತ್ತು ವಿದೇಶಿ ನಿಧಿಗಳ ಮಾರಾಟದಿಂದಾಗಿ ರೂಪಾಯಿಯ ಭಾರಿ ಏರಿಳಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.