ಹೈದರಾಬಾದ್: ನಾವೆಲ್ಲರೂ 2023ನ್ನು ಸ್ವಾಗತಿಸಿದ್ದೇವೆ. ಈಗ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಪರಿಶೀಲಿಸಲು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಇದು ಸರಿಯಾದ ಸಮಯ. ಈ ವರ್ಷ ಯಾವ ಕಾರ್ಯಗಳನ್ನು ಪೂರ್ಣಗೊಳಿಸಬೇಕು? ಅವೆಲ್ಲವನ್ನೂ ಪರಿಶೀಲಿಸಿ ಮತ್ತು ಆರೋಗ್ಯಕರ ಯೋಜನೆ ರೂಪಿಸಿಬೇಕಾಗಿದೆ. ಹಣಕಾಸು ಯೋಜನೆ ಸಿದ್ದಪಡಿಸುವುದು ಒಂದು ದಿನದ ಕೆಲಸವಲ್ಲ. ಅದು ಹಿಂದೆ ನಾವು ಏನು ಸಾಧಿಸಿದ್ದೇವೆ? ಮುಂದೆ ಏನನ್ನು ಸಾಧಿಸಬೇಕು? ಭವಿಷ್ಯದ ಯೋಜನೆಗಳು ನಮ್ಮ ಕಳೆದ ವರ್ಷದ ಆಲೋಚನೆಗಳು ಮತ್ತು ಅನುಭವಗಳ ಅಡಿಪಾಯವನ್ನು ನಮ್ಮ ಹಣಕಾಸು ಯೋಜನೆಗಳು ಆಧರಿಸಿರಬೇಕಾಗುತ್ತದೆ.
ನಿಮ್ಮ 2023ರ ಹಣಕಾಸು ಗುರಿಗಳು ಹೀಗಿದ್ದರೆ ಚಂದ.. ನಿಮಗಾಗಿ ಕೆಲ ಟಿಪ್ಸ್ - etv bharat karnataka
2023ನ್ನು ಸ್ವಾಗತಿಸಿದ್ದೇವೆ ಇಗ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಪರಿಶೀಲಿಸಲು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಇದು ಸರಿಯಾದ ಸಮಯ - ಈ ವರ್ಷದ ಅಂತ್ಯದವರೆಗೆ ಸುಗಮ ಆರ್ಥಿಕ ಪ್ರಯಾಣಕ್ಕಾಗಿ ತಕ್ಷಣವೇ ಈ ಅಂಶಗಳತ್ತ ಗಮನಹರಿಸಿ.
ನಿಮ್ಮ 2023 ರ ಹಣಕಾಸು ಗುರಿಗಳಿಗಾಗಿ ಇಲ್ಲಿವೆ ಕೆಲವು ಉಪಯುಕ್ತ ಅಂಶಗಳು
ಈ ವರ್ಷದ ಅಂತ್ಯದವರೆಗೆ ಸುಗಮ ಆರ್ಥಿಕ ಪ್ರಯಾಣಕ್ಕಾಗಿ ತಕ್ಷಣವೇ ಈ ಅಂಶಗಳತ್ತ ಗಮನಹರಿಸಿ:
- ತುರ್ತು ನಿಧಿಯನ್ನು ಸಜ್ಜುಗೊಳಿಸಿಕೊಳ್ಳುವುದು:ಕನಿಷ್ಠ ಆರು ತಿಂಗಳವರೆಗೆ ಅಗತ್ಯ ಇರುವ ತುರ್ತು ನಿಧಿ ಸಜ್ಜುಗೊಳಿಸುವುದರೊಂದಿಗೆ ಪ್ರಾರಂಭಿಸಿಬೇಕಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ಎಲ್ಲದಕ್ಕೂ ಸಿದ್ಧವಾಗಿರುವುದು ಅತ್ಯಂತ ಮುಖ್ಯವಾದ ವಿಷಯ. ನಿಮ್ಮ ತುರ್ತು ನಿಧಿಯು ಉಳಿತಾಯ ಖಾತೆ, ಲಿಕ್ವಿಡ್ ಮ್ಯೂಚುವಲ್ ಫಂಡ್ ಗಳು ಮತ್ತು ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಗಳ ಮಿಶ್ರಣವಾಗಿದ್ದರೆ ಉತ್ತಮ
- ದೀರ್ಘಾವಧಿ ಹೂಡಿಕೆಯಿಂದ ಲಾಭ:ಹೂಡಿಕೆ ನಿರ್ಧಾರಗಳನ್ನು ಎಂದಿಗೂ ವಿಳಂಬ ಮಾಡಬಾರದು. ಹೂಡಿಕೆಯನ್ನು ಎಷ್ಟು ದಿನಗಳ ಕಾಲ ಮಾಡುತ್ತೇವೆ ಎಂಬುದರ ಮೇಲೆ ಲಾಭವು ಅವಲಂಬಿತವಾಗಿರುತ್ತದೆ. ಆಗ ಮಾತ್ರ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಯಾಗಲು ಸಾಧ್ಯ. ಜನವರಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಡಿಸೆಂಬರ್‌ನಲ್ಲಾದರೂ ಜಾರಿಗೊಳಿಸಿ. ಆಗ ಈ ವರ್ಷ ತೆಗೆದುಕೊಂಡ ನಿರ್ಧಾರವನ್ನು ಮುಂದೂಡದೇ, ಹೂಡಿಕೆಯನ್ನು ಕನಿಷ್ಠ 5-10 ಪ್ರತಿಶತದಷ್ಟು ಹೆಚ್ಚಿಸಿ. ಇದು ನಿಮ್ಮ ಅಪೇಕ್ಷಿತ ಗುರಿಗಳನ್ನು ವೇಗವಾಗಿ ಸಾಧಿಸಲು ಸಹಾಯ ಮಾಡುತ್ತದೆ.
- ತೆರಿಗೆ ವಿನಾಯಿತಿಗಾಗಿ ಸೂಕ್ತ ಯೋಜನೆ:ತೆರಿಗೆ ಯೋಜನೆ ಮುಖ್ಯ. ಆರ್ಥಿಕ ವರ್ಷದ ಆರಂಭದಿಂದಲೇ ತೆರಿಗೆ ವಿನಾಯಿತಿಗಾಗಿ ಸೂಕ್ತ ಯೋಜನೆಗಳನ್ನು ಮಾಡಬೇಕು. ಕಳೆದ 9 ತಿಂಗಳುಗಳಲ್ಲಿ ನೀವು ಯಾವ ಹೂಡಿಕೆಗಳನ್ನು ಮಾಡಿದ್ದೀರಿ ಎಂಬುದನ್ನು ಪರಿಶೀಲಿಸಿ. ಈ ಆರ್ಥಿಕ ವರ್ಷದಲ್ಲಿ ಮೂರು ತಿಂಗಳು ಮಾತ್ರ ಉಳಿದಿದೆ. ಈ ಅವಧಿಯಲ್ಲಿ ಹೂಡಿಕೆಗಳನ್ನು ಪೂರ್ಣಗೊಳಿಸಬೇಕು. ಏಪ್ರಿಲ್ 2023 ರಿಂದ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ.
- ಸತತವಾಗಿ ಹೂಡಿಕೆ ಮುಂದುವರಿಸಿ:ಭಾವನೆಗಳು ಮತ್ತು ಭಯವು ಹಣಕಾಸಿನ ಯೋಜನೆಗಳಿಗೆ ಅಡ್ಡಿಯಾಗುತ್ತದೆ. ಹೂಡಿಕೆಗಳು ಯಾವಾಗಲೂ ದೀರ್ಘಾವಧಿಯ ಗಮನವನ್ನು ಹೊಂದಿರಬೇಕು. ಷೇರುಗಳು ಕುಸಿದಾಗ, ಕೆಲವರು ಆತಂಕಗೊಂಡು ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಸತತವಾಗಿ ಹೂಡಿಕೆ ಮುಂದುವರಿಸಿ. ಸಾಧಿಸಬಹುದಾದ ಗುರಿಗಳನ್ನು ಮಾಡಿ. ಅಗತ್ಯವಿರುವ ಬದಲಾವಣೆಗಳನ್ನು ಮಾಡಿ. ಅದಕ್ಕೆ ತಕ್ಕಂತೆ ಹೂಡಿಕೆಗಳನ್ನು ಯೋಜಿಸಿ. ಸಾಲ ಮತ್ತು ಹೈಬ್ರಿಡ್ ಯೋಜನೆಗಳಂತಹ ಅಲ್ಪಾವಧಿಯ ಹೂಡಿಕೆಗಳು 5 ವರ್ಷಗಳಿಗಿಂತ ಕಡಿಮೆ ಗುರಿಗಳಿಗೆ ಒಳ್ಳೆಯದು. ಈಕ್ವಿಟಿ ಫಂಡ್ಗಳ ಅವಧಿ ಐದು ವರ್ಷಗಳಿಗಿಂತ ಹೆಚ್ಚಿದ್ದಾಗ ಮಾತ್ರ ಸೂಕ್ತವಾಗಿರುತ್ತದೆ.
- ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೂಡಿಕೆ:ಈಕ್ವಿಟಿ, ಸಾಲ, ಚಿನ್ನ, ರಿಯಲ್ ಎಸ್ಟೇಟ್ ಮತ್ತು ಅಂತಾರಾಷ್ಟ್ರೀಯ ನಿಧಿಗಳನ್ನು ಒಳಗೊಂಡಂತೆ ಹೂಡಿಕೆಗಳನ್ನು ವೈವಿಧ್ಯಗೊಳಿಸಬೇಕು. ನಿಮ್ಮ ಅಪಾಯದ ಸಹಿಷ್ಣುತೆ ಆಧಾರದ ಮೇಲೆ ಪ್ರತಿ ಕ್ಷೇತ್ರದಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂದು ಎಚ್ಚರಿಕೆಯಿಂದ ನಿರ್ಧರಿಸಿ. ನಿಮ್ಮ ಹೂಡಿಕೆಗಳ ಕಾರ್ಯಕ್ಷಮತೆ ಯಾವಾಗಲೂ ಒಂದೇ ಆಗಿರುವುದಿಲ್ಲ. ಕೆಲವು ನಿರೀಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು ಆಗ ಕುಗ್ಗದೇ ಮುನ್ನಡೆಯುವ ಸಾಮರ್ಥ್ಯ ನಿಮ್ಮಲ್ಲಿರಬೇಕು.
- ಆರೋಗ್ಯ ವಿಮಾ ಪಾಲಿಸಿ ತೆಗೆದುಕೊಳ್ಳಿ:ನಿಮ್ಮ ವಿಮಾ ಪಾಲಿಸಿಗಳನ್ನು ಒಮ್ಮೆ ಪರಿಶೀಲಿಸುವುದು ಬಹಳ ಮುಖ್ಯ. ನಿಮ್ಮ ಇಡೀ ಕುಟುಂಬದ ಒಟ್ಟಾರೆ ಆರ್ಥಿಕ ಭದ್ರತೆಗಾಗಿ ಟರ್ಮ್ ಪಾಲಿಸಿಯನ್ನು ತೆಗೆದುಕೊಳ್ಳಿ. ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಂಡ ಕನಿಷ್ಠ 5 ಲಕ್ಷ ರೂ.ಗಳ ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಸೂಕ್ತ, ವಿಶೇಷವಾಗಿ ಫ್ಲೋಟರ್ ಪಾಲಿಸಿ ಅಂದರೆ ಸಣ್ಣ ವಯಸ್ಸಿನಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳುವುದರಿಂದ ಕಡಿಮೆ ಪ್ರೀಮಿಯಂನಲ್ಲಿ ಪಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:ಚಿನ್ನ ಬೆಳ್ಳಿ ಖರೀದಿಗೂ ಮುನ್ನ ನಿಮ್ಮ ಹತ್ತಿರದ ನಗರಗಳಲ್ಲಿನ ದರ ಪಟ್ಟಿಯನ್ನೊಮ್ಮೆ ಒಮ್ಮೆ ನೋಡಿ
Last Updated : Jan 2, 2023, 4:12 PM IST