ಹೈದರಾಬಾದ್:ಸೇಲ್ಸ್ ಮ್ಯಾನೇಜರ್ ಆಗಿ ಬಹಳ ನಿಷ್ಠಾವಂತಬಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ಸಂಸ್ಥೆಗೆ ಸಾಕಷ್ಟು ಹೆಸರು, ಲಾಭವನ್ನು ತರುತ್ತಿದ್ದ. ಈ ಪ್ರಕ್ರಿಯೆ ವೇಳೆ ಒತ್ತಡ ನಿವಾರಣೆಗೆ ಆತ ಧೂಮಪಾನ ಚಟಕ್ಕೆ ಬಲಿಯಾದ ಈ ಚಟದಿಂದಾಗಿ ಆತನ ಆರೋಗ್ಯ ಹದಗೆಟ್ಟು, ಕೆಲಸ ವೇಳೆ ಅನಾರೋಗ್ಯಕ್ಕೆ ಒಳಗಾದ. ಸಹೋದ್ಯೋಗಿಗಳು ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ, ಆತನ ದೇಹದ ಎಡಭಾಗ ಗಂಭೀರ ಪಾರ್ಶ್ವವಾಯುಗೆ ತುತ್ತಾಗಿತ್ತು.
ರಾಜೀವ್ ಚಿಕಿತ್ಸೆ ಹಣ ಆರೋಗ್ಯ ವಿಮೆಯಿಂದ ಕಟ್ಟಲಾಯಿತು. ಈ ಆರೋಗ್ಯ ವಿಮೆ ಆತನ ಚಿಕಿತ್ಸೆ ಮಾತ್ರ ಭರಿಸಿತು. ಆದರೆ, ಆತನಿಗೆ ನಿರಂತರ ವೈದ್ಯಕೀಯ ನಿಗಾ ಬೇಕಾಗಿದ್ದು, ಆತ ಕೆಲಸ ಮಾಡಲು ಸಾಧ್ಯವಿಲ್ಲ. ಈ ಎಲ್ಲವೂ ಆತನ ಕುಟುಂಬಕ್ಕೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು.
ಅನೇಕ ಜನರು ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಪ್ಯಾರಾಲಿಸಿಸ್ ನಂತಹ ಗಂಭೀರ ಸಮಸ್ಯೆಗೆ ಗುರಿಯಾಗುತ್ತಾರೆ. ಇದಕ್ಕೆ ಅವರ ಜೀವನ ಶೈಲಿ ಮತ್ತು ಫಾಸ್ಟ್ ಫುಡ್, ಅಭ್ಯಾಸಗಳು ಕೂಡ ಕಾರಣವಾಗುತ್ತದೆ. ಈ ಗಂಭೀರ ಕಾಯಿಲೆಗಳಿಗೆ ಹೆಚ್ಚಿನ ವ್ಯಯವಾಗಲಿದೆ. ಸಾಮಾನ್ಯ ಆರೋಗ್ಯ ವಿಮೆ ಕೇವಲ ಚಿಕಿತ್ಸೆ ಭರಿಸುತ್ತದೆ. ಆರೋಗ್ಯ ವಿಮೆಯಲ್ಲಿ ಕ್ರಿಟಿಕಲ್ ಕೇರ್ ನಿಯಮಗಳನ್ನು ಹೊಂದಿರದಿದ್ದರೆ, ಇಂತಹ ದೀರ್ಘಕಾಲದ ಕಾಯಿಲೆಗಳು, ಹೆಚ್ಚಿನ ಆರ್ಥಿಕ ಕಷ್ಟಕ್ಕೂ ಕಾರಣವಾಗುತ್ತದೆ.
ದೀರ್ಘಾವಧಿ ಕಾಯಿಲೆಗಳ ಸಂಬಂದ ಪರಿಹಾರ:ಕ್ರಿಟಿಕಲ್ ಕೇರ್ ಹೇಲ್ತ್ ಪಾಲಿಸಿ ವಿಮೆ ಹೊಂದಿರುವವರಿಗೂ ದೀರ್ಘಾವಾದಿ ಕಾಯಿಲೆಗಳ ಸಂಬಂಧ ಕಂಪನಿ ಪರಿಹಾರ ನೀಡುತ್ತದೆ. ಈ ಯೋಜನೆಗೆ ಕನಿಷ್ಠ ಹಣ 5 ಲಕ್ಷ ರೂ ಆಗಿದೆ. ಕ್ಯಾನ್ಸರ್, ಹೃದಯ ಶಸ್ತ್ರಚಿಕಿತ್ಸೆ, ಬ್ರೈನ್, ನರ ದೌರ್ಬಲ್ಯ, ಪಾರ್ಶ್ವಾವಾಯು, ಕುರುಡುತನ, ಯಕೃತ್, ಶ್ವಾಸಕೋಶ ಮತ್ತು ಕಿಡ್ನಿಯಂತಹ ನಾಲ್ಕು ರೀತಿಯ ಗಂಭೀರ ಕಾಯಿಲೆಗಳನ್ನು ಕಂಪನಿಗಳು ಈ ವಿಮಾ ಯೋಜನೆ ಅಡಿ ನೀಡುತ್ತದೆ. ವಿಮೆದಾರರು 100ರಷ್ಟು ಇದನ್ನು ಕ್ಲೈಮ್ ಮಾಡಬಹುದು.