ಮುಂಬೈ : ದೇಶೀಯ ಇಕ್ವಿಟಿ ಮಾರುಕಟ್ಟೆಯ ಪ್ರಮುಖ ಕಂಪನಿಯ ಷೇರುಗಳು ಸೋಮವಾರ ಬೆಳಗ್ಗೆ ಲಾಭ ಗಳಿಸಿದವು. ಜಾಗತಿಕ ಆರ್ಥಿಕ ಬೆಳವಣಿಗೆಗಳಲ್ಲಿ ಸಕಾರಾತ್ಮಕ ಮುನ್ಸೂಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ನಿರೀಕ್ಷೆಗಿಂತ ಉತ್ತಮವಾದ ಕಾರ್ಪೊರೇಟ್ ಫಲಿತಾಂಶಗಳು ಮತ್ತು ಚಿಲ್ಲರೆ ಹಣದುಬ್ಬರವು 18 ತಿಂಗಳ ಕನಿಷ್ಠ ಮಟ್ಟಕ್ಕೆ ತಗ್ಗಿರುವುದು ವಾರದ ಆರಂಭದಲ್ಲಿ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ.
ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 153 ಪಾಯಿಂಟ್ ಏರಿಕೆ ಕಂಡು 62,180.87ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 34 ಪಾಯಿಂಟ್‌ಗಳ ಏರಿಕೆ ಕಂಡು 18,348.80ಕ್ಕೆ ತಲುಪಿದೆ. ಕಾಫಿಡೇ, ಬಿಸಿಜಿ, ಇಂಟೆಲೆಕ್ಟ್ ಮತ್ತು ಗ್ರೇಟ್ ಈಸ್ಟರ್ನ್ ಶಿಪ್ಪಿಂಗ್ ಲಾಭ ಗಳಿಸಿದ ಪ್ರಮುಖ ಶೇರುಗಳಾಗಿವೆ. ಡೇಟಾ ಪ್ಯಾಟರ್ನ್, ಡಿಶ್ ಟಿವಿ, ಕಿರ್ಲೋಸ್ಕರ್ ಮತ್ತು ಸೋನಾಟಾ ಸಾಫ್ಟ್‌ವೇರ್ ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ ಬೆಳಗಿನ ವಹಿವಾಟಿನ ಸಮಯದಲ್ಲಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ಏಷ್ಯನ್ ಮಾರುಕಟ್ಟೆಗಳಲ್ಲಿ, ಹಾಂಕಾಂಗ್ ಹಾಂಗ್ ಸೆಂಗ್ 69 ಪಾಯಿಂಟ್‌ಗಳ ಏರಿಕೆ ಕಂಡಿದೆ. ಜಪಾನ್‌ನ ನಿಕ್ಕಿ 112 ಪಾಯಿಂಟ್‌ಗಳನ್ನು ಗಳಿಸಿದೆ, ಚೀನಾದ ಶಾಂಘೈ 10 ಪಾಯಿಂಟ್‌ಗಳನ್ನು ಮತ್ತು ಫಿಲಿಪ್ಪಿನ್ಸ್ ಸ್ಟಾಕ್ ಸೋಮವಾರ 4 ಪಾಯಿಂಟ್‌ಗಳನ್ನು ಕಳೆದುಕೊಂಡಿವೆ. ಅಮೆರಿಕದ ಮಾರುಕಟ್ಟೆಗಳಲ್ಲಿ ಡೌ ಜೋನ್ಸ್ 8.89 ಅಂಕಗಳನ್ನು ಕಳೆದುಕೊಂಡಿತು. ನಾಸ್ಡಾಕ್ 43 ಅಂಕಗಳನ್ನು ಕಳೆದುಕೊಂಡಿತು ಮತ್ತು ಎಸ್ & ಪಿ 500 ಇದು 6 ಅಂಕಗಳನ್ನು ಕಳೆದುಕೊಂಡಿತು.