ಕರ್ನಾಟಕ

karnataka

By

Published : Aug 18, 2023, 7:53 PM IST

ETV Bharat / business

65 ಸಾವಿರದ ಕೆಳಗೆ ಜಾರಿದ ಸೆನ್ಸೆಕ್ಸ್​; 55 ಅಂಕ ಕುಸಿದ ನಿಪ್ಟಿ

Sensex Today: ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡಿವೆ.

Markets see volatile trade
Markets see volatile trade

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಮಂದಗತಿಯ ಪ್ರವೃತ್ತಿಯ ಮಧ್ಯೆ ಹೂಡಿಕೆದಾರರು ಐಟಿ, ಟೆಕ್ ಮತ್ತು ಮೆಟಲ್ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕ ಸೆನ್ಸೆಕ್ಸ್ ಸತತ ಎರಡನೇ ದಿನ ಶುಕ್ರವಾರ 65 ಸಾವಿರಕ್ಕಿಂತ ಕೆಳಗಿಳಿದಿದೆ. ಇದಲ್ಲದೆ, ವಿದೇಶಿ ನಿಧಿಯ ಮತ್ತಷ್ಟು ಹೊರಹರಿವು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದೆ ಎಂದು ಷೇರು ವ್ಯಾಪಾರಿಗಳು ತಿಳಿಸಿದ್ದಾರೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 202.36 ಪಾಯಿಂಟ್ಸ್ ಅಥವಾ ಶೇಕಡಾ 0.31 ರಷ್ಟು ಕುಸಿದು 64,948.66 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್​ 396.3 ಪಾಯಿಂಟ್ ಅಥವಾ ಶೇಕಡಾ 0.60 ರಷ್ಟು ಕುಸಿದು 64,754.72 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 55.10 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಕುಸಿದು 19,310.15 ಕ್ಕೆ ತಲುಪಿದೆ.

ವಾರದ ಆಧಾರದಲ್ಲಿ ನೋಡುವುದಾದರೆ, ಬಿಎಸ್ಇ 373.99 ಪಾಯಿಂಟ್​​ ಅಥವಾ ಶೇಕಡಾ 0.57 ರಷ್ಟು ಕುಸಿದರೆ, ನಿಫ್ಟಿ 118.15 ಪಾಯಿಂಟ್​​ ಅಥವಾ ಶೇಕಡಾ 0.60 ರಷ್ಟು ಕುಸಿದಿದೆ. ಸೆನ್ಸೆಕ್ಸ್​ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇಕಡಾ 2.14 ರಷ್ಟು ಕುಸಿದರೆ, ಟೆಕ್ ಮಹೀಂದ್ರಾ, ಮಹೀಂದ್ರಾ & ಮಹೀಂದ್ರಾ, ಇನ್ಫೋಸಿಸ್, ಪವರ್ ಗ್ರಿಡ್, ವಿಪ್ರೋ, ಬಜಾಜ್ ಫಿನ್ ಸರ್ವ್ ಮತ್ತು ಬಜಾಜ್ ಫೈನಾನ್ಸ್ ಕೂಡ ಕುಸಿತ ಕಂಡಿವೆ.

ಇದಕ್ಕೆ ವ್ಯತಿರಿಕ್ತವಾಗಿ, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ನೆಸ್ಲೆ, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಟಾಟಾ ಮೋಟಾರ್ಸ್ ಲಾಭ ಗಳಿಸಿದವು. ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್ಇ ಮಿಡ್​ ಕ್ಯಾಪ್​ ಸೂಚ್ಯಂಕ ಶೇಕಡಾ 0.41 ರಷ್ಟು ಮತ್ತು ಸ್ಮಾಲ್​ ಕ್ಯಾಪ್ ಸೂಚ್ಯಂಕ ಶೇಕಡಾ 0.23 ರಷ್ಟು ಕುಸಿದಿವೆ. ಐಟಿ ಶೇ 1.46, ಟೆಕ್ ಶೇ 1.26, ಲೋಹ ಶೇ 0.88, ರಿಯಾಲ್ಟಿ ಶೇ 0.73, ದೂರಸಂಪರ್ಕ ಶೇ 0.62 ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳು ಶೇ 0.57ರಷ್ಟು ಕುಸಿತ ಕಂಡಿವೆ. ವಿದ್ಯುತ್, ಎಫ್ ಎಂಸಿಜಿ ಮತ್ತು ಯುಟಿಲಿಟಿಗಳು ಲಾಭ ಗಳಿಸಿದವು.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಷೇರು ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡವು. ಯುರೋಪಿಯನ್ ಮಾರುಕಟ್ಟೆಗಳು ಸಹ ಇಳಿಕೆಯಲ್ಲಿವೆ. ಯುಎಸ್ ಮಾರುಕಟ್ಟೆಗಳು ಗುರುವಾರ ಕೆಳಮಟ್ಟದಲ್ಲಿ ಕೊನೆಗೊಂಡವು. ಜಾಗತಿಕ ತೈಲ ಬೆಂ ಚ್​ ಮಾರ್ಕ್​ ಬ್ರೆಂಟ್ ಕ್ರೂಡ್​​ ಶೇಕಡಾ 0.46 ರಷ್ಟು ಇಳಿದು ಬ್ಯಾರೆಲ್​ಗೆ 83.73 ಡಾಲರ್​ಗೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ ಒಂದು ದಿನದ ವಿರಾಮದ ನಂತರ 1,510.86 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ. ಬಿಎಸ್ಇ ಬೆಂಚ್ ಮಾರ್ಕ್ ಗುರುವಾರ 388.40 ಪಾಯಿಂಟ್ ಅಥವಾ ಶೇಕಡಾ 0.59 ರಷ್ಟು ಕುಸಿದು 65,151.02 ಕ್ಕೆ ಸ್ಥಿರವಾಗಿತ್ತು. ಅದರಂತೆ ನಿಫ್ಟಿ 99.75 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 19,365.25 ಕ್ಕೆ ಕೊನೆಗೊಂಡಿತ್ತು.

ಇದನ್ನೂ ಓದಿ :RBI: ಸಾಲದ ದಂಡ ಶುಲ್ಕಕ್ಕೆ ಬಡ್ಡಿ ವಿಧಿಸುವಂತಿಲ್ಲ; ಆರ್​ಬಿಐ ಹೊಸ ಮಾರ್ಗಸೂಚಿ ಜ.1 ರಿಂದ ಜಾರಿ

ABOUT THE AUTHOR

...view details