ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ: ಬಿಎಸ್​ಇ ಸೆನ್ಸೆಕ್ಸ್​ 180 & ನಿಫ್ಟಿ 57 ಅಂಕ ಕುಸಿತ - ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್

Sensex Today: ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡಿವೆ.

Sensex closes lower by 180 point
Sensex closes lower by 180 point

By ETV Bharat Karnataka Team

Published : Aug 24, 2023, 7:23 PM IST

ಮುಂಬೈ :ಮೂರು ದಿನಗಳ ಏರಿಕೆಯ ನಂತರ ಗುರುವಾರದ ವಹಿವಾಟಿನಲ್ಲಿ ಭಾರತದ ಬೆಂಚ್​ಮಾರ್ಕ್​ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದವು. ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್​ಡಿಎಫ್​​ಸಿ ಬ್ಯಾಂಕ್​ ಷೇರುಗಳ ಮಾರಾಟದ ಭರಾಟೆಯಿಂದ ಮಾರುಕಟ್ಟೆಗಳು ಇಳಿಕೆಯಲ್ಲಿ ಕೊನೆಗೊಂಡಿವೆ.

ಬಿಎಸ್ಇ ಸೆನ್ಸೆಕ್ಸ್ 180.96 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಕುಸಿದು 65,252.34 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು ಗರಿಷ್ಠ 65,913.77 ಮತ್ತು ಕನಿಷ್ಠ 65,181.94 ಕ್ಕೆ ತಲುಪಿತ್ತು. ಹಾಗೆಯೇ ಎನ್ಎಸ್ಇ ನಿಫ್ಟಿ 57.30 ಪಾಯಿಂಟ್ಸ್ ಅಥವಾ ಶೇಕಡಾ 0.29 ರಷ್ಟು ಕುಸಿದು 19,386.70 ಕ್ಕೆ ತಲುಪಿದೆ.

ಯುಎಸ್ ಷೇರುಗಳಲ್ಲಿನ ಲಾಭ ಮತ್ತು ಏಷ್ಯಾದ ಮಾರುಕಟ್ಟೆಗಳಿಂದ ಸಕಾರಾತ್ಮಕ ಸೂಚನೆಗಳ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ಆರಂಭದಲ್ಲಿ ಸಕಾರಾತ್ಮಕವಾಗಿ ಪ್ರಾರಂಭವಾದವು. ಆದಾಗ್ಯೂ ಐಟಿ, ತೈಲ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿನ ನಷ್ಟವು ಸೂಚ್ಯಂಕಗಳನ್ನು ಇಳಿಕೆಗೆ ತಂದಿತು.

ಸೆನ್ಸೆಕ್ಸ್​​ನಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಶೇ 4.99 ರಷ್ಟು ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಲಾರ್ಸನ್ ಅಂಡ್ ಟೂಬ್ರೊ, ಜೆಎಸ್​ಡಬ್ಲ್ಯೂ ಸ್ಟೀಲ್, ಎಚ್​ಸಿಎಲ್​ ಟೆಕ್ನಾಲಜೀಸ್, ಎನ್​ಟಿಪಿಸಿ, ಟಾಟಾ ಸ್ಟೀಲ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಸಹ ಕುಸಿದವು. ಇಂಡಸ್ಇಂಡ್ ಬ್ಯಾಂಕ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಮತ್ತು ಆಕ್ಸಿಸ್ ಬ್ಯಾಂಕ್ ಲಾಭ ಗಳಿಸಿದವು.

ಏಷ್ಯಾದ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಸಕಾರಾತ್ಮಕ ಮಟ್ಟದಲ್ಲಿ ಕೊನೆಗೊಂಡವು. ಯುರೋಪಿಯನ್ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಯುಎಸ್ ಮಾರುಕಟ್ಟೆಗಳು ಬುಧವಾರ ಲಾಭದೊಂದಿಗೆ ಕೊನೆಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ ₹ 614.32 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.

ಜಾಗತಿಕ ತೈಲ ಬೆಂಚ್​ಮಾರ್ಕ್​ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.10 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 83.29 ಡಾಲರ್​ಗೆ ತಲುಪಿದೆ. ಬಿಎಸ್ಇ ಬೆಂಚ್ ಮಾರ್ಕ್ ಬುಧವಾರ 213.27 ಪಾಯಿಂಟ್ ಅಥವಾ ಶೇಕಡಾ 0.33 ರಷ್ಟು ಏರಿಕೆ ಕಂಡು 65,433.30 ಕ್ಕೆ ತಲುಪಿತ್ತು. ನಿಫ್ಟಿ 47.55 ಪಾಯಿಂಟ್ ಅಥವಾ ಶೇಕಡಾ 0.25 ರಷ್ಟು ಏರಿಕೆ ಕಂಡು 19,444 ಕ್ಕೆ ತಲುಪಿತ್ತು.

ಚಂದ್ರಯಾನ -3 ರ ಯಶಸ್ಸಿನ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಮತ್ತು ವಿಮಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಶೇಕಡಾ 20 ರಷ್ಟು ಏರಿಕೆಯಾಗಿದ್ದವು. ಅಂತಿಮವಾಗಿ ಈ ಷೇರುಗಳು ಮಿಶ್ರ ಪ್ರವೃತ್ತಿಯಲ್ಲಿ ಕೊನೆಗೊಂಡವು. ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಪಾರಸ್ ಡಿಫೆನ್ಸ್ ಷೇರುಗಳು ಶೇ 7 ಮತ್ತು ಶೇ 6ರಷ್ಟು ಏರಿಕೆ ಕಂಡರೆ, ಎಂಟಿಎಆರ್ ಟೆಕ್ನಾಲಜೀಸ್ ಶೇ 4ರಷ್ಟು ಏರಿಕೆ ಕಂಡಿವೆ. ಮಿಧಾನಿ, ಹಿಂದೂಸ್ತಾನ್ ಏರೋನಾಟಿಕ್ಸ್ ಮತ್ತು ಇಂಡೋ ನ್ಯಾಷನಲ್ ಷೇರುಗಳು ಶೇ 2ರಷ್ಟು ಕುಸಿದವು.

ಇದನ್ನೂ ಓದಿ :ಸಣ್ಣ ಮೊತ್ತದ ಆಫ್ಲೈನ್ ಡಿಜಿಟಲ್ ಪೇಮೆಂಟ್​ ಮಿತಿ 500 ರೂ.ಗೆ ಹೆಚ್ಚಳ

ABOUT THE AUTHOR

...view details