ಕರ್ನಾಟಕ

karnataka

ETV Bharat / business

1300 ಅಂಕ ಏರಿಕೆ ಕಂಡು 60 ಸಾವಿರ ಗಡಿ ತಲುಪಿದ  ಸೆನ್ಸೆಕ್ಸ್​.. ಹೆಚ್​ಡಿಎಫ್​ಸಿ ಷೇರುಗಳಿಗೆ ಭಾರಿ ಲಾಭ

ಇಂದಿನ ವಹಿವಾಟಿನಲ್ಲಿ ಹೆಚ್‌ಡಿಎಫ್‌ಸಿ ಷೇರುಗಳು ಶೇ. 8.37ರಷ್ಟು ಏರಿಕೆಯಾಗಿವೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ.8ರಷ್ಟು ಹೆಚ್ಚಳ ಕಂಡಿವೆ. ಇಂದಿನ ಮಹತ್ವದ ಬೆಳವಣಿಗೆಯಲ್ಲಿ ಹೆಚ್‌ಡಿಎಫ್‌ಸಿ ಲಿಮಿಟೆಡ್ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುವುದು ಎಂದು ಕಂಪನಿ ಘೋಷಿಸಿದೆ..

sensex
ಸೆನ್ಸೆಕ್ಸ್

By

Published : Apr 4, 2022, 3:30 PM IST

ಮುಂಬೈ :ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ಮಧ್ಯೆಯೂ ಮುಂಬೈ ಷೇರು ಸೂಚ್ಯಂಕ ಭಾರಿ ಪ್ರಗತಿ ಕಂಡಿದೆ. ಇಂದಿನ ವಹಿವಾಟಿನಲ್ಲಿ 1300 ಅಂಕ ಹೆಚ್ಚಳ ದಾಖಲಿಸುವ ಮೂಲಕ ಷೇರುದಾರರಿಗೆ ಭಾರಿ ಲಾಭ ತಂದುಕೊಟ್ಟಿದೆ. ಅಲ್ಲದೆ, ಉಕ್ರೇನ್-ರಷ್ಯಾ ಸಂಘರ್ಷದಿಂದಾಗಿ ಭಾರಿ ಕುಸಿತ ಕಂಡಿದ್ದ ಸೂಚ್ಯಂಕ ಮತ್ತೆ 60 ಸಾವಿರ ಗಡಿ ದಾಟಿದೆ.

ಮುಂಬೈ ಷೇರು ಸೂಚ್ಯಂಕ 1380.69 ಅಂಕ ಏರಿಕೆ ಕಂಡು 60,657 ಅಂಶದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಸೂಚ್ಯಕ ಕೂಡ 391.4ರಷ್ಟು ಹೆಚ್ಚಳ ಕಂಡು 18,061ರಲ್ಲಿ ವಹಿವಾಟು ನಡೆಸುತ್ತಿದೆ. ಉಕ್ರೇನ್​-ರಷ್ಯಾ ಯುದ್ಧದಿಂದಾಗಿ ಷೇರುದಾರರ ಭಾರಿ ಹಿಂತೆಗೆತದಿಂದ 54 ಸಾವಿರ ಅಂಕಗಳಿಗೆ ಕುಸಿತ ಕಂಡು ತಲ್ಲಣ ಸೃಷ್ಟಿಸಿತ್ತು. ಇದೀಗ ಉಭಯ ರಾಷ್ಟ್ರಗಳ ಮಧ್ಯೆ ಯುದ್ಧ ಸಂಧಾನದ ಮಾತುಕತೆಗಳು ಜಾರಿಯಲ್ಲಿರುವ ಕಾರಣ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದೆ.

ಇನ್ನು ಇಂದಿನ ವಹಿವಾಟಿನಲ್ಲಿ ಹೆಚ್‌ಡಿಎಫ್‌ಸಿ ಷೇರುಗಳು ಶೇ. 8.37ರಷ್ಟು ಏರಿಕೆಯಾಗಿವೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ.8ರಷ್ಟು ಹೆಚ್ಚಳ ಕಂಡಿವೆ. ಇಂದಿನ ಮಹತ್ವದ ಬೆಳವಣಿಗೆಯಲ್ಲಿ ಹೆಚ್‌ಡಿಎಫ್‌ಸಿ ಲಿಮಿಟೆಡ್ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುವುದು ಎಂದು ಕಂಪನಿ ಘೋಷಿಸಿದೆ.

ಇದಲ್ಲದೇ, ಬಜಾಜ್ ಫೈನಾನ್ಸ್, ಕೋಟಕ್​ ಮಹೀಂದ್ರಾ ಬ್ಯಾಂಕ್, ಟೆಕ್ ಮಹೀಂದ್ರಾ, ಟೈಟಾನ್, ಲಾರ್ಸೆನ್ ಮತ್ತು ಟೂಬ್ರೊ ಲಾಭ ಮಾಡಿಕೊಂಡರೆ, ಇದಕ್ಕೆ ವ್ಯತಿರಿಕ್ತವಾಗಿ ಇನ್ಫೋಸಿಸ್, ಎಂ & ಎಂ, ಮಾರುತಿ, ಐಟಿಸಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ನಷ್ಟಕ್ಕೀಡಾಗಿವೆ.

ಓದಿ:ಸಿಎನ್‌ಜಿ ಬೆಲೆ ಏರಿಕೆ: ಕ್ಯಾಬ್‌ಗಳಲ್ಲಿ​ AC ಹಾಕಲು ಚಾಲಕ​ರು​ ಹಿಂದೇಟು

ABOUT THE AUTHOR

...view details