ಕರ್ನಾಟಕ

karnataka

ETV Bharat / business

Closing Bell: ಸೆನ್ಸೆಕ್ಸ್​ 379 ಅಂಕ ಕುಸಿತ, 21,666ಕ್ಕಿಳಿದ ನಿಫ್ಟಿ - Nifty closes

ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಇಳಿಕೆಯೊಂದಿಗೆ ವಹಿವಾಟು ಮುಗಿಸಿವೆ.

Sensex down 379 points, Nifty slides to 21,666 amid selling pressure in financial, IT shares
Sensex down 379 points, Nifty slides to 21,666 amid selling pressure in financial, IT shares

By ETV Bharat Karnataka Team

Published : Jan 2, 2024, 6:17 PM IST

ಮುಂಬೈ : ದೇಶದ ಪ್ರಮುಖ ಷೇರು ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಜನವರಿ 2 ರ ಮಂಗಳವಾರದ ವಹಿವಾಟಿನಲ್ಲಿ ನೀರಸ ಆರಂಭದ ನಂತರ ಕುಸಿತದೊಂದಿಗೆ ಕೊನೆಗೊಂಡವು. ಆಯ್ದ ಫಾರ್ಮಾ ಮತ್ತು ಹೆಲ್ತ್​ಕೇರ್ ಷೇರುಗಳಲ್ಲಿನ ಖರೀದಿಯು ದೊಡ್ಡ ಮಟ್ಟದ ಕುಸಿತದಿಂದ ಪಾರು ಮಾಡಿದರೂ, ಹಣಕಾಸು ಮತ್ತು ಐಟಿ ಷೇರುಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾದವು.

ಮಂಗಳವಾರದ ವಹಿವಾಟಿನಲ್ಲಿ ನಿಫ್ಟಿ ಸೂಚ್ಯಂಕವು 76.1 ಪಾಯಿಂಟ್ ಅಥವಾ ಶೇಕಡಾ 0.4 ರಷ್ಟು ಕುಸಿದು 21,665.8 ರಲ್ಲಿ ಕೊನೆಗೊಂಡಿತು ಮತ್ತು ಸೆನ್ಸೆಕ್ಸ್ 379.5 ಪಾಯಿಂಟ್ ಅಥವಾ ಶೇಕಡಾ 0.5 ರಷ್ಟು ಕಳೆದುಕೊಂಡು 71,892.5 ರಲ್ಲಿ ಕೊನೆಗೊಂಡಿತು. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ 12 ಘಟಕಗಳನ್ನು ಹೊಂದಿರುವ ನಿಫ್ಟಿ ಬ್ಯಾಂಕ್ ಸೂಚ್ಯಂಕವು ದಿನದ ಕನಿಷ್ಠ ಮಟ್ಟವಾದ 472.65 ಪಾಯಿಂಟ್​ ಅಥವಾ ಶೇಕಡಾ 0.98 ರಷ್ಟು ಕುಸಿದು 47,761.65 ಕ್ಕೆ ತಲುಪಿದೆ.

ನಿಫ್ಟಿ ಆಟೋ ಷೇರುಗಳು ಶೇಕಡಾ 1.37 ರಷ್ಟು ಕುಸಿದವು. ತೆರಿಗೆ ದಂಡದ ನೋಟಿಸ್ ಮತ್ತು ಡಿಸೆಂಬರ್​ನಲ್ಲಿ ಮೋಟಾರ್​ ಸೈಕಲ್ ಮಾರಾಟದಲ್ಲಿನ ಕುಸಿತದಿಂದಾಗಿ ಐಷರ್ ಮೋಟಾರ್ಸ್ ಎನ್ಎಸ್ಇಯಲ್ಲಿ ಶೇಕಡಾ 3.57 ರಷ್ಟು ಕುಸಿತ ಕಂಡಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಶೇಕಡಾ 2.48 ರಷ್ಟು ನಷ್ಟ ಅನುಭವಿಸಿದೆ. ನಿಫ್ಟಿ ಸ್ಮಾಲ್ ಕ್ಯಾಪ್ 100 ಮತ್ತು ನಿಫ್ಟಿ ಮಿಡ್ ಕ್ಯಾಪ್ 100 ಕ್ರಮವಾಗಿ ಶೇಕಡಾ 0.24 ಮತ್ತು ಶೇಕಡಾ 0.18 ರಷ್ಟು ಕುಸಿದಿವೆ.

ದೇಶೀಯ ಷೇರುಗಳಲ್ಲಿನ ಸ್ತಬ್ಧ ಪ್ರವೃತ್ತಿ ಮತ್ತು ಆಮದುದಾರರಿಂದ ಡಾಲರ್ ಬೇಡಿಕೆಯ ಮಧ್ಯೆ ಮಂಗಳವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 11 ಪೈಸೆ ಕುಸಿದು 83.32 ಕ್ಕೆ (ತಾತ್ಕಾಲಿಕ) ತಲುಪಿದೆ. ವಿದೇಶಿ ನಿಧಿಯ ಹೊರಹರಿವು ಮತ್ತು ಆಮದುದಾರರಿಂದ ಡಾಲರ್ ಬೇಡಿಕೆ ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 83.28 ಕ್ಕೆ ಪ್ರಾರಂಭವಾಯಿತು ಮತ್ತು ಅಂತಿಮವಾಗಿ ಡಾಲರ್ ವಿರುದ್ಧ 83.32 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 11 ಪೈಸೆ ಕಡಿಮೆಯಾಗಿದೆ.

ಯುರೋಪಿನ ಬೆಂಚ್​​ಮಾರ್ಕ್ ಸ್ಟಾಕ್ ಸೂಚ್ಯಂಕವು ಮಂಗಳವಾರ ಸುಮಾರು ಎರಡು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರಮುಖ ಕೇಂದ್ರ ಬ್ಯಾಂಕುಗಳು ಅಂತಿಮವಾಗಿ ಬಡ್ಡಿದರ ಕಡಿತ ಘೋಷಿಸಬಹುದು ಎಂಬ ಭರವಸೆಯೊಂದಿಗೆ ಹೂಡಿಕೆದಾರರು 2024ರ ವಹಿವಾಟು ಆರಂಭಿಸಿದ್ದಾರೆ. ಪ್ಯಾನ್-ಯುರೋಪಿಯನ್ ಸ್ಟೋಕ್ಸ್ (pan-European STOXX 600) ಶೇಕಡಾ 0.3 ರಷ್ಟು ಏರಿಕೆಯಾಗಿದ್ದು, ಹೊಸ ವರ್ಷದ ದಿನದ ರಜಾದಿನದ ದೀರ್ಘ ವಾರಾಂತ್ಯದ ನಂತರ 23 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಮೃದು ವಿತ್ತೀಯ ನೀತಿಯ ನಿರೀಕ್ಷೆಗಳು 2023 ರಲ್ಲಿ ಬೆಂಚ್​ಮಾರ್ಕ್ ಸೂಚ್ಯಂಕದಲ್ಲಿ ಶೇಕಡಾ 12.7 ರಷ್ಟು ಜಿಗಿತಕ್ಕೆ ಕಾರಣವಾಯಿತು.

ಇದನ್ನೂ ಓದಿ : ಭಾರತ $5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ಯಾವಾಗ? ಇಲ್ಲಿದೆ ತಜ್ಞರ ಉತ್ತರ

ABOUT THE AUTHOR

...view details