ಮುಂಬೈ:ಬುಧವಾರದ ವಹಿವಾಟಿನ ದಿನದ ಕೊನೆಯಲ್ಲಿ ಮಾರಾಟ ಭರಾಟೆ ಹೆಚ್ಚಾಗಿದ್ದರಿಂದ ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತದೊಂದಿಗೆ ಮುಕ್ತಾಯವಾದವು. ಬಿಎಸ್ಇ ಸೆನ್ಸೆಕ್ಸ್ 522.82 ಪಾಯಿಂಟ್ಸ್ ಕುಸಿದು 64,049.06ಕ್ಕೆ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 50 159.60 ಪಾಯಿಂಟ್ಸ್ ಕುಸಿದು 19,122.15 ಕ್ಕೆ ತಲುಪಿತು. ಹೆಚ್ಚು ದೇಶೀಯ ಕೇಂದ್ರಿತವಾಗಿರುವ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಚಂಚಲತೆ ಹೆಚ್ಚಾದಂತೆ ಮಾರಾಟದ ಒತ್ತಡ ಅನುಭವಿಸಿದವು.
ಇದರೊಂದಿಗೆ, ಬೆಂಚ್ ಮಾರ್ಕ್ ಸೂಚ್ಯಂಕಗಳು ಸುಮಾರು ಎಂಟು ತಿಂಗಳಲ್ಲಿ ತಮ್ಮ ಸುದೀರ್ಘ ನಷ್ಟದ ಹಾದಿಯನ್ನು ದಾಖಲಿಸಿವೆ. ಇಸ್ರೇಲ್-ಹಮಾಸ್ ಯುದ್ಧದ ಬಗೆಗಿನ ನಿರಂತರ ಕಳವಳಗಳು ಮತ್ತು ಯುಎಸ್ ಬಾಂಡ್ ಇಳುವರಿಯಲ್ಲಿನ ಏರಿಳಿತಗಳು ಹೂಡಿಕೆದಾರರನ್ನು ಆತಂಕಕ್ಕೀಡು ಮಾಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದೆ.
ಪ್ರಮುಖ ವಲಯ ಸೂಚ್ಯಂಕಗಳಲ್ಲಿ, ಹನ್ನೊಂದು ಸೂಚ್ಯಂಕಗಳು ನಷ್ಟ ಅನುಭವಿಸಿವೆ. ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳು ಕ್ರಮವಾಗಿ ಶೇ 0.93 ಮತ್ತು ಶೇ 1.03ರಷ್ಟು ಕುಸಿದಿವೆ. ನಿಫ್ಟಿ 50 ಷೇರುಗಳಲ್ಲಿ ಕೇವಲ ಹತ್ತು ಷೇರುಗಳು ಮಾತ್ರ ಏರಿಕೆ ಕಂಡವು. ನಿಫ್ಟಿ 50ಯಲ್ಲಿ ಟಾಟಾ ಸ್ಟೀಲ್, ಕೋಲ್ ಇಂಡಿಯಾ, ಹಿಂಡಾಲ್ಕೊ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಮತ್ತು ಎಸ್ಬಿಐ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಮತ್ತೊಂದೆಡೆ, ಅಪೊಲೊ ಆಸ್ಪತ್ರೆ, ಅದಾನಿ ಎಂಟರ್ಪ್ರೈಸಸ್, ಎಸ್ಬಿಐ ಲೈಫ್, ಸಿಪ್ಲಾ ಮತ್ತು ಐಷರ್ ಮೋಟಾರ್ಸ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.