ಮುಂಬೈ: ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರದಂದು ಜಾಗತಿಕ ಮಾರುಕಟ್ಟೆಗಳ ಚಲನೆಯನ್ನು ಆಧರಿಸಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಸೆನ್ಸೆಕ್ಸ್ನ ಶೇರುಗಳಾದ ಮಹಿಂದ್ರಾ ಅಂಡ್ ಮಹಿಂದ್ರಾ, ಮಾರುತಿ ಸುಜುಕಿ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಅಲ್ಟ್ರಾ ಟೆಕ್ ಸಿಮೆಂಟ್, ಡಾ. ರೆಡ್ಡೀಸ್, ವಿಪ್ರೊ ಮತ್ತು ಭಾರತಿ ಏರ್ಟೆಲ್ ಆರಂಭಿಕ ವಹಿವಾಟಿನಲ್ಲಿ ಮುಖ್ಯವಾಗಿ ಏರಿಕೆ ಕಂಡಿವೆ.
ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಬಜಾಜ್ ಫಿನ್‌ಸರ್ವ್ ಇಳಿಕೆ ಕಂಡಿವೆ. ಏಷ್ಯಾದ ಸಿಯೋಲ್, ಶಾಂಘೈ ಮತ್ತು ಟೋಕಿಯೊ ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಹಾಂಕಾಂಗ್ ಮಾರುಕಟ್ಟೆ ಇಳಿಕೆ ಕಂಡಿದೆ. ಇನ್ನು ಶುಕ್ರವಾರದಂದು ಅಮೆರಿಕ ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ಮುಗಿಸಿದ್ದವು.
"ಇಂದಿನ ದಿನ ಪ್ರಕಟವಾಗಹುದಾದ ಜುಲೈ ತಿಂಗಳ ಆಟೊಮೊಬೈಲ್ ಮಾರಾಟದ ಅಂಕಿ - ಸಂಖ್ಯೆಗಳತ್ತ ಮಾರುಕಟ್ಟೆಯ ಗಮನ ನೆಟ್ಟಿದೆ. ದೇಶದ ಮ್ಯಾಕ್ರೊ ಎಕಾನಮಿ ಎತ್ತ ಸಾಗುತ್ತಿದೆ ಎಂಬುದನ್ನು ಈ ಅಂಕಿ - ಅಂಶಗಳು ಸೂಚಿಸಲಿವೆ" ಎಂದು ಪ್ರಶಾಂತ್ ತಾಪ್ಸೆ ಹೇಳಿದರು. ಇವರು ಮೆಹ್ತಾ ಇಕ್ವಿಟೀಸ್ ಲಿಮಿಟೆಡ್ನಲ್ಲಿ ರಿಸರ್ಚ್ ಅನಲಿಸ್ಟ್ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ.