ಮುಂಬೈ :ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯು ಕುಸಿತ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಯಲ್ಲಿನ ಸಕಾರಾತ್ಮಕ ಪ್ರವೃತ್ತಿ ಮುಂದುವರೆದಿದೆ. ಇದರ ನಡುವೆಯೇ ಮುಂಬೈ ಷೇರುಪೇಟೆಯ ದಿನದ ಆರಂಭದಲ್ಲಿ ಸೆನ್ಸೆಕ್ಸ್ 317 ಅಂಕಗಳ ಏರಿಕೆ ಕಂಡು 57,910ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 93.45 ಅಂಶಗಳ ಹೆಚ್ಚಳದ ಬಳಿಕ 17,315.45ಕ್ಕೆ ತಲುಪಿದೆ.
ಪ್ರಮುಖ ಷೇರು ಕಂಪನಿಗಲಾದ ಹೆಚ್‌ಡಿಎಫ್‌ಸಿ, ಅಲ್ಟ್ರಾಟೆಕ್ ಸಿಮೆಂಟ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್, ಮಾರುತಿ ಸುಜುಕಿ ಹಾಗೂ ಐಸಿಐಸಿಐ ಬ್ಯಾಂಕ್ ಲಾಭ ಗಳಿಸಿದವು. ಮತ್ತೊಂದೆಡೆ, ಐಟಿಸಿ, ಟಾಟಾ ಸ್ಟೀಲ್ ಮತ್ತು ಎನ್‌ಟಿಪಿಸಿ ನಷ್ಟದಲ್ಲಿದ್ದವು. ಏಷ್ಯಾದ ಇತರೆ ಮಾರುಕಟ್ಟೆಗಳಾದ ಟೋಕಿಯೋ, ಸಿಯೋಲ್ ಮತ್ತು ಹಾಂಗ್‌ಕಾಂಗ್ ಷೇರುಪೇಟೆಗಳು ಹಸಿರು ಬಣ್ಣದಲ್ಲಿದ್ದರೆ, ಶಾಂಘೈ ಮಧ್ಯ-ಸೆಷನ್ ವ್ಯವಹಾರಗಳ ಸಮಯದಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿತ್ತು.