ಕರ್ನಾಟಕ

karnataka

ETV Bharat / business

600 ಅಂಕಗಳ ಜಿಗಿತ ಕಂಡ ಸೆನ್ಸೆಕ್ಸ್​: ಶೇ 3.88ರಷ್ಟು ಏರಿಕೆಯಾದ ಅದಾನಿ ಷೇರುಗಳು

ಮಧ್ಯಮ ಮಟ್ಟದಲ್ಲಿರುವ ಭಾರತದ ಸಗಟು ಹಣದುಬ್ಬರ - 820.06 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭವನ್ನು ಗಳಿಸಿದ ಅದಾನಿ ಎಂಟರ್​ಪ್ರೈಸಸ್​.

Sensex jumps 600 points, tracking strong global cues; Adani Enterprises surges 3.88 pc
ಸೆನ್ಸೆಕ್ಸ್ 600 ಅಂಕಗಳ ಜಿಗಿತ: ಶೇ 3.88ರಷ್ಟು ಏರಿಕೆಯಾದ ಅದಾನಿ ಷೇರುಗಳು

By

Published : Feb 14, 2023, 10:28 PM IST

ಮುಂಬೈ (ಮಹಾರಾಷ್ಟ್ರ): ಬಲವಾದ ಜಾಗತಿಕ ಸೂಚನೆಗಳು ದೊರೆಯುತ್ತಿದ್ದಂತೆ ದೇಶೀಯ ಮಾರುಕಟ್ಟೆಗಳು ಮಂಗಳವಾರ ಲಾಭದ ಕಡೆ ಮುಖ ಮಾಡಿದೆ. ಸೂಚಂಕ್ಯದಲ್ಲೂ ಭಾರಿ ಏರಿಕೆ ಕಂಡು ಬಂದಿದೆ. ಮಂಗಳವಾರದ ಬಿಡುಗಡೆಯಾದ ಸರ್ಕಾರಿ ಅಂಕಿ-ಅಂಶಗಳು ಭಾರತದಲ್ಲಿ ಸಗಟು ಹಣದುಬ್ಬರವು ಮಧ್ಯಮ ಮಟ್ಟದಲ್ಲಿದೆ ಮತ್ತು ಕಳೆದ ಜನವರಿಯಲ್ಲಿ 4.73 ಶೇಕಡಾ (ತಾತ್ಕಾಲಿಕ) ಎಂದು ತೋರಿಸಿದೆ.

ಎಲ್ಲ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ಪ್ರಮುಖ ಸೂಚ್ಯಂಕಗಳು ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಸೆನ್ಸೆಕ್ಸ್ 600 ಪಾಯಿಂಟ್‌ಗಳ ಏರಿಕೆ ಮತ್ತು 61,032.26ನಲ್ಲಿ ನೆಲೆಸಿದರೆ, ಎನ್‌ಎಸ್‌ಇ (ಭಾರತೀಯ ರಾಷ್ಟ್ರೀಯ ಷೇರು ವಿನಿಮಯ) ನಿಫ್ಟಿ 157 ಪಾಯಿಂಟ್‌ಗಳಿಂದ 17,928ಕ್ಕೆ ಏರಿಕೆಯಾಗಿದೆ. ಎನ್‌ಎಸ್‌ಇ ಅಂಕಿ ಅಂಶಗಳ ಪ್ರಕಾರ, ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 0.99ರಷ್ಟು ಏರಿಕೆಯಾಗಿ 30,588.75ಕ್ಕೆ ತಲುಪಿದೆ. ಕಳೆದ ಎರಡು ಅವಧಿಗಳಲ್ಲಿ ಸೂಚ್ಯಂಕವು ಶೇಕಡಾ 2.26 ರಷ್ಟು ಕುಸಿದಿತ್ತು. ಫಿನ್ ಕೇಬಲ್ಸ್, ಎಚ್‌ಬಿಎಲ್ ಪವರ್, ಎನ್‌ಎಫ್‌ಎಲ್, ಆರ್‌ಸಿಎಫ್, ಸುಪ್ರಜಿತ್ ಮತ್ತು ಆಯಿಲ್ ಇಂಡಿಯಾ ಮಂಗಳವಾರ ಲಾಭ ಗಳಿಸಿದ ಅತ್ಯಂತ ಸಕ್ರಿಯ ಷೇರುಗಳಾಗಿವೆ.

ಎಲೆಕ್ಟ್ರಾ, ಆಲ್ ಕಾರ್ಗೋ, ಜೆಪಿ ಪವರ್ ಮತ್ತು ಸ್ಪಾರ್ಕ್ ಬಿಎಸ್‌ಇ ಮಾರ್ಕೆಟ್​ನಲ್ಲಿ ಹಿಂದುಳಿದಿದ್ದವು. ಇನ್ಫೋಸಿಸ್ ಶೇಕಡಾ 1.66, ಕೋಫೋರ್ಜ್ ಶೇ 1.31, ವಿಪ್ರೋ ಶೇ 1.14, ಎಂಫಾಸಿಸ್ ಶೇ 1.08 ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಶೇಕಡಾ 0.96 ರಷ್ಟು ಏರಿತು ಮತ್ತು ಮಂಗಳವಾರ ಟಾಪ್ ಗೇನರ್‌ಗಳಾಗಿವೆ.

ಏರಿಕೆ ಜೊತೆ ಲಾಭಗಳಿಸುತ್ತಿರುವ ಅದಾನಿ ಷೇರುಗಳು: ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.3.88ರಷ್ಟು ಪ್ರಗತಿ ಸಾಧಿಸಿವೆ. Q3 FY23ರಲ್ಲಿ ಕಂಪನಿಯು 820.06 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭವನ್ನು ಗಳಿಸಿದೆ ಎಂದು ವರದಿ ಮಾಡಿದೆ. Q3 FY22ರಲ್ಲಿ ಸಂಸ್ಥೆಯು 11.63 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ಅನುಭವಿಸಿತು. ಡಿಸೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ 41.87 ಶೇಕಡಾ (YoY) 26,612.23 ಕೋಟಿಗೆ ಜಿಗಿದಿದೆ.

ಅದಾನಿ ಪೋರ್ಟ್ಸ್‌ನ ಷೇರುಗಳು 1.86 ಪ್ರತಿಶತದಷ್ಟು ಏರಿಕೆಯಾಗಿ ಪ್ರತಿ ಷೇರಿನ ಬೆಲೆ 564ರೂ. ಆಗಿದೆ. ಇನ್ನು ಅದಾನಿ ಗ್ರೀನ್ ಷೇರುಗಳು ಶೇ 5ರಷ್ಟು ಕಳೆದುಕೊಂಡು 653.65 ರೂ. ಇಳಿಕೆ ಕಂಡಿದೆ. ಅದಾನಿ ಟ್ರಾನ್ಸ್‌ಮಿಷನ್ ಷೇರುಗಳು 5 ಪ್ರತಿಶತದಷ್ಟು ನಷ್ಟದೊಂದಿಗೆ 1,071 ರೂ.ಗೆ ತಲುಪಿದೆ.

ಭಾರತದಲ್ಲಿ ಸಗಟು ಹಣದುಬ್ಬರವು ಮಧ್ಯಮ ಮಟ್ಟದಲ್ಲಿಯೇ ಮುಂದುವರಿದಿದೆ ಮತ್ತು 2023ರ ಜನವರಿಯಲ್ಲಿ 4.73 ಶೇಕಡಾ (ತಾತ್ಕಾಲಿಕ) ಆಗಿತ್ತು, ಹಿಂದಿನ ತಿಂಗಳ 4.95 ಶೇಕಡಾಕ್ಕೆ ವಿರುದ್ಧವಾಗಿ ಮಂಗಳವಾರ ಅಧಿಕೃತ ಅಂಕಿಅಂಶಗಳು ತೋರಿಸಿವೆ. ಭಾರತದಲ್ಲಿ ಗ್ರಾಮೀಣ ಮತ್ತು ನಗರಗಳಲ್ಲಿ ಚಿಲ್ಲರೆ ಹಣದುಬ್ಬರವು ಕ್ರಮವಾಗಿ ಶೇ.6.85 ಮತ್ತು ಶೇ.6 ರಷ್ಟಿದೆ. ಧಾನ್ಯಗಳು ಮತ್ತು ಉತ್ಪನ್ನಗಳು, ಮೊಟ್ಟೆಗಳು ಮತ್ತು ಮಸಾಲೆಗಳು, ಇತರ ಪದಾರ್ಥಗಳ ಬೆಲೆ ಏರಿಕೆಯು ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಕೊಡುಗೆ ನೀಡಿತ್ತು.

ಇದನ್ನೂ ಓದಿ:ಅಡಕೆಗೆ ಕ್ಯಾನ್ಸರ್ ತರಿಸುವುದಲ್ಲ, ಗುಣಪಡಿಸುವ ಶಕ್ತಿ ಇದೆ ಎಂಬ ವರದಿ ಕೈಸೇರಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details