ಕರ್ನಾಟಕ

karnataka

ETV Bharat / business

ಆರಂಭಿಕ ಏರಿಕೆ ದಾಖಲಿಸಿದ ಷೇರುಪೇಟೆ.. ಹೂಡಿಕೆದಾರರಲ್ಲಿ ಮೂಡಿದ ಭರವಸೆ - ಮುಂಬೈ ಷೇರು ಸಂವೇದಿ ಸೂಚ್ಯಂಕ ಏರಿಕೆ

ವಿಶ್ವದ ಇತರ ಷೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಚೇತರಿಕೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಸಹ ಏರಿಕೆ ಹಾದಿ ಹಿಡಿದಿದೆ. ಅದಾನಿ ಷೇರುಗಳು ಸಹ ಹೆಚ್ಚಳ ಕಾಣುತ್ತಿವೆ.

Sensex gets bullish streak back, gains 334 points in morning trade
ಆರಂಭಿಕ ಏರಿಕೆ ದಾಖಲಿಸಿದ ಷೇರುಪೇಟೆ.. ಹೂಡಿಕೆದಾರರಲ್ಲಿ ಮೂಡಿದ ಭರವಸೆ

By

Published : Feb 16, 2023, 11:08 AM IST

ಮುಂಬೈ (ಮಹಾರಾಷ್ಟ್ರ):ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಚೇತರಿಕೆ ಹಿನ್ನೆಲೆಯಲ್ಲಿ ದೇಶೀಯ ಷೇರು ಮಾರುಕಟ್ಟೆ ಆರಂಭಿಕ ಏರಿಕೆ ದಾಖಲಿಸಿದೆ. ರಪ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕೂಡಾ ಷೇರುಪೇಟೆ ಚೇತರಿಕೆಗೆ ಕಾರಣ ಎನ್ನಲಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 335 ಪಾಯಿಂಟ್‌ಗಳ ಏರಿಕೆ ಕಂಡಿದ್ದು, ಆರಂಭಿಕ 61,610.20 ಅಂಕಗಳೊಂದಿಗೆ ವ್ಯವಹಾರ ಮುಂದುವರಿಸಿತ್ತು. ಇನ್ನು ನಿಫ್ಟಿ 94 ಪಾಯಿಂಟ್‌ಗಳನ್ನು ಗಳಿಸಿ 18,113.15 ಕ್ಕೆ ತಲುಪಿತ್ತು.

ಟನ್ಲಾ ಷೇರು ಶೇ5.28, ಆನ್ ಮೊಬೈಲ್ ಶೇ 6.80, PI ಇಂಡಸ್ಟ್ರೀಸ್ ಶೇ.6.88 ರಷ್ಟು ಏರಿಕೆ ಕಂಡು ಲಾಭದಲ್ಲಿ ಮುನ್ನುಗ್ಗುತ್ತಿವೆ. ಅದಾನಿ ಪವರ್ ಶೇಕಡಾ 4.97 ರಷ್ಟು ಏರಿಕೆ ಕಾಣುವ ಮೂಲಕ ಅದಾನಿ ಕಂಪನಿಗೆ ಬೂಸ್ಟ್​ ನೀಡಿತು. ಇಂಡಿಗೋ, ಮಾನ್ಯಾವರ್, ಫಿನ್ ಕೇಬಲ್ಸ್, ಇಕೆಐ ಎನರ್ಜಿ ಸರ್ವಿಸಸ್ ಮತ್ತು ಆವಾಸ್ ಫೈನಾನ್ಷಿಯರ್ಸ್ ಬೆಳಗ್ಗೆಯ ವ್ಯವಹಾರದಲ್ಲಿ ನಷ್ಟ ಕಂಡಿದ್ದವು.

ಗುರುವಾರದ ಆರಂಭಿಕ ವ್ಯವಹಾರಗಳಲ್ಲಿ ಅದಾನಿ ಸಮೂಹ ಸಂಸ್ಥೆಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದವು. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ 3.87 ರಷ್ಟು ಏರಿಕೆಯಾಗಿ ಪ್ರತಿ ರೂ 1,847 ಕ್ಕೆ ತಲುಪಿದರೆ, ಅದಾನಿ ಪೋರ್ಟ್ಸ್ ಪ್ರತಿ 587.20 ಕ್ಕೆ 3.13 ರಷ್ಟು ಏರಿಕೆಯಾಗಿದೆ. ಗುರುವಾರ ಬೆಳಗ್ಗೆ ಅದಾನಿ ಗ್ರೀನ್ ಶೇ.4.99 ರಷ್ಟು ಏರಿಕೆಯಾಗಿ ಪ್ರತಿ 652 ರೂ.ಗೆ ಮುಟ್ಟಿದವು. ಅದಾನಿ ಟ್ರಾನ್ಸ್‌ಮಿಷನ್ ಶೇ.4.48 ರಷ್ಟು ಏರಿಕೆಯಾಗಿ 1,063 ರೂಗಳೊಂದಿಗೆ ವ್ಯವಹಾರ ನಿರತವಾಗಿದೆ.

ಏಷ್ಯನ್ ಮಾರುಕಟ್ಟೆಗಳಾದ ಹಾಂಕಾಂಗ್‌ನ ಹ್ಯಾಂಗ್ ಸೆಂಗ್ 447 ಪಾಯಿಂಟ್‌ಗಳ ಏರಿಕೆ ದಾಖಲಿಸಿದರೆ, ಜಪಾನ್‌ನ ನಿಕ್ಕಿ 221 ಪಾಯಿಂಟ್ಸ್​, ಚೀನಾದ ಶಾಂಘೈ 25 ಪಾಯಿಂಟ್ಎ ಸ್ & ಪಿ ಎಎಸ್‌ಎಕ್ಸ್ 53 ಪಾಯಿಂಟ್ ಏರಿಕೆ ಕಂಡಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಸಹ ಉತ್ಸಾಹದಲ್ಲೇ ವಹಿವಾಟು ಮುಂದುವರಿಸಿದೆ.

ಅಮೇರಿಕನ್ ಮಾರುಕಟ್ಟೆಗಳಲ್ಲಿ, ಡೌ ಜೋನ್ಸ್ 38 ಪಾಯಿಂಟ್, ನಾಸ್ಡಾಕ್ 110 ಪಾಯಿಂಟ್​ ನಷ್ಟದೊಂದಿಗೆ ಬುಧವಾರದ ವಹಿವಾಟನ್ನು ಕೊನೆಗೊಳಿಸಿವೆ. ಯುರೋಪಿಯನ್ ಮಾರುಕಟ್ಟೆಗಳಲ್ಲಿ, ಆಮ್ಸ್ಟರ್‌ಡ್ಯಾಮ್ ಎಕ್ಸ್‌ಚೇಂಜ್, ಬೆಲ್-20, ಡಾಯ್ಚ್ ಬೋರ್ಸ್ ಮತ್ತು ಸಿಎಸಿಗಳು ಏರಿಕೆ ದಾಖಲಿಸಿ ಷೇರುದಾರರಲ್ಲಿ ಮಂದಹಾಸ ಮೂಡಿಸಿವೆ. ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಕಾರ, ಭಾರತದ ಸರಕು ರಫ್ತುಗಳು ಈ ಜನವರಿಯಲ್ಲಿ ಸತತ ಎರಡನೇ ತಿಂಗಳು ಕುಸಿತ ಕಂಡಿವೆ. ಕುಸಿಯಿತು, ಸಾಗಣೆಯ ಮೌಲ್ಯವು 6.6 ಶೇಕಡಾ ಕುಸಿದು USD 32.91 ಶತಕೋಟಿಗೆ ತಲುಪಿದೆ. ಆದಾಗ್ಯೂ, ವ್ಯಾಪಾರ ಕೊರತೆಯು ಕೇವಲ USD 17.75 ಶತಕೋಟಿಗೆ ಒಂದು ವರ್ಷದಲ್ಲಿ ಕಡಿಮೆಯಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಡಿಸೆಂಬರ್ 2022 ರ ಸರಕುಗಳ ವ್ಯಾಪಾರದ ಅಂಕಿ- ಸಂಖೆಯನ್ನು ಪರಿಷ್ಕರಿಸಿದೆ. ರಫ್ತು ಪ್ರಮಾಣ 3.6 ಶತಕೋಟಿ ಡಾಲರ್​ನಿಂದ 38.07 ಶತಕೋಟಿಗೆ ಏರಿಕೆ ಕಂಡಿದೆ. ಭಾರತದ ಒಟ್ಟಾರೆ ರಫ್ತು ಪ್ರಮಾಣ ಜನವರಿ 2022 ರಂದು 56.86 ಶತಕೋಟಿ ಡಾಲರ್​​​​​ ಇತ್ತು. ಅದೀಗ 2023ರ ಜನವರಿಯಲ್ಲಿ 14.57 ಶೇಕಡಾ ಹೆಚ್ಚಳದೊಂದಿಗೆ 65.15 ಶತಕೋಟಿ ಅಮೆರಿಕನ್​ ಡಾಲರ್​​​ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ:ಕಂಪನಿಯ ಎಲ್ಲ ವ್ಯವಹಾರಗಳು ಸದೃಢವಾಗಿವೆ: ಹೂಡಿಕೆದಾರರಿಗೆ ಧೈರ್ಯ ತುಂಬಿದ ಅದಾನಿ ಸಮೂಹ ಸಂಸ್ಥೆ

ABOUT THE AUTHOR

...view details