ಕರ್ನಾಟಕ

karnataka

ETV Bharat / business

1,158 ಅಂಶ ಕುಸಿದ ಸೆನ್ಸೆಕ್ಸ್​​, ಡಾಲರ್​ ಎದುರು ಪಾತಾಳಕ್ಕಿಳಿದ ರೂಪಾಯಿ: ಬ್ಯಾಂಕ್​ ಷೇರುಗಳಲ್ಲಿ ಇಳಿಕೆ

ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ಕೂಡ ತಲ್ಲಣ ಉಂಟಾಗಿದ್ದು, 1,158 ಅಂಶ ಕುಸಿತ ಕಂಡಿದೆ. ಇದರಿಂದ ಪ್ರಮುಖ ಬ್ಯಾಂಕಿಂಗ್​​​ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡು ಬಂದಿದೆ.

Sensex crashes
Sensex crashes

By

Published : May 12, 2022, 5:36 PM IST

ಮುಂಬೈ: ಕಳೆದ ಕೆಲ ದಿನಗಳಿಂದ ಮುಂಬೈ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಹೆಚ್ಚಾಗಿದ್ದು, ಇಂದು ಸಹ ದಾಖಲೆಯ 1,158 ಅಂಶ ಸೆನ್ಸೆಕ್ಸ್​​​ ಕುಸಿತ ಕಂಡಿದೆ. ಹೀಗಾಗಿ, ಪ್ರಮುಖ ಬ್ಯಾಂಕ್​​​ಗಳ ಷೇರು ಮೌಲ್ಯದಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ.

ಮುಂಬೈ ಷೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ ಶೇ. 2.14ರಷ್ಟು ಇಳಿಕೆಯಾಗಿದ್ದು, 52.930 ಅಂಶ ತಲುಪಿದೆ. ನಿಫ್ಟಿಯಲ್ಲೂ 359.10 ಅಂಶ ಇಳಿಕೆಯಾಗಿ 15,808ನಲ್ಲಿ ವಹಿವಾಟು ಮುಗಿಸಿದೆ.

ಇದನ್ನೂ ಓದಿ:ರೆಪೋ ದರ ಏರಿಕೆ... ಠೇವಣಿದಾರರಿಗೆ ಖುಷಿ: ಸಾಲಗಾರರಿಗೆ ಬಿಸಿ..!

ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡು ಬಂದಿರುವ ಕಾರಣ ಬ್ಯಾಂಕಿಂಗ್​ ಕ್ಷೇತ್ರದ ಇಂಡಸ್​ಬ್ಯಾಂಕ್​, HDFC ಬ್ಯಾಂಕ್​, ಆ್ಯಕ್ಸಿಸ್​ ಬ್ಯಾಂಕ್​​, ಬಜಾಜ್ ಫಿನ್​ಕಾರ್ಫ್​ ಸೇರಿದಂತೆ ಪ್ರಮುಖ ಷೇರುಗಳಲ್ಲಿ ಕುಸಿತ ಕಂಡು ಬಂದಿದೆ. ಜಾಗತಿಕ ಆರ್ಥಿಕತೆಯಲ್ಲಿ ಹಣದುಬ್ಬರ ಹಾಗೂ ರೆಪೋ ದರಕ್ಕೆ ಸಂಬಂಧಿಸಿದಂತೆ ಆರ್​​ಬಿಐ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಷೇರು ಪೇಟೆಯಲ್ಲಿ ಇಷ್ಟೊಂದು ಇಳಿಕೆ ಕಂಡು ಬಂದಿದೆ ಎನ್ನಲಾಗ್ತಿದೆ.

ಡಾಲರ್​ ಎದುರು ಕುಸಿದ ರೂಪಾಯಿ:ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​​ನಲ್ಲಿ ದಿಢೀರ್ ಕುಸಿತವಾಗಿರುವ ಕಾರಣ ಡಾಲರ್ ಎದುರು ರೂಪಾಯಿ ಮತ್ತಷ್ಟು ಕುಸಿತಗೊಂಡಿದೆ. ದಿನದ ವ್ಯವಹಾರದಲ್ಲಿ 77.63 ಪೈಸೆಗೆ ಕುಸಿದಿದ್ದ ರೂಪಾಯಿ, ದಿನದಾಂತ್ಯಕ್ಕೆ 77.50 ಪೈಸೆಗೆ ಸ್ಥಿರಗೊಂಡು ವ್ಯವಹಾರ ಮುಗಿಸಿದೆ.

ABOUT THE AUTHOR

...view details