ಕರ್ನಾಟಕ

karnataka

ETV Bharat / business

Adani-Hindenburg: ಅದಾನಿ ವಿರುದ್ಧ ಹಿಂಡನ್‌ಬರ್ಗ್‌ ಆರೋಪಗಳ ತನಿಖಾ ವರದಿ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಸೆಬಿ

Adani Hindenburg controversy: ಅದಾನಿ ಸಮೂಹದ ವಿರುದ್ಧ ಹಿಂಡನ್​ಬರ್ಗ್​ ರಿಸರ್ಚ್ ಕಂಪನಿ ಮಾಡಿದ ಆರೋಪಗಳ ಬಗೆಗಿನ ತನಿಖಾ ವರದಿಯನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡಬೇಕೆಂದು ಸೆಬಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

Adani- Hindenburg investigation
Adani- Hindenburg investigation

By

Published : Aug 14, 2023, 3:52 PM IST

ನವದೆಹಲಿ: ಅದಾನಿ ಗ್ರೂಪ್ ವಿರುದ್ಧ ಅಮೆರಿಕ ಮೂಲದ ಶಾರ್ಟ್​ ಸೆಲ್ಲರ್ ಕಂಪನಿ ಹಿಂಡನ್​ಬರ್ಗ್​ ರಿಸರ್ಚ್ ಮಾಡಿರುವ ಆರೋಪಗಳ ಬಗ್ಗೆ ನಡೆಸುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ 15 ದಿನ ಕಾಲಾವಕಾಶ ನೀಡಬೇಕೆಂದು ಕೋರಿ ಸೆಕ್ಯುರಿಟೀಸ್ ಅಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸೋಮವಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಪ್ರಗತಿಯಲ್ಲಿರುವ 24 ತನಿಖೆಗಳು ಅಥವಾ ಪರಿಶೀಲನೆಗಳ ಪೈಕಿ 17 ಸೆಬಿಯ ಅಸ್ತಿತ್ವದಲ್ಲಿರುವ ಅಭ್ಯಾಸ ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಪೂರ್ಣಗೊಂಡಿದ್ದು ಅವನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲಾಗಿದೆ ಎಂದು ಸೆಬಿ ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ. ತನಿಖೆಯ ಮುಕ್ತಾಯದ ನಂತರ ವರದಿಯನ್ನು ಸಲ್ಲಿಸಲು 15 ದಿನಗಳ ಸಮಯ ನೀಡಲು ಅಥವಾ ಸುಪ್ರೀಂ ಕೋರ್ಟ್ ಸೂಕ್ತವೆಂದು ಭಾವಿಸುವ ಯಾವುದೇ ಅವಧಿಯನ್ನು ನೀಡುವಂತೆ ಸೆಬಿ ಕೋರಿದೆ.

ಹಿಂಡನ್​ಬರ್ಗ್​ - ಅದಾನಿ ವಿವಾದದ ಬಗ್ಗೆ ನಡೆಯುತ್ತಿರುವ ತನಿಖೆಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಜುಲೈ 11 ರಂದು ಸೆಬಿಗೆ ಸೂಚಿಸಿತ್ತು. ಆಗಸ್ಟ್ 14 ರೊಳಗೆ ತನಿಖೆಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಪಾರದರ್ಶಕ ವಹಿವಾಟುಗಳ ವ್ಯಾಖ್ಯಾನವನ್ನು ತೆಗೆದುಹಾಕಲು ಯಾವ ಸಂದರ್ಭಗಳಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಯಲು ಖಂಡಿತವಾಗಿಯೂ ಬಯಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಆಗ ಹೇಳಿತ್ತು.

ಅದಾನಿ ಗ್ರೂಪ್ ವಿರುದ್ಧದ ಹಿಂಡನ್ ​ಬರ್ಗ್​ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು. ತಿದ್ದುಪಡಿಗಳಿಂದಾಗಿ ವಹಿವಾಟಿನ ಆಳಕ್ಕೆ ಹೋಗಲು ಸೆಬಿಗೆ ಅಡ್ಡಿಯಾಗಬಹುದು ಎಂದು ಅವರು ವಾದಿಸಿದ ನಂತರ, ಅಪಾರದರ್ಶಕ ವಹಿವಾಟುಗಳ ವ್ಯಾಖ್ಯಾನವನ್ನು ತೆಗೆದುಹಾಕಲು ಯಾವ ಸಂದರ್ಭಗಳಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಯಲು ಬಯಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

2018 ಮತ್ತು 2019 ರಲ್ಲಿ ವಿದೇಶಿ ಪೋರ್ಟ್​​ಫೋಲಿಯೊ ಹೂಡಿಕೆದಾರರ (ಎಫ್​ಪಿಐ) ನಿಯಮಗಳಲ್ಲಿ ಮಾಡಿದ ಬದಲಾವಣೆಗಳು ಲಾಭದಾಯಕ ಮಾಲೀಕರಿಗೆ (ಬಿಒ) ಸಂಬಂಧಿಸಿದಂತೆ ಮಾಹಿತಿಗಳನ್ನು ಬಹಿರಂಗಪಡಿಸುವ ಅಗತ್ಯವನ್ನು ಪರಿಣಾಮಕಾರಿಯಾಗಿ ಬಿಗಿಗೊಳಿಸಿದೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು ತನ್ನ ಮಧ್ಯಂತರ ವರದಿಯಲ್ಲಿ, ಅದಾನಿ ಕಂಪನಿಗಳಲ್ಲಿ ಯಾವುದೇ ಸ್ಪಷ್ಟವಾದ ಹಸ್ತಕ್ಷೇಪ ಕಂಡು ಬಂದಿಲ್ಲ ಮತ್ತು ಯಾವುದೇ ನಿಯಂತ್ರಕ ವೈಫಲ್ಯವಿಲ್ಲ ಎಂದು ಹೇಳಿತ್ತು. ಆದಾಗ್ಯೂ, 2014-2019 ರ ನಡುವೆ ಸೆಬಿ ಮಾಡಿದ ಹಲವಾರು ತಿದ್ದುಪಡಿಗಳನ್ನು ಸಮಿತಿಯು ಉಲ್ಲೇಖಿಸಿದೆ. ಅದಾನಿ - ಹಿಂಡನ್​ಬರ್ಗ್​ ವಿವಾದದ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಾಧೀಶ ಎ.ಎಂ. ಸಪ್ರೆ ನೇತೃತ್ವದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ನಿಯಮಗಳಲ್ಲಿನ ಬದಲಾವಣೆಯನ್ನು ತನಿಖೆಯ ಒಂದು ಅಂಶವೆಂದು ಉಲ್ಲೇಖಿಸಿತ್ತು.

ಇದನ್ನೂ ಓದಿ : Onion Price: ಟೊಮೆಟೊ ಬಳಿಕ ದುಬಾರಿಯಾಗುತ್ತಾ ಈರುಳ್ಳಿ? ಸಂಗ್ರಹ, ಬೆಳೆ ಪರಿಸ್ಥಿತಿ ಹೇಗಿದೆ?

For All Latest Updates

ABOUT THE AUTHOR

...view details