ನವದೆಹಲಿ:ದೇಶದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಬುಧವಾರ ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್) ಅನ್ನು 70 ಬೇಸಿಸ್ ಪಾಯಿಂಟ್‌ಗಳಷ್ಟು (ಅಥವಾ ಶೇ 0.7) ಅಂದರೆ ಶೇ 13.45 ಕ್ಕೆ ಹೆಚ್ಚಿಸಿದೆ. ಇದರಿಂದ ಬಿಪಿಎಲ್‌ಆರ್ ಆಧರಿತ ಸಾಲದ ಕಂತುಗಳು ದುಬಾರಿಯಾಗಲಿವೆ. ಇದಕ್ಕೂ ಮುನ್ನ ಬಿಪಿಎಲ್ಎರ್ ದರ ಶೇ 12.75 ರಷ್ಟಿತ್ತು. ಇದನ್ನು ಕಳೆದ ಜೂನ್ನಲ್ಲಿ ಪರಿಷ್ಕರಿಸಲಾಗಿತ್ತು.
ಸೆಪ್ಟೆಂಬರ್ 15, 2022 ರಿಂದ ಜಾರಿಗೆ ಬರುವಂತೆ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ದರವನ್ನು (ಬಿಪಿಎಲ್‌ಆರ್) ವಾರ್ಷಿಕವಾಗಿ ಶೇಕಡಾ 13.45 ರಂತೆ ಪರಿಷ್ಕರಿಸಲಾಗಿದೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.
ಬ್ಯಾಂಕ್ ಸಾಲದ ಮೂಲ ದರವನ್ನು (ಬೇಸ್ ರೇಟ್) ಕೂಡ ಇದೇ ರೀತಿ ಶೇ 8.7 ಕ್ಕೆ ಏರಿಸಿದೆ. ಇದು ಗುರುವಾರದಿಂದ ಜಾರಿಗೆ ಬರುತ್ತದೆ. ಮೂಲ ದರದಲ್ಲಿ ಸಾಲ ಪಡೆದ ಸಾಲಗಾರರಿಗೆ ಇಎಂಐ ಮೊತ್ತ ಹೆಚ್ಚಾಗಲಿದೆ.