ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕೆಲ ಸ್ಥಿರ ಠೇವಣಿಗಳ (ಎಫ್ಡಿ) ಮೇಲಿನ ಬಡ್ಡಿದರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡಾ 0.5ರಷ್ಟು ಹೆಚ್ಚಿಸಿದೆ. 7 ದಿನಗಳಿಂದ 45 ದಿನಗಳವರೆಗಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 3ರಿಂದ 3.50ಕ್ಕೆ ಹೆಚ್ಚಿಸಲಾಗಿದೆ. 46 ದಿನಗಳಿಂದ 179 ದಿನಗಳ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇಕಡಾ 4.50ರಿಂದ ಶೇಕಡಾ 4.75ಕ್ಕೆ, 180 ದಿನಗಳಿಂದ 210 ದಿನಗಳವರೆಗಿನ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇಕಡಾ 5.25ರಿಂದ ಶೇಕಡಾ 5.75ಕ್ಕೆ, 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಬಡ್ಡಿದರವನ್ನು ಶೇಕಡಾ 5.75ರಿಂದ ಶೇಕಡಾ 6ಕ್ಕೆ ಹೆಚ್ಚಿಸಲಾಗಿದೆ.
ಮೂರು ವರ್ಷದಿಂದ ಐದು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 6.50ರಿಂದ 6.75ಕ್ಕೆ ಹೆಚ್ಚಿಸಲಾಗಿದೆ. ಇತರ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳು ಹಿಂದಿನಂತೆ ಮುಂದುವರಿಯಲಿವೆ. ಬ್ಯಾಂಕ್ ಕೊನೆಯ ಬಾರಿಗೆ ಫೆಬ್ರವರಿ 2023ರಲ್ಲಿ ಎಫ್ಡಿ ದರಗಳನ್ನು ಪರಿಷ್ಕರಿಸಿತ್ತು.
ಡಿಸೆಂಬರ್ 27ರಿಂದ ಜಾರಿಗೆ ಬಂದಿರುವ ವಿವಿಧ ಅವಧಿಯ ಸ್ಥಿರ ಠೇವಣಿಗಳ ಬಡ್ಡಿದರದ ಕೋಷ್ಟಕ ಇಲ್ಲಿದೆ:
- 7 ದಿನಗಳಿಂದ 45 ದಿನಗಳವರೆಗೆ 3.50%
- 46 ದಿನಗಳಿಂದ 179 ದಿನಗಳು 4.75%
- 180 ದಿನಗಳಿಂದ 210 ದಿನಗಳವರೆಗೆ 5.75%
- 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6%
- 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 6.80%
- 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ 7.00%
- 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 6.75%
- 5 ವರ್ಷದಿಂದ 10 ವರ್ಷಗಳವರೆಗೆ 6.50%