ಕರ್ನಾಟಕ

karnataka

ETV Bharat / business

ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಕುಸಿತ: 81.77ಕ್ಕೆ ಇಳಿಕೆ

ಶುಕ್ರವಾರದ ಸೆಷನ್‌ನಲ್ಲಿ ರೂಪಾಯಿ ಕೇವಲ ಒಂದು ಪೈಸೆಯಷ್ಟು ಇಳಿಕೆ ಕಂಡು, ಡಾಲರ್ ಎದುರು 81.71 ಕ್ಕೆ ತಲುಪಿತ್ತು.

rupee slips against dollar
ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಕುಸಿತ

By

Published : Nov 28, 2022, 12:57 PM IST

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್​ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 6 ಪೈಸೆ ಕುಸಿತ ಕಂಡಿದ್ದು, ರೂಪಾಯಿ ಮೌಲ್ಯ 81.77 ಕ್ಕೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾಗಿರುವುದು ಮತ್ತು ತಾಜಾ ವಿದೇಶಿ ನಿಧಿಯ ಒಳಹರಿವು ರೂಪಾಯಿ ಮೌಲ್ಯ ಕುಸಿತದ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 81.81 ರೂಪಾಯಿ ಮೌಲ್ಯದೊಂದಿಗೆ ದುರ್ಬಲವಾಗಿ ಇಂದಿನ ವಹಿವಾಟು ಆರಂಭಿಸಿ, 6 ಪೈಸೆ ಕುಸಿತ ಕಂಡು 81.77 ರ ಮಟ್ಟವನ್ನು ತಲುಪಿತು. ಶುಕ್ರವಾರದ ಸೆಷನ್‌ನಲ್ಲಿ ರೂಪಾಯಿ ಕೇವಲ ಒಂದು ಪೈಸೆಯಷ್ಟು ಇಳಿಕೆ ಕಂಡು, ಡಾಲರ್ ಎದುರು 81.71 ಕ್ಕೆ ತಲುಪಿತ್ತು.

ಆರು ಕರೆನ್ಸಿಗಳ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.41 ರಷ್ಟು ಏರಿಕೆಯಾಗಿ 106.39 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಶೇಕಡಾ 2.58 ರಷ್ಟು ಕುಸಿದು USD 81.47 ಕ್ಕೆ ತಲುಪಿದೆ.

ಇದನ್ನೂ ಓದಿ:ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಸೆನ್ಸೆಕ್ಸ್​ ಏರಿಕೆ

ABOUT THE AUTHOR

...view details