ಮುಂಬೈ:ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ವಿದೇಶಿ ಹಣದ ಹೊರಹರಿವಿನ ಏರಿಕೆಯಿಂದಾಗಿ ಸೋಮವಾರ ಯುಎಸ್ ಕರೆನ್ಸಿ ವಿರುದ್ಧ ಇಂಡಿಯಾದ ರೂಪಾಯಿ 15 ಪೈಸೆಗಳಷ್ಟು ಇಳಿಕೆ ಕಂಡಿದೆ. ಇಂಡಿಯನ್ ಕರೆನ್ಸಿ ಸೋಮವಾರ 79.97 (ತಾತ್ಕಾಲಿಕ) ರಷ್ಟಿತ್ತು. ಇಂಟರ್-ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯಲ್ಲಿ, ಸ್ಥಳೀಯ ಘಟಕವು ಗ್ರೀನ್‌ಬ್ಯಾಕ್ ವಿರುದ್ಧ 79.76 ನಲ್ಲಿ ತೆರೆಯಿತು.
ಸ್ಥಳೀಯ ಘಟಕವು ಕೆಲವು ಕಳೆದುಹೋದ ಗ್ರೌಂಡ್ನ್ನು ಚೇತರಿಸಿಕೊಂಡಿತು. ಹೀಗಾಗಿ ರೂಪಾಯಿ ಮೌಲ್ಯ 79.97 (ತಾತ್ಕಾಲಿಕ)ರಲ್ಲಿ ಅಂತ್ಯಗೊಂಡಿದೆ. ಅದರ ಹಿಂದಿನ ಮುಕ್ತಾಯಕ್ಕೆ ಹೋಲಿಸಿದ್ರೆ, 15 ಪೈಸೆಗಳಷ್ಟು ಕುಸಿತವನ್ನು ಕಂಡಿದೆ. ಶುಕ್ರವಾರದಂದು ರೂಪಾಯಿ ಮೌಲ್ಯವು 80 ರ ಸಮೀಪದಲ್ಲಿತ್ತು. ಅಂದರೆ ಯುಎಸ್ ಕರೆನ್ಸಿಗೆ ವಿರುದ್ಧವಾಗಿ 17 ಪೈಸೆಗಳಷ್ಟು 79.82 ಕ್ಕೆ ತಲುಪಿತ್ತು.