ಮುಂಬೈ: ದಿನದ ಆರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ 28 ಪೈಸೆ ಏರಿಕೆಯಾಗಿ 79.25 ಕ್ಕೆ ತಲುಪಿದೆ. ಅಂತರ್ ಬ್ಯಾಂಕು ವಿದೇಶಿ ಕರೆನ್ಸಿ ವಹಿವಾಟಿನಲ್ಲಿ ಪ್ರತಿ ಡಾಲರ್ಗೆ 79.30 ರಲ್ಲಿ ಆರಂಭವಾದ ರೂಪಾಯಿ ಮೌಲ್ಯ 28 ಪೈಸೆ ಏರಿಕೆಯಾಗಿ 79.25ಕ್ಕೆ ತಲುಪಿತು. ಆರು ಕರೆನ್ಸಿಗಳನ್ನು ಹೊಂದಿರುವ ಡಾಲರ್ ಇಂಡೆಕ್ಸ್ ಶೇ 0.12 ರಷ್ಟು ಕುಸಿತವಾಗಿ 108.20 ಕ್ಕೆ ತಲುಪಿತು.
ಜಾಗತಿಕ ಕಚ್ಚಾತೈಲ ದರದ ಸೂಚ್ಯಂಕ ಬ್ರೆಂಟ್ ಕ್ರೂಡ್ ಶೇ 0.21 ಕೆಳಗಿಳಿದು ಪ್ರತಿ ಬ್ಯಾರೆಲ್ಗೆ 93.80 ಯುಎಸ್ ಡಾಲರ್ ಆಗಿದೆ.
ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ 30 ಶೇರುಗಳ ಬಿಎಸ್‌ಇ ಸೆನ್ಸೆಕ್ಸ್ 292.69 ಪಾಯಿಂಟ್ ಅಥವಾ ಶೇ 0.49 ಏರಿಕೆಯಾಗಿ 60,407.82 ಕ್ಕೆ ವಹಿವಾಟು ನಡೆಸುತ್ತಿದೆ. ಅದೇ ರೀತಿ, ವಿಶಾಲವಾದ ಎನ್‌ಎಸ್‌ಇ ನಿಫ್ಟಿ 93.25 ಪಾಯಿಂಟ್ ಅಥವಾ ಶೇ 0.52 ರಷ್ಟು ಏರಿಕೆಯಾಗಿ 18,029.60 ಕ್ಕೆ ತಲುಪಿದೆ.