ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ 38 ಪೈಸೆ ಇಳಿಕೆಯಾಗಿ 81.78ರಲ್ಲಿ ವ್ಯವಹಾರ ನಡೆಸಿದೆ. ಸ್ಥಳೀಯ ಈಕ್ವಿಟಿ ಮಾರುಕಟ್ಟೆಯಲ್ಲಿನ ನೀರಸ ವಾತಾವರಣ ಮತ್ತು ಅಪಾಯ ಬೇಡ ಎನ್ನುವ ಭಾವನೆಗಳ ಮೇಲೆ ರೂಪಾಯಿ ಮೌಲ್ಯ ಇಳಿಕೆಯಾಗಿದೆ ಎನ್ನಲಾಗ್ತಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆ ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಸ್ಥಳೀಯ ಕರೆನ್ಸಿಯು ಡಾಲರ್ ವಿರುದ್ಧ 81.65 ನಲ್ಲಿ ದುರ್ಬಲವಾಗಿ ಆರಂಭವಾಯಿತು. ನಂತರ 81.78ಕ್ಕೆ ಕುಸಿದು ಮತ್ತಷ್ಟು ಮೌಲ್ಯ ಕಳೆದುಕೊಂಡಿತು. ಈ ಮೂಲಕ ರೂಪಾಯಿ ತನ್ನ ಹಿಂದಿನ ಮುಕ್ತಾಯಕ್ಕಿಂತ 38 ಪೈಸೆ ನಷ್ಟ ದಾಖಲಿಸಿತು. ಶುಕ್ರವಾರ ಡಾಲರ್ ಎದುರು ರೂಪಾಯಿ 33 ಪೈಸೆ ಏರಿಕೆಯಾಗಿ 81.40ಕ್ಕೆ ಸ್ಥಿರವಾಗಿತ್ತು.
ಏತನ್ಮಧ್ಯೆ, ಆರು ಕರೆನ್ಸಿಗಳ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.04 ರಷ್ಟು ಕುಸಿದು 112.08 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 2.77 ರಷ್ಟು ಏರಿಕೆಯಾಗಿ 87.50 ಯುಎಸ್ ಡಾಲರ್ಗೆ ತಲುಪಿದೆ.
ದೇಶಿಯ ಇಕ್ವಿಟಿ ಮಾರುಕಟ್ಟೆಯಲ್ಲಿ, 30 ಶೇರುಗಳ ಬಿಎಸ್‌ಇ ಸೆನ್ಸೆಕ್ಸ್ 66.60 ಪಾಯಿಂಟ್ ಅಥವಾ 0.12 ರಷ್ಟು ಕಡಿಮೆಯಾಗಿ 57,360.32 ಕ್ಕೆ ವಹಿವಾಟು ನಡೆಸುತ್ತಿದೆ ಮತ್ತು ವಿಶಾಲವಾದ ಎನ್‌ಎಸ್‌ಇ ನಿಫ್ಟಿ 12.90 ಪಾಯಿಂಟ್ ಅಥವಾ 0.08 ರಷ್ಟು ಕುಸಿದು 17,081.45 ಕ್ಕೆ ತಲುಪಿದೆ. ಕಳೆದ ಎರಡು ತಿಂಗಳುಗಳಲ್ಲಿ ಖರೀದಿ ನಡೆಸಿದ ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ಮತ್ತೆ ಮಾರಾಟಕ್ಕೆ ಮುಂದಾಗಿದ್ದು, ಭಾರತೀಯ ಇಕ್ವಿಟಿ ಮಾರುಕಟ್ಟೆಗಳಿಂದ 7,600 ಕೋಟಿ ರೂಪಾಯಿ ಹಿಂಪಡೆದಿದ್ದಾರೆ.
ಇದನ್ನೂ ಓದಿ:ಪುಸ್ತಕ ಓದಿ ಅರ್ಥಶಾಸ್ತ್ರ ಹೇಳಬೇಡಿ, ವಾಸ್ತವ ನೋಡಿ ಅರ್ಥಶಾಸ್ತ್ರ ತಿಳಿದುಕೊಳ್ಳಿ: ಅಮಿತ್ ಶಾ