ಮುಂಬೈ (ಮಹಾರಾಷ್ಟ್ರ):ಜಾಗತಿಕ ಮಾರುಕಟ್ಟೆಗಳಲ್ಲಿ ಡಾಲರ್ ಪ್ರಾಬಲ್ಯ ಮತ್ತು ಭಾರತದ ದೇಶೀಯ ಷೇರು ಮಾರುಕಟ್ಟೆ ನಷ್ಟದ ಕಾರಣ ಡಾಲರ್ ಎದುರು ರೂಪಾಯಿ ಮತ್ತಷ್ಟು ಕುಸಿತ ಕಂಡಿದೆ. ಇಂದು ಅದು ಮತ್ತೂ 3 ಪೈಸೆ ಕುಸಿದು ಸಾರ್ವಕಾಲಿಕ 79.62 ಕ್ಕೆ ಇಳಿದು ಕನಿಷ್ಠ ದರ ದಾಖಲಿಸಿದೆ.
ದಿನದ ಆರಂಭದಲ್ಲಿ ಡಾಲರ್ ಎದುರು 79.55 ರಲ್ಲಿ ವಹಿವಾಟು ಆರಂಭಿಸಿದ ರೂಪಾಯಿ ಬಳಿಕ ಅದು ಏರಿಳಿತ ಕಂಡು ಗರಿಷ್ಠ 79.53 ಕ್ಕೆ ತಲುಪಿ ಮತ್ತೆ ಅದು ಕನಿಷ್ಠ ಮಟ್ಟ ಅಂದರೆ 79.68 ಕ್ಕೆ ಇಳಿಕೆ ಕಂಡಿತು. ದಿನದಾಂತ್ಯಕ್ಕೆ ಅದು 79.62 ರಲ್ಲಿ ಸ್ಥಿರಗೊಂಡಿತು.