ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ 6 ದಿನಗಳಲ್ಲಿ 8 ಲಕ್ಷ ಕೋಟಿಗೂ ಅಧಿಕ ನಷ್ಟ! - ಷೇರು ಮಾರುಕಟ್ಟೆ

ಶುಕ್ರವಾರ ಸತತ ಆರನೇ ದಿನವೂ ಈಕ್ವಿಟಿಗಳು ಕುಸಿತ ಮುಂದುವರಿದಿದ್ದು, ಷೇರು ಮಾರುಕಟ್ಟೆ ಹೂಡಿಕೆದಾರರು ರೂ. 8.30 ಲಕ್ಷ ಕೋಟಿಗಳಷ್ಟು ನಷ್ಟ ಅನುಭವಿಸಿದ್ದಾರೆ.

Lakh Crore Of Investors Money Erodes  Investors Money Erodes  Investors Money loss  Stock market investors  BSE Sensex has tumbled  ಸತತ ಆರನೇ ದಿನವೂ ಈಕ್ವಿಟಿಗಳು ಕುಸಿತ  ಷೇರು ಮಾರುಕಟ್ಟೆ ಹೂಡಿಕೆದಾರರು  ಲಕ್ಷ ಕೋಟಿಗಳಷ್ಟು ನಷ್ಟ ಅನುಭವ  ಆರಂಭಿಕ ಲಾಭವನ್ನು ಬಿಟ್ಟುಕೊಟ್ಟ ಸೂಚ್ಯಂಕ  ಸತತ ಆರನೇ ದಿನವೂ ನಷ್ಟ  ವಿದೇಶಿ ಹೂಡಿಕೆದಾರರು ಅಂತರಾಷ್ಟ್ರೀಯ ಬಡ್ಡಿದರಗಳ ಏರಿಕೆ  ಎಚ್‌ಡಿಎಫ್‌ಸಿ ಅವಳಿ ಷೇರುಗಳ ನಿರೀಕ್ಷಿತ ಮಾರಾಟ  ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿ  BSEಯಲ್ಲಿ 8 ಲಕ್ಷ ಕೋಟಿಗೂ ಅಧಿಕ ನಷ್ಟ  ಪುರಸಭೆಯ ಬಾಂಡ್ ಸೂಚ್ಯಂಕ ಪ್ರಾರಂಭ  ಪ್ರೆಸ್ಟೀಜ್​ ಕಂಪನಿಗೆ ದೆಹಲಿ ಕೋರ್ಟ್​ ಶಾಕ್​ ಷೇರು ಮಾರುಕಟ್ಟೆ  8 ಲಕ್ಷ ಕೋಟಿಗೂ ಅಧಿಕ ನಷ್ಟ
6 ದಿನಗಳಲ್ಲಿ 8 ಲಕ್ಷ ಕೋಟಿಗೂ ಅಧಿಕ ನಷ್ಟ!

By

Published : Feb 25, 2023, 8:09 AM IST

ಷೇರು ಮಾರುಕಟ್ಟೆ:ಆರಂಭಿಕ ಲಾಭವನ್ನು ಬಿಟ್ಟುಕೊಟ್ಟ ಸೂಚ್ಯಂಕಗಳು ಸತತ ಆರನೇ ದಿನವೂ ನಷ್ಟ ಅನುಭವಿಸಿವೆ. ವಿದೇಶಿ ಹೂಡಿಕೆದಾರರು ಅಂತಾರಾಷ್ಟ್ರೀಯ ಬಡ್ಡಿದರಗಳ ಏರಿಕೆಯ ಭಯದಿಂದ ಮಾರಾಟ ಮುಂದುವರೆಸಿದರು. ಎಚ್‌ಡಿಎಫ್‌ಸಿ ಅವಳಿ ಷೇರುಗಳ ನಿರೀಕ್ಷಿತ ಮಾರಾಟದ ಒತ್ತಡವು ಭಾವನೆಯ ಮೇಲೆ ತೂಗುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಇಳಿಕೆಯಾಗಿ 82.75ಕ್ಕೆ ತಲುಪಿದೆ. ಕಚ್ಚಾ ತೈಲವು ಬ್ಯಾರೆಲ್‌ಗೆ 82.97ರೂ ಮಾರಾಟವಾಗುತ್ತಿದೆ. ಜಪಾನ್ ಹೊರತುಪಡಿಸಿ ಏಷ್ಯಾದ ಮಾರುಕಟ್ಟೆಗಳು ನಷ್ಟದಲ್ಲಿ ಕೊನೆಗೊಂಡಿವೆ. ಯುರೋಪಿಯನ್ ಸೂಚ್ಯಂಕಗಳು ಲಾಭದಲ್ಲಿ ಸಾಗಿದವು.

BSEಯಲ್ಲಿ 8 ಲಕ್ಷ ಕೋಟಿಗೂ ಅಧಿಕ ನಷ್ಟ:ಹೂಡಿಕೆದಾರರ ಸಂಪತ್ತು ಎಂದು ಪರಿಗಣಿಸಲಾಗಿರುವ ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ಕಳೆದ 6 ವಹಿವಾಟು ದಿನಗಳಲ್ಲಿ ರೂ.8.30 ಲಕ್ಷ ಕೋಟಿಗಳಷ್ಟು ನಷ್ಟ ಸಂಭವಿಸಿ ರೂ.260 ಲಕ್ಷ ಕೋಟಿಗೆ ತಲುಪಿದೆ. ಕಳೆದ 6 ಸೆಷನ್‌ಗಳಲ್ಲಿ ಸೆನ್ಸೆಕ್ಸ್ 1855.58 ಅಂಕ ಮತ್ತು ನಿಫ್ಟಿ 570 ಅಂಕಗಳನ್ನು ಕಳೆದುಕೊಂಡಿದೆ.

ಇಳಿಕೆಯ ಹಾದಿ ಹಿಡಿದ ಸೆನ್ಸೆಕ್ಸ್​: ಕಳೆದ ದಿನ ಬೆಳಗ್ಗೆ 59,859.48 ರಲ್ಲಿ ಸೆನ್ಸೆಕ್ಸ್ ಗಳಿಕೆಯಲ್ಲಿ ಪ್ರಾರಂಭವಾಯಿತು. ಆದರೂ ಮಾರಾಟದ ಒತ್ತಡದಿಂದ ಸೂಚ್ಯಂಕವು ನಷ್ಟಕ್ಕೆ ಧುಮುಕಿತು.. ಇದು ಇಂಟ್ರಾಡೇ ಕನಿಷ್ಠ 59,325.34 ಅಂಕಗಳಿಗೆ ಕುಸಿಯಿತು. ಅಂತಿಮವಾಗಿ 141.87 ಅಂಕಗಳ ನಷ್ಟದೊಂದಿಗೆ 59,463.93ಕ್ಕೆ ಕೊನೆಗೊಂಡಿತು. ನಿಫ್ಟಿ 45.45 ಅಂಕ ಕುಸಿದು 17,465.80ಕ್ಕೆ ಸ್ಥಿರವಾಯಿತು.

ಅದಾನಿ ಷೇರುಗಳು ಬೆಲೆಯಲ್ಲಿ ಮತ್ತೆ ಕುಸಿತ: ಅದಾನಿ ಸಮೂಹದ ಷೇರುಗಳ ಕುಸಿತ ಮುಂದುವರಿದಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇ 5ರಷ್ಟು, ಅದಾನಿ ಗ್ರೀನ್ 5%, ಅದಾನಿ ಟೋಟಲ್ ಗ್ಯಾಸ್ 5%, ಅದಾನಿ ಎಂಟರ್‌ಪ್ರೈಸಸ್ 4.98%, ಅದಾನಿ ಪವರ್ 4.98%, NDTV 4.05%, ಅದಾನಿ ವಿಲ್ಮರ್ 3.35%. ಅಂಬುಜಾ ಸಿಮೆಂಟ್ಸ್ ಶೇ.2.45, ಅದಾನಿ ಪೋರ್ಟ್ಸ್ ಶೇ.1.24 ಮತ್ತು ಎಸಿಸಿ ಶೇ.0.03ರಷ್ಟು ಲಾಭ ಗಳಿಸಿದವು. ಹಿಂಡೆನ್‌ಬರ್ಗ್ ವರದಿ ಬಿಡುಗಡೆಯಾದ ನಂತರ ಅದಾನಿ ಗ್ರೂಪ್ ಷೇರುಗಳ ಮಾರುಕಟ್ಟೆ ಮೌಲ್ಯವು ಇಲ್ಲಿಯವರೆಗೆ 12.03 ಲಕ್ಷ ಕೋಟಿ ರೂಪಾಯಿಗಳಷ್ಟು ಕುಸಿದಿದೆ.

ಇಂಧನ ಯೋಜನೆಗಳಿಗೆ ಅನುಮೋದನೆ: ಶ್ರೀಲಂಕಾ ಹೂಡಿಕೆ ಪ್ರಚಾರ ಮಂಡಳಿಯು ಶ್ರೀಲಂಕಾದಲ್ಲಿ $442 ಮಿಲಿಯನ್ ಹೂಡಿಕೆಯೊಂದಿಗೆ ಅದಾನಿ ಗ್ರೂಪ್ ಸ್ಥಾಪಿಸಲು ಎರಡು ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅನುಮೋದಿಸಿದೆ. ಸ್ಪೈಸ್‌ಜೆಟ್ ಷೇರು ಏರಿಕೆ- ಡಿಸೆಂಬರ್ ತ್ರೈಮಾಸಿಕದಲ್ಲಿ 107 ಕೋಟಿ ಲಾಭವನ್ನು ಘೋಷಿಸಿದ ನಂತರ, ಸ್ಪೈಸ್‌ಜೆಟ್ ಷೇರು ಶೇಕಡಾ 12.31 ರಷ್ಟು ಏರಿಕೆಯಾಗಿ 39.70 ಕ್ಕೆ ತಲುಪಿದೆ.

Zee ದಿವಾಳಿತನದ ಪ್ರಕ್ರಿಯೆಗಳ ಮೇಲೆ NCLAT ತಡೆ:ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ, ಮುಂಬೈ ಬೆಂಚ್‌ನ ಆದೇಶದ ಮೇರೆಗೆ Zee ಎಂಟರ್‌ಟೈನ್‌ಮೆಂಟ್ ವಿರುದ್ಧ ಪ್ರಾರಂಭಿಸಲಾದ ದಿವಾಳಿತನದ ಪ್ರಕ್ರಿಯೆಗಳನ್ನು ತಡೆಹಿಡಿಯಿತು. ಕಂಪನಿಗೆ ಸಾಲ ನೀಡಿರುವ ಇಂಡಸ್‌ಇಂಡ್ ಬ್ಯಾಂಕ್ ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಮಧ್ಯಂತರ ನಿರ್ಣಯ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ಮಾರ್ಚ್ 29 ರಂದು ನಡೆಯಲಿದೆ. ಈ ಹಿನ್ನೆಲೆ ರೂ.188 ರ ಇಂಟ್ರಾಡೇ ಕನಿಷ್ಠ ಮಟ್ಟ ತಲುಪಿದ Zee ಷೇರು ಅಂತಿಮವಾಗಿ ಶೇ.1.58ರಷ್ಟು ನಷ್ಟದೊಂದಿಗೆ ರೂ.195.60ಕ್ಕೆ ಮುಕ್ತಾಯವಾಯಿತು.

ಜಿಂದಾಲ್​ ಕೋಟೆಕ್ಸ್​ಗೆ ವಿಧಿಸಿದ್ದ ದಂಡ ಇಳಿಕೆ:ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ಜಿಡಿಆರ್‌ಗಳ ವಿತರಣೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಿಂದಾಲ್ ಕೋಟೆಕ್ಸ್‌ಗೆ ಸೆಬಿ ವಿಧಿಸಿದ್ದ 10.3 ಕೋಟಿ ರೂಪಾಯಿ ದಂಡವನ್ನು 25 ಲಕ್ಷಕ್ಕೆ ಇಳಿಸಿದೆ.

ವಿದೇಶಿ ವಿನಿಮಯ ಮೀಸಲು ಮತ್ತೆ ಇಳಿಕೆ: ಫೆಬ್ರವರಿ 17ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ (ಫಾರೆಕ್ಸ್) ಮೀಸಲು $5.68 ಶತಕೋಟಿ (ಸುಮಾರು ರೂ. 46,000 ಕೋಟಿ) $561.267 ಶತಕೋಟಿ (ರೂ. 46 ಲಕ್ಷ ಕೋಟಿ) ಗೆ ಕುಸಿದಿದೆ ಎಂದು ಆರ್‌ಬಿಐ ಹೇಳಿದೆ. ಇದು ಸತತ ಮೂರನೇ ವಾರದಲ್ಲಿ ಫಾರೆಕ್ಸ್ ಷೇರುಗಳು ಕುಸಿತ ಕಂಡಿವೆ. ವಿದೇಶಿ ಕರೆನ್ಸಿ ಆಸ್ತಿಗಳು 4.515 ಶತಕೋಟಿ ಡಾಲರ್‌ಗಳಿಂದ 496.072 ಶತಕೋಟಿ ಡಾಲರ್‌ಗಳಿಗೆ ಇಳಿದಿವೆ.

ಓದಿ:ಟಾಪ್​ ಗನ್​ ವಿಮಾನ​ ಉತ್ಪಾದನೆ ಸ್ಥಗಿತಗೊಳಿಸಲು ಮುಂದಾದ ಬೋಯಿಂಗ್​

ABOUT THE AUTHOR

...view details