ಕರ್ನಾಟಕ

karnataka

ETV Bharat / business

ಡ್ರೀಮ್​11 ಸೇರಿ ಆನ್ಲೈನ್​ ಗೇಮಿಂಗ್​ ಕಂಪನಿಗಳಿಗೆ 55 ಸಾವಿರ ಕೋಟಿ ರೂ. ಜಿಎಸ್​ಟಿ ಬಾಕಿ ನೋಟಿಸ್​ - ಆನ್ಲೈನ್ ರಿಯಲ್ ಮನಿ ಗೇಮಿಂಗ್

ಒಟ್ಟಾರೆ 55 ಸಾವಿರ ಕೋಟಿ ರೂಪಾಯಿ ಜಿಎಸ್​​ಟಿ ಬಾಕಿ ಪಾವತಿಸುವಂತೆ ಆನ್ಲೈನ್​ ಗೇಮಿಂಗ್ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ.

DGGI slaps Dream11, other online gaming firms tax notices totalling Rs 55,000 crore
DGGI slaps Dream11, other online gaming firms tax notices totalling Rs 55,000 crore

By ETV Bharat Karnataka Team

Published : Sep 26, 2023, 7:32 PM IST

ನವದೆಹಲಿ :ಸುಮಾರು 55,000 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಂಚಿಸಿದ ಆರೋಪದ ಮೇಲೆ ಆನ್ಲೈನ್ ರಿಯಲ್ ಮನಿ ಗೇಮಿಂಗ್ (ಆರ್​ಎಂಜಿ) ಸಂಸ್ಥೆಗಳಿಗೆ ಜಿಎಸ್​ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಸುಮಾರು 12 ಪ್ರಿ-ಶೋಕಾಸ್ ನೋಟಿಸ್​​ಗಳನ್ನು ನೀಡಿದೆ ಎಂದು ವರದಿಯಾಗಿದೆ. ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್​ಫಾರ್ಮ್​ ಡ್ರೀಮ್ 11ಗೆ 25,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ನೋಟಿಸ್ ನೀಡಲಾಗಿದೆ. ಆದರೆ ಡ್ರೀಮ್ 11 ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡ್ರೀಮ್ 11 ಜೊತೆಗೆ, ಪ್ಲೇ ಗೇಮ್ಸ್ 24×7 ಮತ್ತು ಅದರ ಅಂಗಸಂಸ್ಥೆಗಳಿಗೆ ಮತ್ತು ಹೆಡ್ ಡಿಜಿಟಲ್ ವರ್ಕ್ಸ್ ಗೆ ಪ್ರೀ-ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ಅಧಿಕಾರಿಗಳು ಡಿಆರ್ ಸಿ -01 ಎ ಫಾರ್ಮ್ ಮೂಲಕ ನಿರ್ಧರಿಸಿದ ತೆರಿಗೆ ಬಾಕಿಗಳ ನೋಟಿಸ್​ಗಳನ್ನು ಸಹ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಹರ್ಷ್ ಜೈನ್ ನೇತೃತ್ವದ ಡ್ರೀಮ್ 11 ತನಗೆ ಕಳುಹಿಸಲಾದ ಶೋಕಾಸ್ ನೋಟಿಸ್​ಗೆ ಪ್ರತಿಕ್ರಿಯೆಯಾಗಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದೆ. ಇದಲ್ಲದೆ, ಮುಂಬರುವ ವಾರಗಳಲ್ಲಿ ಇದೇ ರೀತಿಯ ಮತ್ತಷ್ಟು ನೋಟಿಸ್​ಗಳು ಬರಬಹುದು ಎಂದು ಕಂಪನಿ ನಿರೀಕ್ಷಿಸಿದೆ.

ಡಿಜಿಜಿಐ ಎಣಿಕೆ ಮಾಡಿದಂತೆ ಆರ್​ಎಂಜಿ ಕಂಪನಿಗಳಿಂದ ಒಟ್ಟು ಜಿಎಸ್​ಟಿ ಬೇಡಿಕೆ 1 ಲಕ್ಷ ಕೋಟಿ ರೂ.ಗಳನ್ನು ತಲುಪಬಹುದು ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಆನ್ಲೈನ್ ಗೇಮಿಂಗ್ ಪ್ಲಾಟ್​ಫಾರ್ಮ್​ಗಳ ಮೇಲೆ ಶೇಕಡಾ 28 ರಷ್ಟು ಜಿಎಸ್​ಟಿ ವಿಧಿಸಲು ಜಿಎಸ್​ಟಿ ಕೌನ್ಸಿಲ್ ನಿರ್ಧಾರ ತೆಗೆದುಕೊಂಡ ನಂತರ ಈ ನೋಟಿಸ್​ಗಳನ್ನು ಕಳುಹಿಸಲಾಗಿದೆ. ಆರಂಭಿಕ ಹಂತದಲ್ಲಿ ಮಾಡಿದ ಬೆಟ್ಟಿಂಗ್​ಗಳ ಸಂಪೂರ್ಣ ಮುಖಬೆಲೆಯ ಆಧಾರದ ಮೇಲೆ ಜಿಎಸ್​ಟಿ ಲೆಕ್ಕಹಾಕಲಾಗುತ್ತದೆ.

ಪ್ಲೇ ಗೇಮ್ಸ್ 24×7 ಮತ್ತು ರಮ್ಮಿ ಸರ್ಕಲ್ ಮತ್ತು ಮೈ 11 ಸರ್ಕಲ್ ಸೇರಿದಂತೆ ಅದರ ಸಂಬಂಧಿತ ಕಂಪನಿಗಳಿಗೆ 20,000 ಕೋಟಿ ರೂ.ಗಳ ಜಿಎಸ್​ಟಿ ಬಾಕಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಹೆಚ್ಚುವರಿಯಾಗಿ, ಹೆಡ್ ಡಿಜಿಟಲ್ ವರ್ಕ್ಸ್ ಗೆ 5,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತಕ್ಕಾಗಿ ಪ್ರಿ-ಶೋಕಾಸ್ ನೋಟಿಸ್ ನೀಡಲಾಗಿದೆ. ರಮ್ಮಿ ಸರ್ಕಲ್ ಅಥವಾ ಮೈ 11 ಸರ್ಕಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೂ ಮೊದಲು ಬೆಂಗಳೂರು ಮೂಲದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿ ಎಂಬ ಕಂಪನಿಗೆ ಒಟ್ಟು 21,000 ಕೋಟಿ ರೂ.ಗಳಷ್ಟು ಗರಿಷ್ಠ ಮೊತ್ತದ ಜಿಎಸ್​ಟಿ ಬಾಕಿ ಬೇಡಿಕೆಯ ನೋಟಿಸ್ ನೀಡಲಾಗಿತ್ತು.

ಇದನ್ನೂ ಓದಿ : ಪ್ರಥಮ ಬಾರಿಗೆ 16 ಕೋಟಿ ನಿವ್ವಳ ಲಾಭ ಗಳಿಸಿದ ಓಯೋ

ABOUT THE AUTHOR

...view details