ಹೈದರಾಬಾದ್: ಕೋವಿಡ್ ಕಾಲದಲ್ಲಿ ವಲಸೆ ಹೋಗುವುದು ಎಂದರೆ ಬಡವರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ವಲಸೆ ಹೋಗುವುದಾಗಿತ್ತು. ಕೊರೊನಾ ಕಡಿಮೆಯಾದಂತೆ ಆ ವಲಸೆ ಪ್ರಕ್ರಿಯೆಗಳು ಕಡಿಮೆಯಾದವು. ಆದರೆ, ವಿವಿಧ ದೇಶಗಳಿಂದ ಅಲ್ಲಿನ ಶ್ರೀಮಂತರು ಇತರ ದೇಶಗಳಿಗೆ ವಲಸೆ ಹೋಗುವುದು ಮಾತ್ರ ದಶಕಗಳಿಂದಲೂ ನಡೆದಿದೆ. ಯಾವೆಲ್ಲ ದೇಶಗಳಿಂದ ಜನ ಯಾವ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬುದನ್ನು ನೋಡೋಣ.
ಶ್ರೀಮಂತರು ಯಾರು.. 10 ಲಕ್ಷ ಅಮೆರಿಕನ್ ಡಾಲರ್ಗಳಷ್ಟು ಅಥವಾ ಅದಕ್ಕೂ ಹೆಚ್ಚು ಸಂಪತ್ತು ಹೊಂದಿರುವವರನ್ನು ಶ್ರೀಮಂತರು ಎನ್ನಲಾಗುತ್ತದೆ.( ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 8,11,90,500 ರೂ ಆಗುತ್ತದೆ) ಗ್ಲೋಬಲ್ ಕನ್ಸಲ್ಟಂಟ್ ಹೆನ್ಲೇ ಅಂಡ್ ಪಾರ್ಟನರ್ ಪ್ರಕಾರ ಶ್ರೀಮಂತರ ವಲಸೆ ಈ ವರ್ಷ ಹೆಚ್ಚಾಗಿದೆಯಂತೆ. ಕಳೆದ ಒಂದು ದಶಕದಲ್ಲಿ ಅವರ ವಲಸೆ ಪ್ರಮಾಣ ಹೆಚ್ಚಾಗಿದ್ದರೂ ಕೋವಿಡ್ ಸಮಯದಲ್ಲಿ ಕಡಿಮೆಯಾಗಿತ್ತು.
ಎಲ್ಲಿಂದ ಎಲ್ಲಿಗೆ? :ಜಗತ್ತಿನಲ್ಲಿ ರಷ್ಯಾದಿಂದ (15 ಸಾವಿರ), ಚೀನಾದಿಂದ (10 ಸಾವಿರ) ಮತ್ತು ಭಾರತದಿಂದ (8 ಸಾವಿರ) ಜನ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಇವುಗಳ ಜೊತೆಗೆ, ಹಾಂಕಾಂಗ್, ಉಕ್ರೇನ್, ಬ್ರೆಜಿಲ್, ಮೆಕ್ಸಿಕೋ, ಯುನೈಟೆಡ್ ಕಿಂಗ್‌ಡಮ್, ಸೌದಿ ಅರೇಬಿಯಾ ಮತ್ತು ಇಂಡೋನೇಷ್ಯಾದಿಂದ ವಲಸೆ ಹೋದವರ ಸಂಖ್ಯೆ ಕೂಡ ದೊಡ್ಡದಾಗಿದೆ.