ಯಾವುದೇ ಉದ್ಯೋಗಕ್ಕಾಗಿ ಕೆಲಸಕ್ಕೆ ಅರ್ಜಿ ಹಾಕಲು ರೆಸ್ಯೂಮ್ ಪ್ರಮುಖ ಪಾತ್ರವಹಿಸುತ್ತದೆ. ಅಭ್ಯರ್ಥಿ ಮತ್ತು ನೇಮಕ ಮಾಡುವವರ ನಡುವಿನ ಸೇತುವೆಯಾಗಿ ರೆಸ್ಯೂಮ್ ಕಾರ್ಯ ನಿರ್ವಹಿಸುತ್ತದೆ. ಉದ್ಯೋಗಿಯು ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ತಪ್ಪದೇ ತಮ್ಮ ರೆಸ್ಯೂಮ್ನ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗುತ್ತಾರೆ. ಈ ರೆಸ್ಯೂಮ್ ಗಮನಿಸಿ ಅನೇಕ ಕಂಪನಿಗಳು ಅಭ್ಯರ್ಥಿಗಳ ಬಗ್ಗೆ ಮೊದಲಿಗೆ ಒಂದು ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತವೆ. ಸಂದರ್ಶನದ ಬಳಿಕ ಆಯ್ಕೆ ಮಾಡಬೇಕೇ ಬೇಡವೇ ಎಂಬ ನಿರ್ಧಾರ ಮಾಡಲಾಗುತ್ತದೆ. ಇಷ್ಟು ವರ್ಷಗಳ ಕಾಲ ನೇಮಕಾತಿ ವೇಳೆ ರೆಸ್ಯೂಮ್ ಮಹತ್ವವನ್ನು ಹೊಂದಿತು. ಆದರೆ, ಇನ್ಮುಂದೆ ಈ ರೆಸ್ಯೂಮ್ ತನ್ನ ಪಾತ್ರ ಕಳೆದುಕೊಳ್ಳಲಿದೆ ಎಂದರೆ ತಪ್ಪಲ್ಲ.
ಇತ್ತೀಚಿನ ದಿನದಲ್ಲಿ ರೆಸ್ಯೂಮ್ ಎಂಬುದು ಹಳಸಿದ ಅಂಶವಾಗಿದೆ. ಇದಕ್ಕೆ ಕಾರಣ ಹಲವು ಇದೆ. ಅದರಲ್ಲಿ ಮುಖ್ಯ ಅಂಶ ಎಂದರೆ ನೇಮಕಾತಿ ಏಜೆನ್ಸಿಗಳು ತಮ್ಮ ಅಭ್ಯರ್ಥಿಗಳು ಆಧುನಿಕ ಮಾದರಿಗಳ ಮೂಲಕ ಆಯ್ಕೆಗೆ ಒತ್ತು ನೀಡುತ್ತಿವೆ. ಇದಕ್ಕಾಗಿ ಕಂಪನಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿವೆ. ಸಾಮಾಜಿಕ ಮಾಧ್ಯಮ ಫ್ಲಾಟ್ಫಾರ್ಮ್ ಬಳಕೆಯಿಂದ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಗಳನ್ನು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಿವೆ.
'ನೋ ರೆಸ್ಯೂಮ್‘ ಪಾಲಿಸಿ: ಟ್ಯಾಲೆಂಟ್ ಸೆಟ್ರಿಕ್ ರಿಕ್ರೂಟ್ಮೆಂಟ್' ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಅನೇಕ ಡಿಜಿಟಲ್ ಸಂಪನ್ಮೂಲಗಳು ಲಭ್ಯವಿದ್ದು, ಇದರ ಆಧಾರದ ಮೇಲೆ ಕಂಪನಿಗಳು ನಿರ್ಧಾರವನ್ನು ಕೈಗೊಳ್ಳುತ್ತಿವೆ. ಟಾಪ್ ನೇಮಕಾತಿ ಚಾನೆಲ್ಗಳು, ಆನ್ಲೈನ್ ಪೋರ್ಟಲ್, ಎಂಪ್ಲಾಯಿ ರೆಫ್ರೆನ್ಸ್ (ಉದ್ಯೋಗಿ ಸಲಹೆ) ಹೀಗೆ ಹಲವು ಹೊಸ ತಂತ್ರಜ್ಞಾನಗಳು ಇದೀಗ ನೇಮಕಾತಿ ಪ್ರಕ್ರಿಯೆ ಭಾಗವಾಗಿದೆ.