ಮುಂಬೈ:ಕಳೆದ ಕೆಲ ವಾರಗಳ ಹಿಂದೆ ರೆಪೋ ದರ ಏರಿಕೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ದಿಢೀರ್ ಆಗಿ ಮತ್ತೊಮ್ಮೆ ರೆಪೋ ದರದಲ್ಲಿ ಏರಿಕೆ ಮಾಡಿದೆ. ಹೀಗಾಗಿ, ವಿವಿಧ ಇಎಂಐ, ಸಾಲದ ಮೇಲಿನ ಬಡ್ಡ ದರ ಮತ್ತಷ್ಟು ದುಬಾರಿಯಾಗಲಿವೆ. 40 ಬೇಸಿಸ್ ಪಾಯಿಂಟ್ಸ್ಗಳೊಂದಿಗೆ ರೆಪೋ ದರ ಶೇ. 4.90ಕ್ಕೆ ಹೆಚ್ಚಳ ಮಾಡಲಾಗಿದೆ.
ಹಣದುಬ್ಬರ ಹತೋಟಿಗೆ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ ,ಮಹತ್ವದ ಮಾಹಿತಿ ಹೊರಹಾಕಿದ್ದಾರೆ. ರೆಪೋ ದರ ಇದೀಗ 4.4 ರಿಂದ 4.9ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಕೆಲ ದಿನಗಳ ಹಿಂದೆ ತಕ್ಷಣವೇ ಜಾರಿಗೆ ಬರುವಂತೆ 40 ಬೇಸಿಸ್ ಪಾಯಿಂಟ್ಸ್ಗಳೊಂದಿಗೆ ರೆಪೋ ದರ ಶೇ. 4.40ಕ್ಕೆ ಏರಿಕೆ ಮಾಡಿತ್ತು.