ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮತ್ತೊಮ್ಮೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಈ ಆರೋಪ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಾರ್ಯದರ್ಶಿ ಮತ್ತು ಮಂಡಳಿ ಸದಸ್ಯರನ್ನು ಚಿಂತೆಗೀಡು ಮಾಡಿದೆ. ವರದಿಗಳ ಪ್ರಕಾರ, ಮಸ್ಕ್ ಖಾಸಗಿ ಪಾರ್ಟ್ಯಲ್ಲಿ ಎಲ್ಎಸ್ಡಿ, ಕೊಕೈನ್, ಸೈಕೆಡೆಲಿಕ್ ಅಣಬೆಗಳ ಸೇವನೆ ಮಾಡಿದ್ದಾರೆ. ಇದು ಅವರ ಆರೋಗ್ಯ ಮತ್ತು ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ನ ಹೊಸ ವರದಿ ಅನುಸಾರ, ಎಲಾನ್ ಮಸ್ಕ್ ಕೆಟಮೈನ್ ಸೇವಿಸುತ್ತಿರುವುದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಸ್ಕ್ ಡ್ರಗ್ ಬಳಕೆ ಮತ್ತು ನಡವಳಿಕೆಯಲ್ಲಿನ ಬದಲಾವಣೆಗಳು ಬೋರ್ಡ್ ಸದಸ್ಯರ ತಲೆಬಿಸಿ ಹೆಚ್ಚಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ಗೆ ಈ ಕುರಿತು ಮಾತನಾಡಿರುವ ಮಸ್ಕ್ ಅಟರ್ನಿ ಅಲೆಕ್ಸ್ ಸ್ಪಿರೊ, ನಿಯಮಿತವಾಗಿ ಮತ್ತು ಯಾದೃಚ್ಚಿಕವಾಗಿ ಸ್ಪೇಸ್ ಎಕ್ಸ್ನಲ್ಲಿ ಡ್ರಗ್ ಪರೀಕ್ಷೆ ನಡೆಸಲಾಗುತ್ತಿದೆ. ಇದೊಂದು ಸುಳ್ಳು ಆರೋಪ ಎಂದಿದ್ದಾರೆ.