ಕ್ರೆಡಿಟ್ ಸ್ಕೋರ್ ಆಧರಿಸಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಮಿತಿ ನಿರ್ಧರಿಸುತ್ತವೆ. ಆದರೆ, ಕೆಲವೊಮ್ಮೆ ನಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ ಮಾಡಲಾಗುತ್ತದೆ, ಇನ್ನು ಕೆಲವೊಮ್ಮೆ ಈ ಮಿತಿಯನ್ನು ಹೆಚ್ಚಿಸಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಮಿತಿ ಇಳಿಕೆಗೆ ಕಾರಣಗಳು:ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಕೆಲವು ಇತಿಮಿತಿಗಳೊಂದಿಗೆ ಕಾರ್ಡ್ ನೀಡುತ್ತವೆ. ಆದರೆ, ಇವುಗಳನ್ನು ವಿತರಿಸುವ ಮುನ್ನ ಬ್ಯಾಂಕುಗಳು ಕೆಲ ವಿಷಯಗಳನ್ನು ಪರಿಗಣಿಸುತ್ತವೆ. ಮುಖ್ಯವಾಗಿ ವೈಯಕ್ತಿಕ ಆದಾಯ ಮತ್ತು ಸಕಾಲಿಕ ಪಾವತಿಗಳನ್ನು ಒಳಗೊಂಡಿರುತ್ತದೆ. ಇದರ ಆಧಾರದ ಮೇಲೆಯೇ ನೀಡಲಾದ ಕ್ರೆಡಿಟ್ ಕಾರ್ಡ್ ಮಿತಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಬದಲಾವಣೆಯಿಂದಾಗಿ ನಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು.
ಹೆಚ್ಚು ಬಳಸಿದರೆ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ : ಬ್ಯಾಂಕುಗಳು ತಮ್ಮ ಗ್ರಾಹಕರ ಕ್ರೆಡಿಟ್ ಕಾರ್ಡ್ ಬಳಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತವೆ. ನಿಶ್ಚಿತ ಕ್ರೆಡಿಟ್ ಮಿತಿಯಲ್ಲಿ ಎಷ್ಟು ಖರ್ಚು ಮಾಡಲಾಗುತ್ತಿದೆ? ಎಂಬುದನ್ನು ಕಾಲಕಾಲಕ್ಕೆ ಗಮನಿಸಲಾಗುತ್ತದೆ. ಉದಾಹರಣೆಗೆ, ಒಬ್ಬ ಗ್ರಾಹಕನಿಗೆ 2 ಲಕ್ಷ ರೂ.ಗಳ ಕ್ರೆಡಿಟ್ ಕಾರ್ಡ್ ಮಿತಿ ಇದೆ ಎಂದಿಟ್ಟುಕೊಳ್ಳಿ. ಅದರಲ್ಲಿ 60,000 - 80,000 ರೂ.ಗಳನ್ನು ಖರ್ಚು ಮಾಡಿದರೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ನೀವು ನೀಡಲಾದ ಮಿತಿಯಲ್ಲಿ 1,50,000 ರೂ. ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ನಿಮ್ಮನ್ನು ಅಪಾಯಕಾರಿ ಗ್ರಾಹಕ ಎಂದು ಪರಿಗಣಿಸುತ್ತಾರೆ ಮತ್ತು ತಕ್ಷಣವೇ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡುತ್ತಾರೆ.
ದೀರ್ಘಕಾಲ ಕಾರ್ಡ್ ಬಳಸದಿದ್ದರೂ ಸಮಸ್ಯೆ :ದೀರ್ಘಕಾಲದವರೆಗೆ ಕ್ರೆಡಿಟ್ ಕಾರ್ಡ್ ಬಳಸದವರೂ ಸಹ ಕ್ರೆಡಿಟ್ ಮಿತಿ ಸಮಸ್ಯೆಯನ್ನು ಎದುರಿಸುತ್ತಾರೆ. ಆಯಾ ಬ್ಯಾಂಕ್‌ಗಳು ಇನ್ - ಆಕ್ಟಿವೇಟೆಡ್ ಕ್ರೆಡಿಟ್ ಕಾರ್ಡ್‌ಗಳಿಂದ ಯಾವುದೇ ಪ್ರಯೋಜನಗಳನ್ನು ಪಡೆಯುವುದಿಲ್ಲ. ಆದ್ದರಿಂದ ನಿಷ್ಕ್ರಿಯ ಕಾರ್ಡ್‌ದಾರರ ಮಿತಿಯನ್ನು ಬ್ಯಾಂಕ್‌ಗಳು ಕಡಿತ ಮಾಡುತ್ತವೆ.