ಕರ್ನಾಟಕ

karnataka

ETV Bharat / business

RBI: ರಾಜಿ ಇತ್ಯರ್ಥದ ಬಗ್ಗೆ ಯಾವುದೇ ಹೊಸ ನಿಯಮ ತಂದಿಲ್ಲ: ಆರ್​ಬಿಐ ಸ್ಪಷ್ಟನೆ

ಸಾಲಗಾರರೊಂದಿಗೆ ಸಾಲದಾತರು ರಾಜಿ ಇತ್ಯರ್ಥ ಮಾಡಿಕೊಳ್ಳುವ ವಿಷಯದಲ್ಲಿ ಯಾವುದೇ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

RBI On Wilful Defaulters
RBI On Wilful Defaulters

By

Published : Jun 21, 2023, 6:22 PM IST

ನವದೆಹಲಿ : ವಂಚಕ ಅಥವಾ ಉದ್ದೇಶಪೂರ್ವಕ ಸುಸ್ತಿದಾರರು ಎಂದು ವರ್ಗೀಕರಿಸಲಾದ ಸಾಲಗಾರರೊಂದಿಗೆ ಸಾಲದಾತರು ರಾಜಿ ಇತ್ಯರ್ಥ ಮಾಡಿಕೊಳ್ಳುವ (ಸೆಟ್ಲ್‌ಮೆಂಟ್) ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ನಿಯಮಗಳನ್ನು ಜಾರಿ ಮಾಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಂಗಳವಾರ ಜೂನ್ 20 ರಂದು ಸ್ಪಷ್ಟಪಡಿಸಿದೆ. ಜೂನ್ 8, 2023 ರ 'ಫ್ರೇಮ್‌ವರ್ಕ್ ಫಾರ್ ಕಾಂಪ್ರಮೈಸ್ ಸೆಟಲ್‌ಮೆಂಟ್ಸ್ ಮತ್ತು ಟೆಕ್ನಿಕಲ್ ರೈಟ್-ಆಫ್ಸ್' ಸುತ್ತೋಲೆಯಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ (FAQs) 8-ಪಾಯಿಂಟ್ ರೆಕನರ್‌ ಒಂದನ್ನು ಆರ್​ಬಿಐ ಇಂದು ಬಿಡುಗಡೆ ಮಾಡಿದೆ.

FAQ ಗಳ ಪ್ರಕಾರ, ವಂಚಕ ಅಥವಾ ಉದ್ದೇಶಪೂರ್ವಕ ಡೀಫಾಲ್ಟರ್ ಎಂದು ವರ್ಗೀಕರಿಸಲಾದ ಸಾಲಗಾರರಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ರಾಜಿ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡುವ ನಿಬಂಧನೆಯು ಹೊಸ ನಿಯಂತ್ರಕ ಸೂಚನೆಯಲ್ಲ ಮತ್ತು 15 ವರ್ಷಗಳಿಗೂ ಹೆಚ್ಚು ಕಾಲದಿಂದ ಇರುವ ನಿಯಂತ್ರಕ ನಿಲುವಾಗಿದೆ. ಅಸ್ತಿತ್ವದಲ್ಲಿರುವ ಸೂಚನೆಗಳ ಪ್ರಕಾರ ಈ ಅವಕಾಶ ಈಗಾಗಲೇ ಬ್ಯಾಂಕ್‌ಗಳಿಗೆ ಲಭ್ಯವಿದೆ ಎಂದು ಆರ್​ಬಿಐ ಹೇಳಿದೆ.

ಇದಲ್ಲದೆ, ಹೊಸ ಸುತ್ತೋಲೆಯು ಉದ್ದೇಶಪೂರ್ವಕ ಸುಸ್ತಿದಾರರು ಅಥವಾ ವಂಚಕರು ಎಂದು ವರ್ಗೀಕರಿಸಲಾದ ಸಾಲಗಾರರಿಗೆ ಅನ್ವಯಿಸುವ ದಂಡದ ಕ್ರಮಗಳನ್ನು ದುರ್ಬಲಗೊಳಿಸುವುದಿಲ್ಲ ಮತ್ತು ಅಂತಹ ಸಾಲಗಾರರೊಂದಿಗೆ ಬ್ಯಾಂಕ್‌ಗಳು ರಾಜಿ ಇತ್ಯರ್ಥಕ್ಕೆ ಮುಂದಾಗುವ ಸಂದರ್ಭಗಳಲ್ಲಿ ಅನ್ವಯಿಸುವುದನ್ನು ಮುಂದುವರಿಸುತ್ತದೆ ಎಂದು ಆರ್‌ಬಿಐ ಉಲ್ಲೇಖಿಸಿದೆ.

ಅಲ್ಲದೆ, ಅಂಥ ದಂಡದ ಕ್ರಮಗಳು ಉದ್ದೇಶಪೂರ್ವಕ ಸುಸ್ತಿದಾರರೆಂದು ಪಟ್ಟಿ ಮಾಡಲಾದ ಸಾಲಗಾರರಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ನೀಡಬಾರದು ಮತ್ತು ಅಂತಹ ಕಂಪನಿಗಳ (ಅವರ ಉದ್ಯಮಿಗಳು ಅಥವಾ ಪ್ರವರ್ತಕರು ಸೇರಿದಂತೆ) ಹೆಸರನ್ನು ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಿಂದ ತೆಗೆದುಹಾಕುವ ದಿನಾಂಕದಿಂದ ಐದು ವರ್ಷಗಳ ಕಾಲ ಹೊಸ ಉದ್ಯಮಗಳನ್ನು ಸ್ಥಾಪಿಸಲು ಹಣಕಾಸು ಪಡೆಯದಂತೆ ನಿಷೇಧಿಸಲಾಗುವುದು ಎಂದು ಆರ್​ಬಿಐ ತಿಳಿಸಿದೆ.

ಹೆಚ್ಚುವರಿಯಾಗಿ, ವಂಚಕ ಎಂದು ವರ್ಗೀಕರಿಸಲಾದ ಸಾಲಗಾರರು ವಂಚಿಸಿದ ಮೊತ್ತದ ಪೂರ್ಣ ಪಾವತಿಯ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಬ್ಯಾಂಕ್ ಹಣಕಾಸು ಪಡೆಯುವುದನ್ನು ನಿಷೇಧಿಸಲಾಗಿದೆ ಎಂದು ಆರ್‌ಬಿಐ FAQ ಗಳಲ್ಲಿ ತಿಳಿಸಿದೆ. ಸುತ್ತೋಲೆಯಲ್ಲಿ ಸೂಚಿಸಲಾದ 12 ತಿಂಗಳ ಕನಿಷ್ಠ ಕೂಲಿಂಗ್ ಅವಧಿಯ ಕುರಿತು ಮಾತನಾಡಿದ ಆರ್​ಆರ್​ಬಿಐ, ವಂಚಕ ಅಥವಾ ಉದ್ದೇಶಪೂರ್ವಕ ಡೀಫಾಲ್ಟರ್ ಎಂದು ವರ್ಗೀಕರಿಸಲಾದ ಸಾಲಗಾರರು ಕೂಲಿಂಗ್ ಅವಧಿಯ ನಂತರ ಸಾಲದಾತರಿಂದ ಹೊಸದಾಗಿ ಹಣ ಎರವಲು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರ್​ಬಿಐಗೆ ಡೆಪ್ಯೂಟಿ ಗವರ್ನರ್ ನೇಮಕ: ಸ್ವಾಮಿನಾಥನ್ ಜಾನಕಿರಾಮನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಆಗಿ ಕೇಂದ್ರ ಸರ್ಕಾರ ಮಂಗಳವಾರ ನೇಮಕ ಮಾಡಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ನೇಮಕಾತಿಯು ಸೇರ್ಪಡೆಗೊಂಡ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಯಾವುದೇ ಮುಂದಿನ ಆದೇಶದವರೆಗೆ ಇರುತ್ತದೆ. ಸ್ವಾಮಿನಾಥನ್ ಜಾನಕಿರಾಮನ್ ಅವರು ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಮತ್ತು ಬ್ಯಾಂಕ್‌ನ ಕಾರ್ಪೊರೇಟ್ ಬ್ಯಾಂಕಿಂಗ್ ಮತ್ತು ಸಬ್ಸಿಡಿಯರೀಸ್ ವಿಭಾಗದ ಜವಾಬ್ದಾರಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ : Footwear Norms: ಪಾದರಕ್ಷೆಗೂ ಬಂತು ಗುಣಮಟ್ಟದ ನಿಯಮ: ಜುಲೈ 1 ರಿಂದ ಜಾರಿ

ABOUT THE AUTHOR

...view details