ನವದೆಹಲಿ: ಅದಾನಿ ಗ್ರೂಪ್ಗೆ ಸಂಬಂಧಿಸಿದ ವಿಷಯದ ಬಗ್ಗೆ ಭಾರತೀಯ ನಿಯಂತ್ರಕರು ತುಂಬಾ ಅನುಭವಿಗಳು ಮತ್ತು ಅದರ ಬಗ್ಗೆ ಅರಿತುಕೊಂಡಿದ್ದಾರೆ. ಅಮೆರಿಕ ಮೂಲದ ಕಿರು ಮಾರಾಟಗಾರ ಹಿಂಡೆನ್ಬರ್ಗ್ ರಿಸರ್ಚ್ನ ವರದಿಯ ನಂತರ ಉದ್ಭವಿಸಿರುವ ಪರಿಸ್ಥಿತಿಯನ್ನು ನಿಭಾಯಿಸಲು ಅವರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಅನುಭವಿ ಮತ್ತು ಡೊಮೈನ್‌ನಲ್ಲಿನ ತಜ್ಞರು ಸಿದ್ಧರಿದ್ದಾರೆ:ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿಯಂತ್ರಕರು ಈಗ ಮಾತ್ರವಲ್ಲ, ಯಾವಾಗಲೂ ಅವರು ತಮ್ಮ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು. ಭಾರತದ ನಿಯಂತ್ರಕ (ಆರ್‌ಬಿಐ ) ಬಹಳ ಅನುಭವಿ ಮತ್ತು ಅವರು ಡೊಮೈನ್‌ನಲ್ಲಿನ ತಜ್ಞರು, ಅವರು ಎಂದಿನಂತೆ ಸಿದ್ಧರಿದ್ದಾರೆ. ಆದ್ದರಿಂದ ನಾನು ಅದನ್ನು ಅಲ್ಲಿಯೇ ಬಿಡುತ್ತೇನೆ ಎಂದು ಈ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸಲಾಗಿದೆಯೇ ಎಂದು ಕೇಳಿದ ವರದಿಗಾರರ ಪ್ರಶ್ನೆಗೆ ಹಣಕಾಸು ಸಚಿವೆ ಹೀಗೆ ಉತ್ತರಿಸಿದರು.
ಆರ್ಬಿಐನ ಕೇಂದ್ರ ನಿರ್ದೇಶಕರ ಮಂಡಳಿಗೆ ಕೇಂದ್ರ ಬಜೆಟ್ ವಿವರಣೆ:ಅಪೆಕ್ಸ್ ಬ್ಯಾಂಕಿನ ಕೇಂದ್ರ ನಿರ್ದೇಶಕರ ಮಂಡಳಿಯ ಬಜೆಟ್ ನಂತರದ ಸಾಂಪ್ರದಾಯಿಕ ಸಭೆಯ ನಂತರ ಹಣಕಾಸು ಸಚಿವೆ ಜಂಟಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ಅದಾನಿ ಸಮೂಹದ ಬಗ್ಗೆ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ರಿಸರ್ಚ್ನ ವರದಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಕುಸಿತ ಕಂಡುಬಂದಿತ್ತು. ಈ ಯುಎಸ್ ಸಂಸ್ಥೆ ಭಾರತೀಯ ಸಮೂಹವು ಮೋಸದ ವಹಿವಾಟುಗಳು ಮತ್ತು ಷೇರು - ಬೆಲೆ ತಿರುಚುವಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಆದರೆ ಈ ಆರೋಪವನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು. ಅಷ್ಟೇ ಅಲ್ಲ ಕಾನೂನು ಹೋರಾಟಕ್ಕೂ ನಿರ್ಧರಿಸಿದೆ.
ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್:ಅದಾನಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. ಹಠಾತ್ ಪರಿಣಾಮಗಳ ವಿರುದ್ಧ ಭವಿಷ್ಯದಲ್ಲಿ ಭಾರತೀಯ ಹೂಡಿಕೆದಾರರನ್ನು ಹೇಗೆ ರಕ್ಷಿಸುವುದು ಎಂಬುದರ ಕುರಿತು ಸುಪ್ರೀಂಕೋರ್ಟ್ ಹಣಕಾಸು ಸಚಿವಾಲಯ ಮತ್ತು ಶಾಸನಬದ್ಧ ಮಾರುಕಟ್ಟೆ ನಿಯಂತ್ರಕ (ಸೆಬಿ)ಯಿಂದ ಪ್ರತಿಕ್ರಿಯೆ ಕೋರಿದೆ.