ಕರ್ನಾಟಕ

karnataka

ETV Bharat / business

ಅದಾನಿ ಗ್ರೂಪ್​​ನೊಂದಿಗಿನ ವ್ಯವಹಾರದ ಮಾಹಿತಿ ನೀಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಆರ್​ಬಿಐ ಸೂಚನೆ - ಫಾಲೋ ಆನ್ ಪಬ್ಲಿಕ್ ಆಫರ್

ಅದಾನಿ ಗ್ರೂಪ್ ಕಂಪನಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಹಿಂಡೆನ್​ಬರ್ಗ್​ ವರದಿ ಪ್ರಕಟವಾದ ನಂತರ ಬ್ಯಾಂಕ್​ಗಳು ಅದಾನಿ ಕಂಪನಿಗೆ ನೀಡಿದ ಸಾಲದ ವಿವರಗಳನ್ನು ಒದಗಿಸುವಂತೆ ಆರ್​ಬಿಐ ಎಲ್ಲ ಬ್ಯಾಂಕ್​ಗಳಿಗೆ ಸೂಚಿಸಿದೆ.

RBI asks banks for details of their exposure in Adani group of companies
RBI asks banks for details of their exposure in Adani group of companies

By

Published : Feb 2, 2023, 5:32 PM IST

Updated : Feb 2, 2023, 11:05 PM IST

ಹೊಸದಿಲ್ಲಿ: ಅದಾನಿ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಮತ್ತು ಕಂಪನಿಯು 20,000 ಕೋಟಿ ರೂ. ಫಾಲೋ ಆನ್ ಪಬ್ಲಿಕ್ ಆಫರ್ (ಎಫ್‌ಪಿಒ) ಹಿಂತೆಗೆದುಕೊಂಡ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್ಲಾ ಬ್ಯಾಂಕ್‌ಗಳು ತಾವು ಅದಾನಿ ಸಮೂಹಕ್ಕೆ ನೀಡಿದ ಸಾಲದ ವಿವರಗಳನ್ನು ಕೇಳಿದೆ. ಹಿಂಡೆನ್‌ಬರ್ಗ್ ರಿಸರ್ಚ್ ವರದಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಬಹಿರಂಗಗೊಂಡ ನಂತರ ಅದಾನಿ ಸಮೂಹವು ಇಕ್ಕಟ್ಟಿನಲ್ಲಿ ಸಿಲುಕಿದೆ. ಅದಾನಿ ಗ್ರೂಪ್ ತನ್ನ ಕಂಪನಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಂಡಿದೆ. ಅದಾನಿ ಗ್ರೂಪ್ ಕಂಪನಿಯ ಬಾಂಡ್​ಗಳನ್ನು ಸಾಲಕ್ಕಾಗಿ ಕೊಲ್ಯಾಟರಲ್ ಆಗಿ ಸ್ವೀಕರಿಸುವುದನ್ನು ಕ್ರೆಡಿಟ್ ಸ್ಯೂಸ್ ನಿಲ್ಲಿಸಿದ ನಂತರ ಮತ್ತು ಅದಾನಿ ಗ್ರೂಪ್ ಕಂಪನಿಗಳ ಸೆಕ್ಯೂರಿಟಿಗಳ ಮೇಲೆ ಮಾರ್ಜಿನ್ ಸಾಲ ನೀಡುವುದನ್ನು ಸಿಟಿಗ್ರೂಪ್ ವೆಲ್ತ್​​ ನಿಲ್ಲಿಸಿದ ನಂತರ ಆರ್​ಬಿಐ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.

ಹಿಂಡೆನ್​ಬರ್ಗ್ ರಿಸರ್ಚ್ ಕಂಪನಿಯು ಜನವರಿ 24 ರಂದು 'Adani Group: How The World’s 3rd Richest Man Is Pulling The Largest Con In Corporate History' ಶೀರ್ಷಿಕೆಯ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್ ತನ್ನ ಷೇರುಗಳಲ್ಲಿ ಭಾರಿ ಹಸ್ತಕ್ಷೇಪ ಮಾಡಿರುವುದಾಗಿ ಮತ್ತು ಲೆಕ್ಕಪತ್ರಗಳಲ್ಲಿ ವಂಚನೆ ಎಸಗಿರುವುದಾಗಿ ಹೇಳಿತ್ತು. ಈ ವರದಿಯ ನಂತರ ಅದಾನಿ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿಯುತ್ತಿವೆ. ಕಳೆದ ಒಂದು ವಾರದಿಂದ ಕಂಪನಿಯ ಷೇರುಗಳ ಬೆಲೆ ಕುಸಿಯುತ್ತಲೇ ಇವೆ. ಹೀಗಾಗಿ ಕಂಪನಿಯು ಬಿಡುಗಡೆ ಮಾಡಿದ್ದ ಹಾಗೂ ಈಗಾಗಲೇ ಶೇಕಡಾ ನೂರಕ್ಕೆ ನೂರರಷ್ಟು ಸಬ್​ಸ್ಕ್ರೈಬ್ ಆಗಿದ್ದ ಫಾಲೋ ಆನ್ ಪಬ್ಲಿಕ್ ಆಫರ್​ ಅನ್ನು ರದ್ದುಮಾಡಿದೆ. ಹೂಡಿಕೆದಾರರ ಹಿತರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದಾನಿ ಹೇಳಿಕೊಂಡಿದೆ.

ಮಾರುಕಟ್ಟೆಗಳಲ್ಲಿ ವಿಪರೀತ ಏರಿಳಿಕೆಗಳಾಗುತ್ತಿರುವುದರಿಂದ ಪೂರ್ಣ ಸಬ್​ಸ್ಕ್ರೈಬ್ ಆಗಿದ್ದ ಎಫ್​ಪಿಒ ಷೇರು ಮಾರಾಟವನ್ನು ಹಿಂಪಡೆದಿರುವುದಾಗಿ ಕಂಪನಿ ತಿಳಿಸಿದೆ. ಹಿಂಡೆನ್​ಬರ್ಗ್ ರಿಸರ್ಚ್​ ವರದಿಯ ನಂತರ ಅದಾನಿ ಗ್ರೂಪ್ ಕಂಪನಿಯ ಷೇರುಗಳು 90 ಶತಕೋಟಿ ಯುಎಸ್​ ಡಾಲರ್​ನಷ್ಟು ಮೌಲ್ಯ ಕಳೆದುಕೊಂಡಿವೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ರೂ. 20,000 ಕೋಟಿ ಫಾಲೋ ಆನ್ ಪಬ್ಲಿಕ್ ಆಫರ್ ಯೋಜನೆಯು ಕೊನೆಯ ದಿನವಾದ ಮಂಗಳವಾರದಂದು ಹೂಡಿಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಬುಧವಾರ ರಾತ್ರಿ ಕಂಪನಿಯು FPO ಅನ್ನು ಹಿಂತೆಗೆದುಕೊಳ್ಳಲು ಮತ್ತು ಹೂಡಿಕೆದಾರರಿಗೆ ಹಣ ಮರುಪಾವತಿಸಲು ನಿರ್ಧರಿಸಿದೆ.

ಸಂಪೂರ್ಣವಾಗಿ ಸಬ್​ಸ್ಕ್ರೈಬ್ ಆಗಿದ್ದ ಎಫ್​ಪಿಒ ಅನ್ನು ಹಿಂತೆಗೆದುಕೊಳ್ಳುವಿಕೆಯ ನಿನ್ನೆಯ ನಿರ್ಧಾರವು ಆಶ್ಚರ್ಯಗೊಳಿಸಿದೆ. ಆದರೆ ನಿನ್ನೆ ಕಂಡುಬಂದ ಮಾರುಕಟ್ಟೆಯ ಚಂಚಲತೆಯನ್ನು ಪರಿಗಣಿಸಿ, ಎಫ್​ಪಿಒದೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಾಗಿಲ್ಲ ಎಂದು ಮಂಡಳಿಯು ಬಲವಾಗಿ ಭಾವಿಸಿದೆ ಎಂದು ಕಂಪನಿಯ ಚೇರಮನ್ ಗೌತಮ್ ಅದಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ನಿರ್ಧಾರವು ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಭವಿಷ್ಯದ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಿಂಡನ್​ಬರ್ಗ್​ ವರದಿ ಬಳಿಕ ಅದಾನಿ ಸಮೂಹ ಸಂಸ್ಥೆ ಕಳೆದುಕೊಂಡ ಸಂಪತ್ತು ಎಷ್ಟು ಗೊತ್ತಾ?

Last Updated : Feb 2, 2023, 11:05 PM IST

ABOUT THE AUTHOR

...view details