ಮುಂಬೈ:ಹಣದುಬ್ಬರ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ರೆಪೋ ದರವನ್ನು ಹೆಚ್ಚಿಸಿದೆ. 25 ಬೇಸ್ ಪಾಯಿಂಟ್ಗಳೊಂದಿಗೆ ಶೇ.6.5 ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಈ ವರ್ಷದ ಮೊದಲ ರೆಪೋ ಏರಿಕೆಯಾದರೆ, ಕಳೆದ ವರ್ಷದ ಮೇ ತಿಂಗಳಿಂದ 6 ನೇ ಸಲ ಹೆಚ್ಚಿಸಲಾಗಿದೆ. ಒಟ್ಟಾರೆ 250 ಮೂಲ ಅಂಕಗಳನ್ನು ಹೆಚ್ಚಿಸಲಾಗಿದ್ದು, ಸುಸ್ತಿದಾರರಿಗೆ ಹೊರೆಯಾಗಲಿದೆ.
ಶೇ.3.35ರ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2023-24 ರ ನೈಜ GDP ಬೆಳವಣಿಗೆಯು 6.4% ಎಂದು ನಿರೀಕ್ಷಿಸಲಾಗಿದೆ. ಈ ಪೈಕಿ ಮೊದಲ ತ್ರೈಮಾಸಿಕ (Q1) ದಲ್ಲಿ 7.8%, ಎರಡನೇ ತ್ರೈಮಾಸಿಕ (Q2) ದಲ್ಲಿ 6.2%, ಮೂರನೇ ತ್ರೈಮಾಸಿಕ (Q3) ದಲ್ಲಿ 6% ಮತ್ತು ನಾಲ್ಕನೇ ತ್ರೈಮಾಸಿಕ (Q4) ದಲ್ಲಿ 5.8% ಎಂದು ಅಂದಾಜಿಸಲಾಗಿದೆ.
ಕೇಂದ್ರ ಬಜೆಟ್ ಬಳಿಕ ನಡೆದ ಮೊದಲ ಹಣಕಾಸು ನೀತಿಯಲ್ಲಿ(ಎಂಪಿಸಿ) ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ವಿತ್ತೀಯ ನೀತಿ ಸಮಿತಿಯು 6 ಸದಸ್ಯರ ಪೈಕಿ 4 ಜನರ ಬಹುಮತದಿಂದ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಷ್ಟು ಹೆಚ್ಚಿಸಲಾಗಿದೆ. ಹಣದುಬ್ಬರವನ್ನು ನಿಯಂತ್ರಿಸುವ ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಿಲ್ಲರೆ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆಯಿಂದಾಗಿ ಬಜೆಟ್ ಬಳಿಕ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಲಿದೆ ಎಂದ ಭಾವಿಸಲಾಗಿತ್ತು. ಅದರಂತೆ ಈಗ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ರೆಪೋ ರೇಟ್ ಏರಿಕೆ ಮಾಡಲಾಗಿದೆ. ಇದು ಸತತ 6ನೇ ಬಾರಿಗೆ ಹೆಚ್ಚಳ ಮಾಡಿದಂತಾಗಿದೆ. ಒಟ್ಟಾರೆ 250 ಮೂಲ ಅಂಕಗಳನ್ನು ಹೆಚ್ಚಿಸಿದೆ. ಎಸ್‌ಡಿಎಲ್‌ಆರ್ ಅಥವಾ ಸ್ಥಾಯಿ ಠೇವಣಿ ಸೌಲಭ್ಯ ದರವನ್ನು 6.25% ಕ್ಕೆ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ದರ ಮತ್ತು ಬ್ಯಾಂಕ್ ದರವನ್ನು 6.75% ಗೆ ಪರಿಷ್ಕರಿಸಲಾಗಿದೆ.