ಚೆನ್ನೈ(ತಮಿಳುನಾಡು): ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ಇಂದಿನಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆ ಫೆಬ್ರವರಿ 8 ರಂದು ರೆಪೋ ದರವನ್ನು ಪ್ರಕಟಿಸಲಿದೆ. ಚಿಲ್ಲರೆ ಹಣದುಬ್ಬರ ಇಳಿಕೆಯಾಗಿರುವ ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ನೀತಿ ದರ ಏರಿಕೆಗೆ ವಿರಾಮ ನೀಡಲಿದೆಯಾ ಅಥವಾ ಅದನ್ನು 25 ಮೂಲ ಅಂಕಗಳಿಂದ ಶೇಕಡಾ 6.50 ಕ್ಕೆ ಹೆಚ್ಚಿಸಲಿದೆಯಾ ಎಂಬುದು ಫೆಬ್ರವರಿ 8 ರಂದು ತಿಳಿಯಲಿದೆ.
ಡೇಟಾ ಕಡೆಗೆ ಗಮನಹರಿಸದೇ ಚಿಲ್ಲರೆ ಹಣದುಬ್ಬರವು ಡಿಸೆಂಬರ್ 2022 ರಲ್ಲಿ ಒಂದು ವರ್ಷದ ಕನಿಷ್ಠ 5.72 ಪ್ರತಿಶತದಷ್ಟಿತ್ತು. ಮುಖ್ಯವಾಗಿ ಆಹಾರದ ಬೆಲೆಗಳಲ್ಲಿನ ಇಳಿಕೆ, ಅದರಲ್ಲೂ ವಿಶೇಷವಾಗಿ ಹಣ್ಣು ಮತ್ತು ತರಕಾರಿಗಳ ಬೆಲೆ ಇಳಿಕೆಯಿಂದ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ. ಹಣದುಬ್ಬರ ದರವು ಆರ್‌ಬಿಐನ ಸಹಿಷ್ಣುತೆಯ ಮಟ್ಟವಾದ 2 ರಿಂದ 6 ಪ್ರತಿಶತದೊಳಗೆ ಉಳಿಯುವುದು ಇದು ಸತತ ಎರಡನೇ ತಿಂಗಳು. ಆದಾಗ್ಯೂ ಮುಖ್ಯ ಹಣದುಬ್ಬರ ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಇರುವುದರಿಂದ ಅರ್ಥಶಾಸ್ತ್ರಜ್ಞರು ಚಿಂತಿತರಾಗಿದ್ದಾರೆ.
ಅಂಕಿ - ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಗುರುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನವೆಂಬರ್ 2022 ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು 5.88 ಶೇಕಡಾ ಆಗಿದ್ದು, ಅಕ್ಟೋಬರ್ 2022 ರಲ್ಲಿ ಇದು ಶೇಕಡಾ 6.77 ರ ಮೇಲಿನ ಮಟ್ಟದಲ್ಲಿತ್ತು. ಅಧಿಕೃತ ಮಾಹಿತಿ ಪ್ರಕಾರ ಆಹಾರ ಹಣದುಬ್ಬರವು ಡಿಸೆಂಬರ್ 2022 ರಲ್ಲಿ ಶೇಕಡಾ 4.19 ರಷ್ಟಿತ್ತು. ಇದು ನವೆಂಬರ್ 2022 ರಲ್ಲಿದ್ದ ಶೇಕಡಾ 4.67 ರ ಮಟ್ಟಕ್ಕಿಂತ ಕಡಿಮೆಯಾಗಿದೆ. ಹಣ್ಣುಗಳು ಮತ್ತು ತರಕಾರಿಗಳ ಹೊರತಾಗಿ, ತೈಲಗಳು ಮತ್ತು ಕೊಬ್ಬುಗಳು ಮತ್ತು ಮಾಂಸ ಮತ್ತು ಮೀನಿನ ಬೆಲೆಗಳು ನವೆಂಬರ್ 2022 ಕ್ಕೆ ಹೋಲಿಸಿದರೆ ಡಿಸೆಂಬರ್ 2022 ರಲ್ಲಿ ಇಳಿಮುಖವಾಗಿದೆ.