ನವದೆಹಲಿ:ಯಾವುದೇ ಭದ್ರತೆ ಇಲ್ಲದೇ ವ್ಯವಹಾರಕ್ಕೆ ಬಳಸಲಾಗುತ್ತಿರುವ ಕ್ರಿಪ್ಟೋಕರೆನ್ಸಿ ಜೂಜಾಟಕ್ಕೆ ಸಮನಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಕ್ರಿಪ್ಟೋಗಳ ಮೌಲ್ಯ ಕೇವಲ ನಂಬಿಕೆಯ ಆಧಾರದ ಮೇಲೆ ಮಾತ್ರ ನಡೆಯುತ್ತವೆ. ಇವಕ್ಕೆ ಯಾವುದೇ ನಿಖರತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ದಾಸ್, ದೇಶದಲ್ಲಿ ಕ್ರಿಪ್ಟೋಸ್ ಅನ್ನು ನಿಷೇಧಿಸುವಂತೆ ಕರೆ ನೀಡಲಾಗಿದೆ. ಅವುಗಳು ಯಾವುದೇ ನಿಖರ ಆಧಾರ ಹೊಂದಿಲ್ಲ. ಇದನ್ನು ಬೆಂಬಲಿಸುವವರು ಅದನ್ನು ಆಸ್ತಿ ಅಥವಾ ಹಣಕಾಸಿನ ಉತ್ಪನ್ನ ಎಂದು ತಿಳಿದುಕೊಂಡಿದ್ದಾರೆ. ಆದರೆ, ಅದು ಆಧಾರ ಸಹಿತ ಕ್ರೋಢೀಕರಣ ಮಾಡುವ ಮೂಲ ಎಂದು ಅವರು ಹೇಳಿದರು.
ಪ್ರತಿ ಸ್ವತ್ತು, ಪ್ರತಿ ಹಣಕಾಸು ಉತ್ಪನ್ನ ಕೆಲವು ಅದರದ್ದೇ ಇಂತಿಷ್ಟು ಮೌಲ್ಯ ಹೊಂದಿರಬೇಕು. ಆದರೆ, ಕ್ರಿಪ್ಟೋ ಈ ವಿಷಯದಲ್ಲಿ ಯಾವುದೇ ಮೌಲ್ಯವನ್ನು ಹೊಂದಿಲ್ಲ. ಯಾವುದೇ ಮೌಲ್ಯವಿಲ್ಲದ ವ್ಯವಹಾರ ಸಂಪೂರ್ಣವಾಗಿ ನಂಬಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಅದು 100 ಪ್ರತಿಶತದಷ್ಟು ಹೊಂದಿರುತ್ತದೆ. ಇಂತಹ ಆಧಾರ ರಹಿತ ವ್ಯವಹಾರ ಜೂಜಾಟಕ್ಕೆ ಸಮ ಎಂದು ಅವರು ಅಭಿಪ್ರಾಯಟ್ಟಿದ್ದಾರೆ.
ಕ್ರಿಪ್ಟೋಕರೆನ್ಸಿಯನ್ನು ನೀವು ಬೆಂಬಲಿಸುವುದಾದರೆ, ಅದನ್ನು ಜೂಜಿನಂತೆಯೇ ಪರಿಗಣಿಸಿ, ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿ. ಕ್ರಿಪ್ಟೋ ಯಾವುದೇ ಹಣಕಾಸಿನ ಮೂಲವಲ್ಲ ಎಂದು ದೃಢವಾಗಿ ಅಭಿಪ್ರಾಯಪಟ್ಟರು. ಡಿಜಿಟಲ್ ಕರೆನ್ಸಿಯು ಮುಂದಿನ ಹಣದ ಭವಿಷ್ಯವಾಗಿದೆ. ಅದರ ಅಳವಡಿಕೆಯಿಂದ ಲಾಜಿಸ್ಟಿಕ್ ಮತ್ತು ಮುದ್ರಣ ವೆಚ್ಚವನ್ನು ಉಳಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದರು.