ಕರ್ನಾಟಕ

karnataka

ETV Bharat / business

ಮುಂಬೈ ಟ್ರಾವೆಲ್ ಟ್ರೇಡ್​ ಶೋ: ಜನಾಕರ್ಷಣೆಯ ಕೇಂದ್ರಬಿಂದುವಾದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್​ - ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್​

ಮುಂಬೈನಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ 'ಒಂಟಿಎಂ' ಟ್ರಾವೆಲ್ ಟ್ರೇಡ್​ ಶೋನಲ್ಲಿ ಜಗತ್ತಿನ ಅತಿದೊಡ್ಡ ಚಿತ್ರನಗರಿ ಎಂದೇ ಖ್ಯಾತಿ ಪಡೆದ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್​ ಗಮನ ಸೆಳೆಯುತ್ತಿದೆ.

ramoji-filmcitys-stall-center-of-attraction-at-otm-mumbai-trade-show
ಟ್ರಾವೆಲ್ ಟ್ರೇಡ್​ ಶೋ: ಆಕರ್ಷಣೆಯ ಕೇಂದ್ರ ಬಿಂದುವಾದ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್​

By

Published : Feb 2, 2023, 9:33 PM IST

Updated : Feb 2, 2023, 10:35 PM IST

ಮುಂಬೈ ಟ್ರಾವೆಲ್ ಟ್ರೇಡ್​ ಶೋ: ಜನಾಕರ್ಷಣೆಯ ಕೇಂದ್ರಬಿಂದುವಾದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್​

ಮುಂಬೈ (ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿ, ಮಹಾರಾಷ್ಟ್ರದ ರಾಜಧಾನಿ ಮುಂಬೈ ಜಿಯೋ ವರ್ಲ್ಡ್ ಕನ್ವೆಕ್ಷನ್ ಸೆಂಟರ್‌ನಲ್ಲಿ ಏಷ್ಯಾದ ಅತಿದೊಡ್ಡ 'ಒಂಟಿಎಂ' ಟ್ರಾವೆಲ್ ಟ್ರೇಡ್​ ಶೋ ಆರಂಭವಾಗಿದೆ. ಈ ಶೋನಲ್ಲಿ ಜಗತ್ತಿನ 50 ರಾಷ್ಟ್ರಗಳೊಂದಿಗೆ ಭಾರತದ 30 ರಾಜ್ಯಗಳು ಭಾಗವಹಿಸಿವೆ. ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್‌ ಶೋಗೆ ಬರುತ್ತಿರುವವರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ 'ಒಂಟಿಎಂ' ಟ್ರಾವೆಲ್ ಟ್ರೇಡ್ ಶೋ ಆಯೋಜಿಸಿದೆ. ಕೋವಿಡ್​ ಕಾರಣ ಕಳೆದೆರಡು ವರ್ಷಗಳ ನಂತರ ಈಗ ಮತ್ತೆ ಶೋ ಹಮ್ಮಿಕೊಳ್ಳಲಾಗಿದ್ದು, ಫೆಬ್ರವರಿ 5ರವರೆಗೆ ನಡೆಯಲಿದೆ. ದೇಶ-ವಿದೇಶಗಳ ಸಾವಿರಾರು ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಿದ್ದು, ಇದರಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್ ಕೂಡ ಪ್ರಮುಖವಾಗಿದೆ.

ರಾಮೋಜಿ ಫಿಲ್ಮ್ ಸಿಟಿಯ ಮಾರ್ಕೆಟಿಂಗ್‌ ವಿಭಾಗದ ಹಿರಿಯ ಜನರಲ್ ಮ್ಯಾನೇಜರ್ ಟಿ.ಆರ್‌.ಎಲ್.ರಾವ್ ಪ್ರತಿಕ್ರಿಯಿಸಿ, "ರಾಮೋಜಿ ಫಿಲ್ಮ್ ಸಿಟಿಯ ಮಳಿಗೆಯೂ ಸಹ​ ಏಷ್ಯಾದ ಅತಿದೊಡ್ಡ 'ಒಂಟಿಎಂ' ಶೋನ ಭಾಗವಾಗಿರುವುದು ಸಂತೋಷ ತರಿಸಿದೆ. ಜನತೆ ಮತ್ತು ಪ್ರವಾಸಿಗರನ್ನು ತಲುಪಲು ಇದೊಂದು ಪ್ರಮುಖ ತಾಣ. ನಮ್ಮ ಫಿಲ್ಮ್‌ ಸಿಟಿ ಬಗ್ಗೆ ಜನರಿಗೆ ಸರಿಯಾಗಿ ವಿವರಿಸಲು ಇದು ಸಹಕಾರಿಯಾಗಲಿದೆ" ಎಂದು ಹೇಳಿದರು.

"ರಾಮೋಜಿ ಫಿಲ್ಮ್ ಸಿಟಿ ಬಗ್ಗೆ ಈಗಾಗಲೇ ಜನರು ಸಾಕಷ್ಟು ಮಾಹಿತಿ ಹೊಂದಿದ್ದಾರೆ. ಆದರೆ, 'ಒಂಟಿಎಂ' ಶೋಗೆ ಬರುತ್ತಿರುವ ಜನರು ವಿವಿಧ ರೀತಿಯ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ಫಿಲ್ಮ್​ ಸಿಟಿಯು ಪ್ರವಾಸಿಗರಿಗೆ ವಿವಿಧ ರೀತಿಯ ಆಕರ್ಷಕ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಈ ಬಗ್ಗೆಯೂ ಜನರು ವಿಚಾರಿಸುತ್ತಿದ್ದಾರೆ. ಜನರ ಬಜೆಟ್‌ ತಕ್ಕಂತಹ ಮತ್ತು ಅನುಕೂಲಕರವಾಗುವ ಪ್ಯಾಕೇಜ್​ಗಳ ಕುರಿತು ನಾವು ಮಾಹಿತಿ ತಲುಪಿಸುತ್ತಿದ್ದೇವೆ" ಎಂದು ಅವರು ತಿಳಿಸಿದರು.

ರಾಮೋಜಿ ಫಿಲ್ಮ್ ಸಿಟಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್​ ತುಷಾರ್ ಗರ್ಗ್ ಮಾತನಾಡಿ, "ಮುಂಬೈನ ಟ್ರಾವೆಲ್ ಟ್ರೇಡ್ ಶೋನಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್​ಗೆ ನೂರಾರು ಭೇಟಿ ನೀಡುತ್ತಿದ್ದಾರೆ. ದೇಶ-ವಿದೇಶಗಳಿಂದ ಬಂದಿರುವ ಟ್ರಾವೆಲ್​ ಏಜೆಂಟರು​ಗಳು ಭೇಟಿ ಕೊಟ್ಟು ಫಿಲ್ಮ್​ಸಿಟಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಮದುವೆ, ಹನಿಮೂನ್, ಟೂರ್ ಪ್ಯಾಕೇಜ್ ಹೀಗೆ ನಾನಾ ರೀತಿಯ ಮಾಹಿತಿಗಳನ್ನು ಜನರು ಪಡೆದುಕೊಳ್ಳುತ್ತಿದ್ದಾರೆ" ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. ಕೊರೊನಾ ಕಾರಣದ ಆತಂಕದಿಂದ ಕಳೆದ ಎರಡು ವರ್ಷಗಳಿಂದ ಅನೇಕ ಕುಟುಂಬಗಳು ಮನರಂಜನೆಯಿಂದ ದೂರ ಉಳಿದಿದ್ದವು. ಆದರೆ, ಈಗ ಕುಟುಂಬದ ಸಮೇತವಾಗಿ ಜನತೆ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ಬರುತ್ತಿದ್ದಾರೆ. ಪ್ರವಾಸಿಗರಿಗಾಗಿ ವಿಂಟರ್ ಫೆಸ್ಟ್, ನ್ಯೂ ಇಯರ್​​, ಹಾಲಿಡೇ ಕಾರ್ನಿವಲ್, ದಸರಾ, ದೀಪಾವಳಿ ನಿಮಿತ್ತ ವರ್ಷವಿಡೀ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ:ಗುಜರಾತ್​​​ನಲ್ಲಿ ಪ್ರವಾಸೋದ್ಯಮ ಮೇಳ: ಗಮನ ಸೆಳೆದ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್

Last Updated : Feb 2, 2023, 10:35 PM IST

ABOUT THE AUTHOR

...view details