ಸಹೋದರ ಮತ್ತು ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವೇ ರಕ್ಷಾಬಂಧನ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಪವಿತ್ರವಾದ ರಾಖಿಗಳನ್ನು ಕಟ್ಟುತ್ತಾರೆ. ಪ್ರತಿಯಾಗಿ ಸಹೋದರರು ಉಡುಗೊರೆಯಾಗಿ ಸ್ಮಾರ್ಟ್ಫೋನ್, ಹಣ, ಹೊಸ ಉಡುಪುಗಳು, ಸೌಂದರ್ಯವರ್ಧಕಗಳನ್ನು ನೀಡುವುದು ಸಾಮಾನ್ಯ. ಆದರೇ ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಯರಿಗೆ ಭವಿಷ್ಯಕ್ಕೆ ಸಹಾಯಕವಾಗುವ ಹಣಕಾಸಿನ ಉಡಗೊರೆಗಳನ್ನು ನೀಡಿ. ಅಂತಹ ಅದ್ಭುತ ಉಡುಗೊರೆಗಳು ಇಲ್ಲಿವೆ ನೋಡಿ.
ವ್ಯವಸ್ಥಿತ ಹೂಡಿಕೆ ಯೋಜನೆ (SIP): ಮ್ಯೂಚುವಲ್ ಫಂಡ್‌ಗಳಲ್ಲಿ ನಿಯಮಿತ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಹಣಕಾಸು ನಿಧಿ ಅನ್ನು ಸೃಷ್ಟಿಸುತ್ತದೆ. ಇದು ನಿಮ್ಮ ಸಹೋದರಿಯ ಆರ್ಥಿಕ ಭವಿಷ್ಯಕ್ಕೆ ಹೆಚ್ಚು ಸಹಾಯಕವಾಗಿರಲಿದೆ. ಆದ್ದರಿಂದ ನಿಮ್ಮ ಸಹೋದರಿಯ ಹೆಸರಿನಲ್ಲಿ ಈಗಿನಿಂದ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಆರಂಭಿಸಿ.
ಆರೋಗ್ಯ ವಿಮಾ ಪಾಲಿಸಿ:ಪ್ರಸ್ತುತ ಆಧುನಿಕ ಯುಗದಲ್ಲಿ ಆರೋಗ್ಯ ಮತ್ತು ಜೀವ ವಿಮೆಗಳು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಅದಕ್ಕಾಗಿಯೇ ಈ ರಕ್ಷಾ ಬಂಧನದಂದು ನಿಮ್ಮ ಸಹೋದರಿಯ ಹೆಸರಲ್ಲಿ ಆರೋಗ್ಯ ವಿಮೆಯನ್ನು ಈಗಲೇ ಮಾಡಿಸಿ.
ಬ್ಯಾಂಕ್ ಉಳಿತಾಯ ಖಾತೆ:ನಿಮ್ಮ ಸಹೋದರಿಯರ ಸುವರ್ಣ ಭವಿಷ್ಯಕ್ಕಾಗಿ ಉಳಿತಾಯ ಮತ್ತು ಹೂಡಿಕೆ ಅತ್ಯಗತ್ಯವಾಗಿದೆ. ಹಾಗಾಗಿ ಹಬ್ಬದ ಉಡುಗೊರೆಯಾಗಿ ನಿಮ್ಮ ಸಹೋದರಿಯರ ಹೆಸರಿನಲ್ಲಿ ಬ್ಯಾಂಕ್ ಉಳಿತಾಯ ಖಾತೆ ಅಥವಾ ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ತೆರೆಯುವುದು ಉತ್ತಮ.