ಮುಂಬೈ:ಉದ್ಯಮಿ ಮುಕೇಶ್ ಅಂಬಾನಿ ಮತ್ತು ನಿತಾ ಅಂಬಾನಿ ಮಗ ಅನಂತ್ ಅಂಬಾನಿ ನಿಶ್ಚಿತಾರ್ಥ ಕಾರ್ಯ ಇಂದು ರಾಜಸ್ಥಾನದಲ್ಲಿ ನಡೆದಿದೆ. ಉದ್ಯಮಿ ವಿರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಮಗಳಾದ ರಾಧಿಕಾ ಮರ್ಚೆಂಟ್ ಅವರ ಕೈಗೆ ಅನಂತ್ ಉಂಗುರ ತೊಡಿಸಿದ್ದು, ಈ ಸಮಾರಂಭದಲ್ಲಿ ಎರಡು ಕುಟುಂಬಗಳು ಸಾಕ್ಷಿಯಾದವು.
ರಾಜಸ್ಥಾನದ ಪ್ರಖ್ಯಾತ ಶ್ರೀನಾಥ್ಜೀ ದೇಗುಲದಲ್ಲಿ ಇಂದು ರೋಕಾ (ನಿಶ್ಚಿತಾರ್ಥ) ನೇರವೇರಿತು. ಅನಂತ್ ಮತ್ತು ರಾಧಿಕ ಇಬ್ಬರು ಹಲವು ದಿನಗಳಿಂದ ಪರಿಚಿತರಾಗಿದ್ದರು. ನಿಶ್ಚಿತಾರ್ಥದ ಬಳಿಕ ಅವರು ದೇಗುಲದದಲ್ಲಿ ನಡೆದ ರಾಜ್ ಬೋಗ್ ಶೃಂಗಾರ್ ಕಾರ್ಯಕ್ರಮದಲ್ಲಿ ಭಾಗಿಯಾದರು. ಜೀವನದ ಹೊಸ ಅಧ್ಯಯನ ಪ್ರಾರಂಭಿಸಲು ಮುಂದಾಗಿರುವ ಜೋಡಿಗೆ ನೆರೆದ ಜನರು ಶುಭ ಹಾರೈಸಿದ್ದು, ಜೋಡಿಗಳು ಕೂಡ ಶ್ರೀನಾಥ ದೇವರ ಆಶೀರ್ವಾದ ಪಡೆದರು.