ಕರ್ನಾಟಕ

karnataka

ETV Bharat / business

ಉಳಿತಾಯ & ಹೂಡಿಕೆ ಪ್ರಮಾಣ ಶೇ 8ರ ಜಿಡಿಪಿ ಬೆಳವಣಿಗೆಗೆ ಸಾಕಾಗದು: ರೇಟಿಂಗ್ ಏಜೆನ್ಸಿ - ಉಳಿತಾಯ ಮತ್ತು ಹೂಡಿಕೆ ಪ್ರಮಾಣಗಳು

ಭಾರತವು ಶೇ 8 ಅಥವಾ ಅದಕ್ಕಿಂತ ಹೆಚ್ಚು ಜಿಡಿಪಿ ಬೆಳವಣಿಗೆ ದಾಖಲಿಸಬೇಕಾದರೆ ಈಗಿರುವ ಉಳಿತಾಯ ಹಾಗೂ ಬಂಡವಾಳ ಹೂಡಿಕೆ ಪ್ರಮಾಣಗಳು ಸಾಕಾಗುವುದಿಲ್ಲ ಎಂದು ರೇಟಿಂಗ್ ಏಜೆನ್ಸಿ ಇಂಡಿಯಾ ರೇಟಿಂಗ್ ಹೇಳಿದೆ.

Present saving, investment rates not enough to achieve 8% GDP growth: India Ratings
Present saving, investment rates not enough to achieve 8% GDP growth: India Ratings

By

Published : Mar 31, 2023, 7:27 PM IST

ನವದೆಹಲಿ :ಭಾರತದ ಆರ್ಥಿಕತೆಯು ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ಉಂಟಾದ ಮಂದಗತಿಯ ಬೆಳವಣಿಗೆಯಿಂದ ಇತ್ತೀಚೆಗೆ ಹೊರಬರುತ್ತಿದೆ. ಈ ಮಧ್ಯೆ ಹೆಚ್ಚಿನ ಜಿಡಿಪಿ ಬೆಳವಣಿಗೆಯ ದರವನ್ನು ಸಾಧಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಆದಾಗ್ಯೂ ಪ್ರಸ್ತುತ ದೇಶದಲ್ಲಿರುವ ಉಳಿತಾಯ ಮತ್ತು ಹೂಡಿಕೆ ಪ್ರಮಾಣಗಳು ಶೇ 8ರ ಜಿಡಿಪಿ ಬೆಳವಣಿಗೆ ದರವನ್ನು ಸಾಧಿಸಲು ಸಾಕಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಫಿಚ್ ಗ್ರೂಪ್ ರೇಟಿಂಗ್ ಕಂಪನಿಯಾದ ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ನಡೆಸಿದ ವಿಶ್ಲೇಷಣೆಯ ಪ್ರಕಾರ, ಆರ್ಥಿಕತೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 8 ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಲು ಉಳಿತಾಯ ಮತ್ತು ಹೂಡಿಕೆ ದರಗಳನ್ನು ಶೇ 35 ರ ಸಮೀಪಕ್ಕೆ ತರುವ ಅಗತ್ಯವಿದೆ. ಆದರೆ ಕಳೆದ ಹಣಕಾಸು ವರ್ಷದಲ್ಲಿ ಪ್ರಸ್ತುತ ಉಳಿತಾಯ ಮತ್ತು ಹೂಡಿಕೆ ದರವು ಕ್ರಮವಾಗಿ ಶೇ 30.2 ಮತ್ತು ಶೇ 29.6 ಆಗಿವೆ.

ಈ ಬಗ್ಗೆ ಇಂಡಿಯಾ ರೇಟಿಂಗ್ಸ್​ ETV ಭಾರತ್‌ಗೆ ಮಾಹಿತಿ ನೀಡಿದ್ದು, ಹೂಡಿಕೆಯ ಹೆಚ್ಚಿನ ಭಾಗವು ಮೂಲಸೌಕರ್ಯದಲ್ಲಿ ಇರಬೇಕಾಗುತ್ತದೆ ಎಂದು ಹೇಳಿದೆ. ಇದು ಪೂರೈಕೆ ನಿರ್ಬಂಧಗಳನ್ನು ಸರಾಗಗೊಳಿಸುವ ಮೂಲಕ ಖಾಸಗಿ ಹೂಡಿಕೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಜಾಗತಿಕ ಏರಿಳಿತಗಳಿಂದ ಉಂಟಾಗುವ ಬಾಹ್ಯ ಬೇಡಿಕೆಯ ದುರ್ಬಲತೆಯನ್ನು ಸರಿದೂಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಉಳಿತಾಯ ಮತ್ತು ಹೂಡಿಕೆಗಳ ಅಂತರವನ್ನು (ಚಾಲ್ತಿ ಖಾತೆಯಲ್ಲಿ ಪ್ರತಿಫಲಿಸಿದಂತೆ) ನಿಯಂತ್ರಣದಲ್ಲಿಡಲು ಹೆಚ್ಚಿನ ಹೂಡಿಕೆಗಳು ಹೆಚ್ಚಿನ ದೇಶೀಯ ಉಳಿತಾಯಗಳೊಂದಿಗೆ ಇರಬೇಕಾಗುತ್ತದೆ ಎಂದು ಅದು ಹೇಳಿದೆ. ಏಜೆನ್ಸಿಯ ಮೌಲ್ಯಮಾಪನದ ಪ್ರಕಾರ, ಮೂಲಸೌಕರ್ಯಗಳ ಮೇಲಿನ ಬಂಡವಾಳದ ವೆಚ್ಚವನ್ನು ಹೆಚ್ಚಿಸುವ ಸರ್ಕಾರದ ಪ್ರಸ್ತುತ ಗಮನವು ಸರಿಯಾದ ಹೆಜ್ಜೆಯಾಗಿ ಕಂಡುಬಂದಿದೆ. ಏಕೆಂದರೆ ಅದು ಹೂಡಿಕೆ ದರವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದರೆ ಆರ್ಥಿಕತೆಯಲ್ಲಿ ಉಳಿತಾಯವನ್ನು ಉತ್ತೇಜಿಸಲು ಅನುಗುಣವಾದ ಕ್ರಮಗಳು ಗೋಚರಿಸುವುದಿಲ್ಲ ಎಂದು ವರದಿ ತಿಳಿಸಿದೆ.

ಉಳಿತಾಯ ಯೋಜನೆಗಳ ಮೇಲಿರುವ ವಿವಿಧ ಪ್ರೋತ್ಸಾಹಗಳನ್ನು ತೆಗೆದುಹಾಕುವುದು ಆದಾಯ ತೆರಿಗೆ ರಚನೆಯನ್ನು ಸರಳಗೊಳಿಸುವತ್ತ ಒಂದು ಕ್ರಮವಾಗಿದೆ. ಆದರೆ ಇದು ಆರ್ಥಿಕತೆಯಲ್ಲಿ ಒಟ್ಟಾರೆ ಉಳಿತಾಯದ ಮುಖ್ಯ ಆಧಾರವಾಗಿರುವ ಕುಟುಂಬಗಳ ಉಳಿತಾಯದ ಮೇಲೆ ಪರಿಣಾಮ ಬೀರಬಹುದು ಎಂದು ರೇಟಿಂಗ್ ಏಜೆನ್ಸಿ ಹೇಳಿದೆ. ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಹಿಂದಿನ ಹಣಕಾಸು ವರ್ಷದಲ್ಲಿ (FY 2020-21) ವರ್ಷದಿಂದ ವರ್ಷಕ್ಕೆ 6.6 ಪ್ರತಿಶತದಷ್ಟು ಸಂಕುಚಿತಗೊಂಡ ನಂತರ ಮಾರ್ಚ್ 2021 ರಿಂದ ಏಪ್ರಿಲ್ 2022 ರ ಅವಧಿಯಲ್ಲಿ ವಾರ್ಷಿಕ ಆಧಾರದ ಮೇಲೆ ಭಾರತದ ಜಿಡಿಪಿ ಬೆಳವಣಿಗೆಯು ಶೇ 8.7 ಕ್ಕೆ ಚೇತರಿಸಿಕೊಂಡಿದೆ.

ಮುಂದಿನ ಹಣಕಾಸು ವರ್ಷದಲ್ಲಿ ದೇಶವು ಶೇ 5.9 ರಷ್ಟು ಬೆಳವಣಿಗೆ ದರವನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದರೆ ಜನಸಂಖ್ಯಾ ಸಾಮರ್ಥ್ಯದ ಲಾಭವನ್ನು ಪಡೆಯಲು ಭಾರತಕ್ಕೆ ಈ ಬೆಳವಣಿಗೆ ದರದ ಮಟ್ಟಗಳು ಸಾಕಾಗುವುದಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ಮತ್ತಷ್ಟು ಸಾಲ ನೀಡಲಿದೆ ಸೌದಿ ಅರೇಬಿಯಾ

ABOUT THE AUTHOR

...view details