ಹೈದರಾಬಾದ್: ದೇಶಾದ್ಯಂತ ಸೈಬರ್ ಅಪರಾಧಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅನೇಕರು ತಾವು ಕಷ್ಟಪಟ್ಟು ಸಂಪಾದಿಸಿದ ಜೀವವಿಮೆಯ ಉಳಿತಾಯ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜನರಿಗೆ ವಂಚನೆಯ ಕುರಿತು ಸಾಕಷ್ಟು ಜಾಗೃತಿ ಇಲ್ಲದಿರುವುದು ವಂಚಕರಿಗೆ ವರದಾನವಾಗಿದೆ. ಸೂಕ್ಷ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವಲ್ಲಿ ಅತ್ಯಂತ ಜಾಗರೂಕತೆಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ವಿಮಾ ವಂಚನೆಗಳು ಹೆಚ್ಚುತ್ತಿವೆ. ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ವರದಿಗಳು ಎಚ್ಚರಿಸುತ್ತಿವೆ.
ವಿಮಾ ಪಾಲಿಸಿಗಳು ಅನಿರೀಕ್ಷಿತ ತೊಂದರೆಗಳ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಕುಟುಂಬಗಳನ್ನು ರಕ್ಷಿಸುತ್ತವೆ. ಬಹಳಷ್ಟು ಜನರು ಜೀವ ವಿಮೆ ಅಥವಾ ಆರೋಗ್ಯ ಅಥವಾ ವಾಹನದ ವಿಮೆಗಳನ್ನು ಮಾಡಿಸಿರುತ್ತಾರೆ. ಸೈಬರ್ ಕಳ್ಳರು ಇದನ್ನೇ ಲಾಭವಾಗಿ ತೆಗೆದುಕೊಂಡು ಸದ್ದಿಲ್ಲದೇ ವಂಚನೆ ಮಾಡುತ್ತಿದ್ದಾರೆ. ಪಾಲಿಸಿದಾರರಿಗೆ ಕರೆ ಮಾಡಿ ನಿಮ್ಮ ಪಾಲಿಸಿಗಳು ರದ್ದುಗೊಳ್ಳುವ ಅಪಾಯದಲ್ಲಿದೆ ಎಂದು ನಂಬಿಸಿ. ನಿಮ್ಮ ಹಣ ಕ್ಲೇಮ್ ಮಾಡಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ವಂಚನೆ ಮಾಡುತ್ತಿದ್ದಾರೆ.
ಸೈಬರ್ ವಂಚಕರಿಂದ ಎಚ್ಚರಿಕೆ ಅಗತ್ಯ: ಅನೇಕ ಜನರು ವಿಮಾ ಕಂಪನಿಗಳಿಂದಲ್ಲೇ ಇಮೇಲ್ ಮತ್ತು ಎಸ್‌ಎಂಎಸ್ ಸಂದೇಶಗಳು ಬಂದಿವೆ ಎಂದು ನಂಬಿ ಸ್ವೀಕರಿಸುತ್ತಾರೆ. ಉದಾಹರಣೆಗೆ, ಅವರು ಲಿಂಕ್ ಅನ್ನು ಕಳುಹಿಸಿ ನಿಮ್ಮ ಪಾಲಿಸಿ ಸಕ್ರಿಯವಾಗಿರಿಸಲು ತಕ್ಷಣವೇ ಪ್ರೀಮಿಯಂ ಪಾವತಿಸಲು ಪಾಲಿಸಿದಾರರನ್ನು ಕೇಳಬಹುದು.
ಪಾಲಿಸಿ ಅವಧಿ ಮುಗಿಯುವ ಒಂದು ಅಥವಾ ಎರಡು ತಿಂಗಳ ಮೊದಲು ಇಂತಹ ಸಂದೇಶಗಳು ಬರುತ್ತವೆ. ವಿಮಾ ಕಂಪನಿಯು ಯಾವುದೇ ಪಾವತಿಗಳಿಗಾಗಿ ಈ ರೀತಿಯ ಲಿಂಕ್‌ಗಳನ್ನು ಎಂದಿಗೂ ಕಳುಹಿಸುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಅಂತಹ ಸಂದೇಶಗಳನ್ನು ಬಂದಾಗ, ನಾವು ತಕ್ಷಣ ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಿಮಾ ಸಲಹೆಗಾರರಿಂದ ಅಥವಾ ನೇರವಾಗಿ ಸಂಬಂಧಪಟ್ಟ ಕಂಪನಿಯಿಂದ ತೆಗೆದುಕೊಂಡರೆ ಎಲ್ಲ ಪಾಲಿಸಿಗಳು ಹೆಚ್ಚಾಗಿ ಡಿಜಿಟಲ್ ಸ್ವರೂಪದಲ್ಲಿರುತ್ತವೆ. ಆದ್ದರಿಂದ ಡಿಮ್ಯಾಟ್ ಖಾತೆ, ಐಡಿ ಮತ್ತು ಪಾಸ್‌ವರ್ಡ್‌ಗಳ ಬಗ್ಗೆ ಬಹಳ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.