ನವದೆಹಲಿ:ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಆಹಾರ ವಸ್ತುಗಳಾದ ಗೋದಿ ಹಿಟ್ಟು, ಚುರುಮುರಿ, ಮೊಸರು/ ಲಸ್ಸಿ/ ಮಜ್ಜಿಗೆ ಮತ್ತು ಪನೀರ್‌ಗಳನ್ನು ಜಿಎಸ್ಟಿ ಅಡಿಯಲ್ಲಿ ತರುವುದು, ದಿನಕ್ಕೆ 1 ಸಾವಿರ ರೂಪಾಯಿಗೂ ಕಡಿಮೆ ಬಾಡಿಗೆ ಇರುವ ಹೊಟೇಲುಗಳಿಗೆ ನೀಡಲಾದ ವಿನಾಯಿತಿ ಹಿಂಪಡೆಯುವುದು ಮತ್ತು ಖಾದ್ಯ ತೈಲ, ಕಲ್ಲಿದ್ದಲು, ಎಲ್ಇಡಿ ಲೈಟುಗಳು, ಪ್ರಿಂಟಿಂಗ್ ಇಂಕ್, ಚಾಕುಗಳು ಮತ್ತು ಸೋಲಾರ್ ವಾಟರ್ ಹೀಟರ್ಗಳ ಮೇಲಿನ ತೆರಿಗೆ ತಿದ್ದುಪಡಿ ಮಾಡುವ ಕ್ರಮಗಳಿಗೆ ಇಂದಿನ ಜಿಎಸ್ಟಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪ್ಯಾಕ್ ಮಾಡಲಾದ ಆಹಾರಕ್ಕೆ ಜಿಎಸ್ಟಿ ಅನ್ವಯ; ಕಡಿಮೆ ಬಾಡಿಗೆ ಹೊಟೇಲುಗಳಿಗೆ ಶೇ.12 ತೆರಿಗೆ - ಕ್ಯಾಸಿನೊ ಆನ್ಲೈನ್ ಗೇಮಿಂಗ್ ಮತ್ತು ಕುದುರೆ ರೇಸ್ ಜಿಎಸ್ಟಿ
ರಾಜ್ಯಗಳಿಗೆ ಜೂನ್ 2022ರ ನಂತರವೂ ಜಿಎಸ್ಟಿ ಪರಿಹಾರ ನೀಡುವುದು ಮತ್ತು ಕ್ಯಾಸಿನೊ, ಆನ್ಲೈನ್ ಗೇಮಿಂಗ್ ಮತ್ತು ಕುದುರೆ ರೇಸ್ಗಳಿಗೆ ಶೇ 28 ರಷ್ಟು ಜಿಎಸ್ಟಿ ವಿಧಿಸುವ ಬಗ್ಗೆ ಬುಧವಾರದಂದು ಚರ್ಚಿಸಲಾಯಿತು.
![ಪ್ಯಾಕ್ ಮಾಡಲಾದ ಆಹಾರಕ್ಕೆ ಜಿಎಸ್ಟಿ ಅನ್ವಯ; ಕಡಿಮೆ ಬಾಡಿಗೆ ಹೊಟೇಲುಗಳಿಗೆ ಶೇ.12 ತೆರಿಗೆ Pre-packaged food under GST, 12% tax on hotels with tariff up to Rs 1,000](https://etvbharatimages.akamaized.net/etvbharat/prod-images/768-512-15690455-1003-15690455-1656507873197.jpg)
Pre-packaged food under GST, 12% tax on hotels with tariff up to Rs 1,000
ರಾಜ್ಯಗಳಿಗೆ ಜೂನ್ 2022ರ ನಂತರವೂ ಜಿಎಸ್ಟಿ ಪರಿಹಾರ ನೀಡುವುದು ಮತ್ತು ಕ್ಯಾಸಿನೊ, ಆನ್ಲೈನ್ ಗೇಮಿಂಗ್ ಮತ್ತು ಕುದುರೆ ರೇಸ್ಗಳಿಗೆ ಶೇ 28 ರಷ್ಟು ಜಿಎಸ್ಟಿ ವಿಧಿಸುವ ಬಗ್ಗೆ ಬುಧವಾರದಂದು ಚರ್ಚಿಸಲಾಯಿತು.
ಹೈರಿಸ್ಕ್ ತೆರಿಗೆ ಪಾವತಿದಾರರಿಗೆ ಕಡ್ಡಾಯ ಬಯೊಮೆಟ್ರಿಕ್ ದೃಢೀಕರಣ, ಎಲೆಕ್ಟ್ರಿಕಲ್ ಬಿಲ್ ಮಾಹಿತಿ ಸೇರಿಸುವುದು, ನಿರ್ದಿಷ್ಟ ಪ್ಯಾನ್ ಸಂಖ್ಯೆಗೆ ಸಂಬಂಧಿಸಿದಂತೆ ಅದಕ್ಕೆ ಜೋಡಣೆಯಾದ ಬ್ಯಾಂಕ್ ಖಾತೆಯ ಎಲ್ಲ ಮಾಹಿತಿಯನ್ನು ದೃಢೀಕರಿಸುವುದು ಮತ್ತು ಜಿಯೊ ಟ್ಯಾಗಿಂಗ್ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ.