ನವದೆಹಲಿ: ದೇಶದ ಪ್ರಮುಖ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಫೋನ್ ಪೆ ಸ್ಟಾಕ್ ಬ್ರೋಕಿಂಗ್ ವ್ಯವಹಾರಕ್ಕೆ ಪ್ರವೇಶ ಮಾಡಿದೆ. ತನ್ನ ಗ್ರಾಹಕರಿಗೆ ಶೇರು ವಹಿವಾಟು ಸೇವೆ ನೀಡಲು ಶೇರ್ ಡಾಟ್ ಮಾರ್ಕೆಟ್ (Share.Market) ಎಂಬ ಅಪ್ಲಿಕೇಶನ್ ಪ್ರಾರಂಭಿಸಿದೆ. ಇದನ್ನು ಬಳಸಿ ಗ್ರಾಹಕರು ಡಿಮ್ಯಾಟ್ ಟ್ರೇಡಿಂಗ್ ಖಾತೆ ತೆರೆಯಬಹುದು ಮತ್ತು ಸ್ಟಾಕ್ಗಳು, ಮ್ಯೂಚುವಲ್ ಫಂಡ್ಗಳು ಮತ್ತು ಇಟಿಎಫ್ಗಳಲ್ಲಿ ಹೂಡಿಕೆ ಮಾಡಬಹುದು.
ಕಂಪನಿಯ ಪ್ರಕಾರ, ಶೇರ್ ಡಾಟ್ ಮಾರ್ಕೆಟ್ ಮಾರುಕಟ್ಟೆ ವಿಮರ್ಶೆ, ಪರಿಮಾಣಾತ್ಮಕ ಸಂಶೋಧನೆ ಆಧಾರಿತ ವೆಲ್ತ್ ಬಾಸ್ಕೆಟ್ಗಳು, ಸ್ಕೇಲೆಬಲ್ ತಂತ್ರಜ್ಞಾನ ವೇದಿಕೆ ಮತ್ತು ಹೂಡಿಕೆದಾರರು ಮತ್ತು ವ್ಯಾಪಾರಿಗಳಿಗೆ ಉತ್ತಮ ಗ್ರಾಹಕ ಅನುಭವವನ್ನು ಒದಗಿಸುವ ಮೂಲಕ ಡಿಸ್ಕೌಂಟ್ ಬ್ರೋಕಿಂಗ್ನ ಪ್ರಯೋಜನಗಳನ್ನು ನೀಡುತ್ತದೆ.
ಇದಲ್ಲದೆ ಸ್ಪರ್ಧಾತ್ಮಕ ರಿಯಾಯಿತಿ ಬ್ರೋಕಿಂಗ್ ಬೆಲೆ, ಸಾಬೀತುಪಡಿಸಿದ ತಂತ್ರಜ್ಞಾನ ವೇದಿಕೆಯೊಂದಿಗೆ ಪರಿಮಾಣಾತ್ಮಕ ಸಂಶೋಧನೆಯನ್ನು ಒದಗಿಸುವ ಮೂಲಕ ಅಪ್ಲಿಕೇಶನ್ ಸ್ಟಾಕ್ ಬ್ರೋಕಿಂಗ್ಗೆ ಹೊಸ ಆಯಾಮ ನೀಡಲಿದೆ ಎಂದು ಕಂಪನಿ ಹೇಳಿದೆ. ಗ್ರಾಹಕರೇ ಮೊದಲು ಎಂಬ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಆಧಾರದ ಮೇಲೆ ಸಂಪತ್ತಿನ ಸೃಷ್ಟಿಯ ಮೇಲೆ ಕೇಂದ್ರೀಕರಿಸಿದ ಹೂಡಿಕೆ ಮಾರ್ಗವನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ.
ಡಿಮ್ಯಾಟ್ ಖಾತೆ ಎಂಬುದು ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳು ಮತ್ತು ಸೆಕ್ಯುರಿಟಿಗಳನ್ನು ಖರೀದಿಸಲು ಮತ್ತು ಮಾರಲು ಬಳಸುವ ಖಾತೆಯಾಗಿದೆ. ಡಿಮ್ಯಾಟ್ ಖಾತೆಯ ಪೂರ್ಣ ರೂಪ ಡಿಮೆಟೀರಿಯಲೈಸ್ಡ್ ಅಕೌಂಟ್. ಡಿಮ್ಯಾಟ್ ಖಾತೆ ಅಥವಾ ಡಿಮೆಟೀರಿಯಲೈಸ್ಡ್ ಖಾತೆಯು ಷೇರುಗಳು ಮತ್ತು ಸೆಕ್ಯುರಿಟಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇಟ್ಟುಕೊಳ್ಳುವ ಸೌಲಭ್ಯ ಒದಗಿಸುತ್ತದೆ. ಆನ್ಲೈನ್ ಟ್ರೇಡಿಂಗ್ ಸಮಯದಲ್ಲಿ ಷೇರುಗಳನ್ನು ಖರೀದಿಸಲಾಗುತ್ತದೆ ಮತ್ತು ಡಿಮ್ಯಾಟ್ ಖಾತೆಯಲ್ಲಿ ಇಡಲಾಗುತ್ತದೆ.
ಫೋನ್ ಪೇ ಇದು ಮೊಬೈಲ್ ಪಾವತಿ ಪ್ಲಾಟ್ ಫಾರ್ಮ್ ಆಗಿದ್ದು, ಇದರ ಮೂಲಕ ಯುಪಿಐ ಬಳಸಿ ಹಣ ವರ್ಗಾಯಿಸಬಹುದು, ಮೊಬೈಲ್ ರಿಚಾರ್ಜ್ ಮಾಡಬಹುದು, ಯುಟಿಲಿಟಿ ಬಿಲ್ಗಳನ್ನು ಪಾವತಿಸಬಹುದು. ಫೋನ್ ಪೆ ಇದು ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸುವ ಮೂಲಕ ನೀವು ಯುಪಿಐ ಐಡಿಯನ್ನು ಸೃಷ್ಟಿಸಬಹುದು.
ಯುಪಿಐ 24/7 ಸೇವೆಯಾಗಿರುವುದು ವಿಶೇಷವಾಗಿದೆ ಮತ್ತು ಬ್ಯಾಂಕ್ ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿಯೂ ಇದನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಆಪಲ್ ಫೋನ್ಗಳಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಬಳಸಬಹುದು.
ಇದನ್ನೂ ಓದಿ :1200 ಡಾಲರ್ಗಿಂತ ಕಡಿಮೆ ದರದಲ್ಲಿ ಬಾಸ್ಮತಿ ರಫ್ತಿಗೆ ನಿರ್ಬಂಧ; ಅಕ್ರಮ ತಡೆಗೆ ಕೇಂದ್ರದ ನಿಯಮ