ಬೆಂಗಳೂರ/ನವದೆಹಲಿ: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ಬೆಳಗ್ಗೆ 6:00 ಗಂಟೆಗೆ ಹೊಸ ಬೆಲೆಗಳನ್ನು ನಾವು ಕಾಣುತ್ತಿದ್ದೇವೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ತೈಲ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.
ರೂಪಾಯಿ - ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ವಿದ್ಯಮಾನಗಳು, ಇಂಧನದ ಬೇಡಿಕೆ ಇತ್ಯಾದಿ ಅಂಶಗಳಿಂದ ತೈಲ ಬೆಲೆಯಲ್ಲಿ ಏರಿಳಿತವಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಏರಿದಾಗ ಭಾರತದಲ್ಲಿಯೂ ತೈಲ ಬೆಲೆ ಹೆಚ್ಚಾಗುತ್ತದೆ. ಇಂದಿನ ದರಗಳ ಬಗ್ಗೆ ತಿಳಿಯೋದಾದರೆ,
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಇತ್ತೀಚಿನ ಅಬಕಾರಿ ಸುಂಕ ಕಡಿತದ ನಂತರ ಪೆಟ್ರೋಲ್ ಪ್ರತಿ ಲೀಟರ್ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 97.28 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 102.63 ರೂ. ಮತ್ತು ಡೀಸೆಲ್ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.