ಕರ್ನಾಟಕ

karnataka

ETV Bharat / business

ದೇಶದಲ್ಲಿ 7ನೇ ದಿನವೂ ತೈಲ ಬೆಲೆ ಏರಿಕೆ ಶಾಕ್‌; ಪೆಟ್ರೋಲ್‌ 80 ಪೈಸೆ, ಡೀಸೆಲ್‌ 70 ಪೈಸೆ ಹೆಚ್ಚಳ - ದೇಶದಲ್ಲಿ ಇಂದಿನ ತೈಲ ಬೆಲೆಗಳು

ಇಂದೂ ಕೂಡ ಪೆಟ್ರೋಲ್‌ ಲೀಟರ್‌ಗೆ 80 ಪೈಸೆ ಹಾಗೂ ಡೀಸೆಲ್‌ 70 ಪೈಸೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 100ರ ಗಡಿ ದಾಟಿದೆ.

Petrol, Diesel Prices Today: Fuel Prices Rise Again in contry
ದೇಶದಲ್ಲಿ 7ನೇ ದಿನವೂ ತೈಲೆ ಬೆಲೆ ಏರಿಕೆ ಶಾಕ್‌; ಪೆಟ್ರೋಲ್‌ 80 ಪೈಸೆ, ಡೀಸೆಲ್‌ 70 ಪೈಸೆ ಹೆಚ್ಚಳ

By

Published : Mar 29, 2022, 8:16 AM IST

Updated : Mar 29, 2022, 8:58 AM IST

ನವದೆಹಲಿ: ದೇಶದಲ್ಲಿ 7ನೇ ದಿನವಾದ ಇಂದೂ ಕೂಡ ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್‌ ಲೀಟರ್‌ಗೆ 80 ಪೈಸೆ ಹಾಗೂ ಡೀಸೆಲ್‌ 70 ಪೈಸೆ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಕಳೆದೊಂದು ವಾರದಲ್ಲಿ ಲೀಟರ್‌ ಬೆಲೆಯಲ್ಲಿ 4.80 ಪೈಸೆ ಹೆಚ್ಚಳಗೊಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 105.62 ರೂಪಾಯಿ ಇದ್ದು, ಡೀಸೆಲ್‌ ಲೀಟರ್‌ಗೆ 89.70 ರೂಪಾಯಿಗೆ ಮಾರಾಟ ಆಗುತ್ತಿದೆ.

ಇನ್ನು ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.21 ರೂಪಾಯಿ ಹಾಗೂ ಡೀಸೆಲ್‌ 99.41 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‌ ಬೆಲೆ ಕ್ರಮವಾಗಿ 85 ಪೈಸೆ ಮತ್ತು 75 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್‌ 115.04 ರೂ. ಹಾಗೂ ಡೀಸೆಲ್‌ 99.25 ರೂಪಾಯಿಗೆ ತಲುಪಿದೆ.

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪರಿಷ್ಕೃತ ದರಗಳು 105.94 ರೂಪಾಯಿ ಹಾಗೂ ಡೀಸೆಲ್‌ 96.00 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ 109.68 ರೂ.ಹಾಗೂ 94.62 ರೂಪಾಯಿ ಇದೆ. ಹೈದರಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 113.61 ರೂ. ಮತ್ತು ಡೀಸೆಲ್‌ಗೆ 99.84 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:ಸತತ ಆರನೇ ದಿನವೂ ತೈಲ ಬೆಲೆ ಏರಿಕೆ: ಒಂದೇ ವಾರದಲ್ಲಿ ಪೆಟ್ರೋಲ್​ 4 ರೂ. ಹೆಚ್ಚಳ.. ಬೆಂಗಳೂರಲ್ಲಿ ಎಷ್ಟು ಏರಿಕೆ?

Last Updated : Mar 29, 2022, 8:58 AM IST

ABOUT THE AUTHOR

...view details