ಹೈದರಾಬಾದ್:ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಗಳ ಬಳಿಕ ಪ್ರತಿನಿತ್ಯ ಲೀಟರ್‌ಗೆ 80 ಪೈಸೆ ಏರಿಕೆಯಾಗ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ತೈಲ ದರದ ಬಗ್ಗೆ ಪ್ರತಿದಿನ ಗ್ರಾಹಕರಿಗೆ ಗೊಂದಲವಿರುತ್ತದೆ. ಹೀಗಾಗಿ, ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಳಿತದ ಮಾಹಿತಿ ಇಲ್ಲಿದೆ.
ಸರ್ಕಾರಿ ತೈಲ ಕಂಪನಿಗಳ ಮಾಹಿತಿ ಪ್ರಕಾರ ಇಂದಿನ ತೈಲ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 105.12 ರೂ., ಡಿಸೇಲ್ 96.67ರೂ., ಇದೆ. ಮುಂಬೈನಲ್ಲಿ ಪೆಟ್ರೋಲ್ 120.51ರೂ. ಇದ್ದು, ಡೀಸೆಲ್ 104.77 ರೂ. ಆಗಿದೆ. ತಮಿಳುನಾಡಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 111.09 ರೂ. ಹಾಗೂ ಡೀಸೆಲ್ 94.79 ರೂ. ಇದೆ.