ಕರ್ನಾಟಕ

karnataka

ETV Bharat / business

9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್​​​- ಡೀಸೆಲ್​ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ದರ?

ನಿತ್ಯವೂ ಪೆಟ್ರೋಲ್​ - ಡೀಸೆಲ್​ ಬೆಲೆ ಏರಿಕೆ ಆಗುತ್ತಲೇ ಇದೆ. 9 ದಿನದಲ್ಲಿ ಇಂದು 8ನೇ ಬಾರಿಗೆ ಪೆಟ್ರೋಲ್​ ಬೆಲೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಇಂದು ಲೀಟರ್​​​ಗೆ 30 ಪೈಸೆಗಿಂತ ಅಧಿಕವಾಗಿದೆ. ನಿನ್ನೆ ಲೀಟರ್​ಗೆ 105.62 ಪೈಸೆ ಇದ್ದದ್ದು ಇಂದು 105.94 ಪೈಸೆಗೆ ಏರಿಕೆ ಕಂಡಿದೆ. ಅಂದರೆ ಕಳೆದ ಒಂಬತ್ತು ದಿನಗಳಲ್ಲಿ ಬರೋಬ್ಬರಿ 5.60 ರೂ ಏರಿಕೆ ಕಂಡಿದೆ.

9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್​​​- ಡೀಸೆಲ್​ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ಬೆಲೆ?
petrol deasil price 8th increase in 9 days

By

Published : Mar 30, 2022, 7:45 AM IST

Updated : Mar 30, 2022, 8:16 AM IST

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದೆ. ಬುಧವಾರ ಅಂದರೆ ಮಾರ್ಚ್ 30, 2022ರಂದು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಒಟ್ಟು 8ನೇ ಬಾರಿಗೆ ದರ ಏರಿಕೆ ಮಾಡಲಾಗಿದೆ. ಈ ಮೂಲಕ ಒಟ್ಟು ಲೀಟರ್‌ಗೆ 5 ರೂ 60 ಪೈಸೆ ಹೆಚ್ಚಳ ಮಾಡಲಾಗಿದೆ.

ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮಕ್ಕೆ ತೈಲ ಕಂಪನಿಗಳು ಅಂತ್ಯ ಹಾಡಿ, ನಿತ್ಯವೂ 70-80 ಪೈಸೆಯಷ್ಟು ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಪ್ರಾರಂಭಿಸಿವೆ. ಇದು ಯಾವಾಗ ಮುಗಿಯುತ್ತೋ ಗೊತ್ತಿಲ್ಲ.

ಮೊದಲ ನಾಲ್ಕು ದಿನ ಪ್ರತಿ ದಿನ 80 ಪೈಸೆ ಹೆಚ್ಚಳ ಮಾಡಿದ್ದರೆ, ಈಗ ನಿತ್ಯ 40- 50 ಪೈಸೆ ಹೆಚ್ಚಳ ಮಾಡಲಾಗುತ್ತಿದೆ. ಒಟ್ಟಾರೆ ಮಾರ್ಚ್​ 22 ರಿಂದ ಇಲ್ಲಿವರೆಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5.60 ರೂ. ಹೆಚ್ಚಳ ಮಾಡಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 100.21 ರಿಂದ 101.01 ರೂ ಆಗಿದ್ದರೆ, ಡೀಸೆಲ್ ದರಗಳು ಲೀಟರ್‌ಗೆ ರೂ 91.47 ರಿಂದ ರೂ 92.27 ಕ್ಕೆ ಏರಿಕೆ ಕಂಡಿವೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 115.88 ಮತ್ತು 100.10 ರೂ. ಇದ್ದರೆ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 106.69 ರೂ ಮತ್ತು ಡೀಸೆಲ್ ಬೆಲೆ 96.76 ರೂ ಗೆ ಮಾರಾಟ ಮಾಡಲಾಗುತ್ತಿದೆ. ಕೋಲ್ಕತ್ತಾದಲ್ಲಿ ಈಗ ಪೆಟ್ರೋಲ್ ಬೆಲೆ 110.52 ರೂ. ಮತ್ತು ಡೀಸೆಲ್ ಬೆಲೆ 95.42 ರೂ. ಆಗಿದೆ.

ಬೆಂಗಳೂರಿನಲ್ಲಿ ಬೆಲೆ ಎಷ್ಟು?:ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆ ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ಇದು ಬದಲಾಗುತ್ತಾ ಸಾಗುತ್ತದೆ. ನಿತ್ಯವೂ ಪೆಟ್ರೋಲ್​ - ಡೀಸೆಲ್​ ಬೆಲೆ ಏರಿಕೆ ಆಗುತ್ತಲೇ ಇದೆ. 9 ದಿನದಲ್ಲಿ ಇಂದು 8ನೇ ಬಾರಿಗೆ ಪೆಟ್ರೋಲ್​ ಬೆಲೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಇಂದು ಲೀಟರ್​​​ಗೆ 30 ಪೈಸೆಗಿಂತ ಅಧಿಕವಾಗಿದೆ. ನಿನ್ನೆ ಲೀಟರ್​ಗೆ 105.62 ರೂ. ಇದ್ದದ್ದು ಇಂದು 105.94 ರೂ. ಏರಿಕೆ ಕಂಡಿದೆ. ಅಂದರೆ ಕಳೆದ ಒಂಬತ್ತು ದಿನಗಳಲ್ಲಿ ಬರೋಬ್ಬರಿ 5.60 ರೂ ಹೆಚ್ಚಳವಾದಂತಾಗಿದೆ.

ಕ್ರಮ ಸಮರ್ಥಿಸಿಕೊಂಡಿರುವ ವಿತ್ತ ಸಚಿವೆ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ:ಶ್ರೀನಗರದಲ್ಲಿ ಬೆಳ್ಳಂ ಬೆಳಗ್ಗೆ ಸೇನೆ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

Last Updated : Mar 30, 2022, 8:16 AM IST

ABOUT THE AUTHOR

...view details