ಹೈದರಾಬಾದ್: ವೈದ್ಯ ಕ್ಷೇತ್ರವನ್ನು ಆಯ್ಜೆ ಮಾಡಿಕೊಳ್ಳುವುದು ಅನೇಕರ ಕನಸು. ನೀಟ್ ಪರೀಕ್ಷೆ ಬರೆಯುವ ಮೂಲಕವೇ ನೀವು ರೋಗಿಗಳ ಸೇವೆ ಮಾಡಬೇಕು ಎಂದಿಲ್ಲ. ಅನೇಕ ಇತರ ಮಾರ್ಗಗಳಿದ್ದು, ಅವುಗಳ ಮೂಲಕ ವೈದ್ಯ ವೃತ್ತಿ ನಿರ್ವಹಿಸಬಹುದು. ವೈದ್ಯರು ರೋಗಿಯನ್ನು ತಪಾಸಣೆ ಮಾಡಿದರೂ, ಇತರ ಕೆಲವು ತಜ್ಞರು ಅವರಿಗೆ ಹಲವು ವಿಧದಲ್ಲಿ ಸಹಾಯ ಮಾಡುತ್ತದೆ. ಅಂತಹವರಿಗೆ ಸದ್ಯ ಬೇಡಿಕೆ ಹೆಚ್ಚಿದೆ. ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಆಸಕ್ತಿ ಹೊಂದಿರುವವರು ಈ ವೃತ್ತಿಯನ್ನು ತಿಳಿಯುವುದು ಅವಶ್ಯ.
ಪ್ರತಿವರ್ಷ ದೇಶದಲ್ಲಿ 18 ರಿಂದ 20 ಲಕ್ಷ ಮಂದಿ ನೀಟ್ ಪರೀಕ್ಷೆ ಬರೆಯುತ್ತಾರೆ. ಆದರೆ, ಇದರಲ್ಲಿ ಆಯ್ಕೆ ಆಗಿ ಕಾಲೇಜು ಸೇರುವ ಮಂದಿ ಕೇವಲ 7 ರಿಂದ 8 ಪ್ರತಿಶತ ಮಂದಿ. ಉಳಿದವರ ಕಥೆ ಏನು ಆಗ? ಇದೇ ಕಾರಣದಿಂದ ಎಂಬಿಬಿಎಸ್ ಅಥವಾ ಬಿಡಿಎಸ್ ಹೊರತುಪಡಿಸಿ ಅನೇಕ ವಿಧದ ವೈದ್ಯಕೀಯ ಕೋರ್ಸ್ಗಳು ಲಭ್ಯವಿದೆ. ಈ ಕೋರ್ಸ್ಗಳಿಗೆ ನೀಟ್ ಬರೆಯದೇ ಸೇರಬಹುದಾಗಿದ್ದು, ಗೌರವಾನ್ವಿತ ಹುದ್ದೆ ಜೊತೆಗೆ ಉತ್ತಮ ವೇತನವನ್ನು ಪಡೆಯಬಹುದಾಗಿದೆ.
ಬಿಎಸ್ಸಿ ನರ್ಸಿಂಗ್: ವೈದ್ಯರ ಬಳಿಕ ಹೆಚ್ಚು ಪ್ರಮಾಣಿತ ಪದವಿ ಇದಾಗಿದೆ. ರೋಗಿಗಳ ಸೇವೆಯಲ್ಲಿ ದಾದಿಯರ ಪಾತ್ರ ಅಪಾರ. ನಾಲ್ಕು ವರ್ಷದ ಯುಜಿ ಕೋರ್ಸ್ ಇದಾಗಿದ್ದು, ವೈದ್ಯರಿಗೆ ಎಲ್ಲ ರೀತಿಯ ಬೆಂಬವ ನೀಡುವ ತರಬೇತಿ ನೀಡಲಾಗುವುದು. ಐಸಿಯು, ಸಿಸಿಯು, ಇಆರ್ ಮತ್ತು ಒಟಿಯಂತಹ ಹಲವು ವಿಭಾಗದಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಈ ಕೋರ್ಸ್ ಪೂರೈಸುವ ಮೂಲಕ ಸ್ಟಾಫ್ ನರ್ಸ್, ರಿಜಿಸ್ಟ್ರೇರ್ಡ್ ನರ್ಸ್ ಅಥವಾ ನರ್ಸ್ ಶಿಕ್ಷಕರು ಆಗಬಹುದು.
ಬಿ ಫಾರ್ಮಸಿ: ನಾಲ್ಕು ವರ್ಷದ ಪದವಿ ಕೂರ್ಸ್ ಇದಾಗಿದ್ದು, ಫಾರ್ಮಾಸ್ಯಟಿಕಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರು ಆಯ್ಕೆ ಮಾಡಬಹುದು. ಸುರಕ್ಷತೆ, ಆವಿಷ್ಕಾರ, ವೈದ್ಯಕೀಯ ರಸಾಯನಶಾಸ್ತ್ರ, ಇಂಡಸ್ಟ್ರಿಯಲ್ ಫಾರ್ಮಸಿ ಮತ್ತು ಕ್ಲಿನಿಕಲ್ ಪ್ರಾಕ್ಟ್ರಿಸ್ಗಳನ್ನು ಈ ಕೋರ್ಸ್ ಅಡಿ ಅಧ್ಯಯನ ಮಾಡಬಹುದು. ಇದರಲ್ಲಿ ಡಿಪ್ಲೊಮಾ ಪದವಿ ಕೂಡ ಲಭ್ಯವಿದೆ. ಈ ಪದವಿ ಪೂರ್ಣಮಾಡಿರುವ ಅಭ್ಯರ್ಥಿಗಳು ಕೆಮಿಕಲ್ ಟೆಕ್ನಿಷಿಯನ್, ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಫಾರ್ಮಸಿಸ್ಟ್ ಆಗಿ ಕಾರ್ಯ ನಿರ್ವಹಿಸಬಹುದು.
ಪಿಜಿಯೋಥೆರಪಿ: ಇತ್ತೀಚಿನ ದಿನದಲ್ಲಿ ಬಹು ಬೇಡಿಕೆಯ ಹೊಂದಿರುವ ಕ್ಷೇತ್ರ ಇದಾಗಿದೆ. ವಿವಿಧ ಕಾರಣಗಳಿಂದ ಹಾನಿಗೊಳಗಾದ ದೇಹದ ಭಾಗಗಳ ಚಲನೆಯನ್ನು ಪುನಃಸ್ಥಾಪಿಸುವಲ್ಲಿ ಭೌತಚಿಕಿತ್ಸೆಯು ಪ್ರಮುಖವಾಗಿದೆ. ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತು ಅವರ ಹಿಂದಿನ ಜೀವನವನ್ನು ಮರಳಿ ಪಡೆಯಲು ಸಹಾಯ ಮಾಡುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಆರೋಗ್ಯ - ಫಿಟ್‌ನೆಸ್ ಕ್ಲಿನಿಕ್‌ಗಳು, ವಿಶೇಷ ಶಾಲೆಗಳು ಮತ್ತು ಕೈಗಾರಿಕಾ ಆರೋಗ್ಯ ಕ್ಷೇತ್ರಗಳಲ್ಲಿ ಭೌತಚಿಕಿತ್ಸಕರಾಗಿ ಉದ್ಯೋಗಗಳನ್ನು ನಿರೀಕ್ಷಿಸಬಹುದು. ನೀವು ವರ್ಷಕ್ಕೆ ಸರಾಸರಿ ರೂ.3 ರಿಂದ ರೂ.7 ಲಕ್ಷ ಗಳಿಸಬಹುದು.
ಬಿಎಸ್ಸಿ- ಬಯೋಟೆಕ್ನಾಲಾಜಿ: ಇದು ಮೂರು ವರ್ಷದ ಪದವಿ ಆಗಿದ್ದು. ಆಣ್ವಿಕ ಮತ್ತು ಜೀವರಸಾಯನಶಾಸ್ತ್ರದಲ್ಲಿ ಪರಿಣತಿ ಪಡೆಯಬಹುದು. ಇದನ್ನು ಪೂರ್ಣ ಮತ್ತು ಅಲ್ಪ ಸಮಯದಲ್ಲಿ ಕಲಿಯಬಹುದಾಗಿದೆ. ಇದರಲ್ಲಿ ದೂರ ಶಿಕ್ಷಣವೂ ಲಭ್ಯವಿದೆ. ಸಂಶೋಧನಾ ಯೋಜನೆಗಳಲ್ಲಿ ಬಳಸಬಹುದಾದ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯಬಹುದು. ನೈಸರ್ಗಿಕ ರೀತಿಯಲ್ಲಿ ಜೀವಶಾಸ್ತ್ರ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕೃಷಿ, ಫಾರ್ಮಾ, ಆಹಾರ, ಜೀನೋಮಿಕ್ಸ್ ಮತ್ತು ರಸಾಯನಶಾಸ್ತ್ರದಂತಹ ವಿವಿಧ ಕ್ಷೇತ್ರಗಳನ್ನು ಪ್ರವೇಶಿಸಬಹುದು. ಬಯೋಕೆಮಿಸ್ಟ್, ಎಪಿಡೆಮಿಯಾಲಜಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್‌ನಂತಹ ಉದ್ಯೋಗಗಳಿವೆ