ಹೈದರಾಬಾದ್: ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಶೂನ್ಯ ವೆಚ್ಚದ ಇಎಂಐ ಪ್ರೀಮಿಯಂ ಅನ್ನು ಬಡ್ಡಿದರವಿಲ್ಲದೇ ಖರೀದಿಸುವ ನಿಮ್ಮ ಬಯಕೆಯನ್ನು ಈಡೇರಿಸುತ್ತದೆ. ನೀವು ದುಬಾರಿ ಸ್ಮಾರ್ಟ್ ಟಿವಿ ಅಥವಾ ಪ್ರೀಮಿಯಂ ಮೊಬೈಲ್ ಫೋನ್ ಖರೀದಿಸಲು ಹಣದ ಅಗತ್ಯವಿಲ್ಲ. ಆದರೆ ಈ ಸೇವೆಯ ಅಡಿ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ನೀಡಲಾಗುವುದಿಲ್ಲ ಎಂಬುದೇ ಸಮಸ್ಯೆ.
ಶೂನ್ಯ ವೆಚ್ಚದ ಇಎಂಐ ಮೂಲಕ ವಸ್ತುಗಳನ್ನು ಖರೀದಿಸುವಾಗ ಅಲ್ಲಿ ಅವರು ವಸ್ತುಗಳ ಮೇಲೆ ರಿಯಾಯಿತಿಗಳನ್ನು ನಿರಾಕರಿಸುತ್ತಾರೆ ಮತ್ತು ಉತ್ಪನ್ನದ ಬೆಲೆಯನ್ನು ಬಡ್ಡಿದರದ ಮೂಲಕ ಸರಿ ಹೊಂದಿಸುತ್ತಾರೆ. ಆಸಕ್ತ ಗ್ರಾಹಕರು ಕಂತುಗಳ ಮೂಲಕ ಪಾವತಿಸುವ ಅನುಕೂಲವನ್ನು ಪರಿಗಣಿಸಿ ಈ ಆಯ್ಕೆಯನ್ನು ಮಾಡಬಹುದು.
ಹಬ್ಬದ ಸೀಸನ್ ಮತ್ತು ವಿಶೇಷ ಸಂದರ್ಭಗಳ ವ್ಯಾಪಾರಗಳಲ್ಲಿ ಸಾಕಷ್ಟು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಇದಕ್ಕೆ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ವೇಗದ ಗತಿಯಲ್ಲಿ ಡಿಜಿಟಲೈಸ್ಡ್ ಜೀವನವನ್ನು ಹೊಂದಲು ಪ್ರತಿಯೊಬ್ಬರೂ ಹೈಟೆಕ್ ಸರಕುಗಳಿಗೆ ಅಪ್ಗ್ರೇಡ್ ಆಗಲು ಪ್ರಯತ್ನಿಸುತ್ತಿದ್ದಾರೆ.
ಯಾವೆಲ್ಲ ಅಂಶಗಳನ್ನು ನೀವು ತಿಳಿದುಕೊಳ್ಳಬೇಕು:ಮೊದಲಿಗೆ ನಾವು ಕೆಲವನ್ನು ಪಡೆಯಬೇಕಾದರೆ ಕೆಲವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು. ಒಟ್ಟು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದಾಗ ಸಾಮಾನ್ಯವಾಗಿ ರಿಯಾಯಿತಿಗಳನ್ನು ನೀಡಲಾಗುತ್ತದೆ. ಶೂನ್ಯ ವೆಚ್ಚದ ಇಎಂಐ ಸೌಲಭ್ಯವನ್ನು ಬಳಸಬೇಕಾದರೆ, ನಾವು ರಿಯಾಯಿತಿಗಳನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು.
ಉದಾಹರಣೆಗೆ: 5,000 ರೂ ವಸ್ತುವಿಗೆ 10 ಪ್ರತಿಶತ ರಿಯಾಯಿತಿಯಲ್ಲಿ ಮಾರಾಟಕ್ಕಿದ್ದರೆ ನಾವು ಅ ವಸ್ತುವನ್ನು 4,500 ರೂ. ರಿಯಾಯಿತಿಯಲ್ಲಿ ಪಡೆಯಲು ಸಾಧ್ಯವಿಲ್ಲ ಅಥವಾ ಇತರ ಯಾವುದೇ ಪ್ರಯೋಜನವನ್ನು ಶೂನ್ಯ ವೆಚ್ಚದ ಇಎಂಐ ಅಡಿ ನೀಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ನಾವು 20 ಪ್ರತಿಶತದಷ್ಟು ವೆಚ್ಚವನ್ನು ಹೆಚ್ಚುವರಿಯಾಗಿ ಪಾವತಿಸಿದಂತೆ:ಕಂಪನಿಗಳು ಕೆಲವು ರೀತಿಯಲ್ಲಿ ತಮ್ಮ ವೆಚ್ಚವನ್ನು ಮರುಪಡೆಯುತ್ತವೆ. ಉದಾ: ಒಂದು ವಸ್ತುವಿನ ಉತ್ಪಾದನಾ ವೆಚ್ಚ 5,000 ರೂ. ಆಗಿದ್ದರೆ ಅದನ್ನು ಖರೀದಿಸಿದ ವ್ಯಕ್ತಿ ಪ್ರತಿ ತಿಂಗಳೂ 500 ರೂ ನಂತೆ 12 ತಿಂಗಳು ಇಎಂಐ ಪಾವತಿಸಬೇಕಾಗುತ್ತದೆ. ಇದರರ್ಥ ನಾವು 20 ಪ್ರತಿಶತದಷ್ಟು ವೆಚ್ಚವನ್ನು ಹೆಚ್ಚುವರಿಯಾಗಿ ಪಾವತಿಸಿದಂತೆ. ನಮಗೆ 1,000 ರೂ. ಹೆಚ್ಚಾಗಿ 5000 ರೂ ವಸ್ತುವಿನ ಬೆಲೆ ರೂ. 6,000 ರೂ ಆಗುತ್ತದೆ.
ಇದನ್ನೇ ಅವರು ಶೂನ್ಯ ವೆಚ್ಚದ ಇಎಂಐ ಎಂದು ಹೇಳುವುದು. ಅವರು ರಿಯಾಯಿತಿಗಳನ್ನು ನಿರಾಕರಿಸುವ ಮೂಲಕ ಅಥವಾ ಸಂಸ್ಕರಣಾ ಶುಲ್ಕವನ್ನು ಸಂಗ್ರಹಿಸುವ ಮೂಲಕ ತಮ್ಮ ನಷ್ಟವನ್ನು ಮರು ಭರ್ತಿ ಮಾಡಿಕೊಳ್ಳುತ್ತಾರೆ.